ಕೊಲೊಂಬೊ : ಬಿಸಿಸಿಐ ಮುಂಬರುವ ಟಿ20 ವಿಶ್ವಕಪ್‌ಗೆ ಧೋನಿಯನ್ನು ಮಾರ್ಗದರ್ಶಕನಾಗಿ ಆಯ್ಕೆ ಮಾಡುತ್ತಿದ್ದಂತೆ ಶ್ರೀಲಂಕಾ ಕೂಡ ಇದೇ ಮಾದರಿಯಲ್ಲಿ ಐಪಿಎಲ್ನಲ್ಲಿ ಮುಂಬೈ ತಂಡದ ಯಶಸ್ವಿ ಕೋಚ್ ಆಗಿರುವ ಮಹೇಲಾ ಜಯವರ್ದನೆ ಅವರನ್ನು ತಂಡದ ಸಲಹೆಗಾರನಾಗಿ ನೇಮಕ ಮಾಡಿಕೊಂಡಿದೆ.
ಓಮನ್ ಮತ್ತು ಯುಎಇಯಲ್ಲಿ ಟಿ20 ವಿಶ್ವಕಪ್ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿದೆ. ಶ್ರೀಲಂಕಾ ತಂಡ ಈ ಬಾರಿ ಅರ್ಹತಾ ಟೂರ್ನಿಯ ಮೂಲಕ ವಿಶ್ವಕಪ್‌ಗೆ ಪ್ರವೇಶ ಪಡೆಯಬೇಕಿದೆ. ಹಾಗಾಗಿ, ಮಾಜಿ ಕ್ರಿಕೆಟಿಗ ಜಯವರ್ದನೆ ಅವರನ್ನು ಸಲಹೆಗಾರನಾಗಿ ತಂಡಕ್ಕೆ ಸೇರಿಸಿಕೊಂಡಿದೆ.
ಸೀನಿಯರ್ ತಂಡದ ಜವಾಬ್ದಾರಿ ಮುಗಿಯುತ್ತಿದ್ದಂತೆ ಜಯವರ್ದನೆಯನ್ನು ವೆಸ್ಟ್ ಇಂಡಿಸ್ನಲ್ಲಿ ಮುಂದಿನ ವರ್ಷ ನಡೆಯಲಿರುವ ಕಿರಿಯರ ವಿಶ್ವಕಪ್ಗಾಗಿ ಶ್ರೀಲಂಕಾ ಅಂಡರ್ 19 ತಂಡಕ್ಕೆ ಸಲಹೆಗಾರ ಮತ್ತು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.
ರಾಷ್ಟ್ರೀಯ ತಂಡದ ಪರ ಇವರ ಅವಧಿ ಕೇವಲ 7 ದಿನಗಳು ಮಾತ್ರವಿರುತ್ತದೆ. ಅಕ್ಟೋಬರ್ 16ರಿಂದ 23ರವರಗೆ ಇವರು ತಂಡದ ಜೊತೆ ಕಾರ್ಯನಿರ್ವಹಿಸಲಿದ್ದಾರೆ. ನಂತರ ಅಂಡರ್ 19 ತಂಡದ ಜೊತೆಗೆ 5 ತಿಂಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಪ್ರಸ್ತುತ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿರುವ ಮಹೇಲಾ ಜಯವರ್ದನೆ ಐಪಿಎಲ್ ಮುಗಿದ ಬಳಿಕ ಶ್ರೀಲಂಕಾ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಇದನ್ನು ಓದಿ:ಭವಿಷ್ಯದಲ್ಲಿ ಭಾರತ-ಇಂಗ್ಲೆಂಡ್ ಸರಣಿ ನಡೆದ್ರೂ ನಾವು ಬರಲ್ಲ ಅಂತಿದ್ದಾರೆ; ಹಾಗಾದರೆ ಹೀಗೆ ಮಾಡಿ ಎಂದ ಫರೋಖ್