ETV Bharat / sports

ಶ್ರೀಲಂಕಾ ಏಕದಿನ ಸರಣಿಯಿಂದ ವೇಗಿ ಜಸ್ಪ್ರೀತ್​ ಬೂಮ್ರಾ ಔಟ್​

ಶ್ರೀಲಂಕಾ ವಿರುದ್ಧ ಏಕದಿನ ಸರಣಿ- ವೇಗಿ ಜಸ್ಪ್ರೀತ್​ ಬೂಮ್ರಾ ಔಟ್​- ಸರಣಿಯಿಂದ ಭಾರತದ ವೇಗಿ ಹೊರಕ್ಕೆ- ಗಾಯದಿಂದ ಚೇತರಿಸಿಕೊಳ್ಳದ ಬೂಮ್ರಾ- ನಾಳೆ ಗುವಾಹಟಿಯಲ್ಲಿ ಮೊದಲ ಏಕದಿನ

jasprit-bumrah-ruled-out
ಶ್ರೀಲಂಕಾ ಏಕದಿನ ಸರಣಿಯಿಂದ ವೇಗಿ ಜಸ್ಪ್ರೀತ್​ ಬೂಮ್ರಾ ಔಟ್​
author img

By

Published : Jan 9, 2023, 4:27 PM IST

ನವದೆಹಲಿ: ಶ್ರೀಲಂಕಾ ವಿರುದ್ಧ ನಾಳೆಯಿಂದ ಆರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಯಿಂದ ವೇಗಿ ಜಸ್ಪ್ರೀತ್​ ಬೂಮ್ರಾ ಹೊರಬಿದ್ದಿದ್ದಾರೆ. ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಬೂಮ್ರಾರನ್ನು ತಂಡದಿಂದ ಕೈಬಿಡಲಾಗಿದೆ. ಬೂಮ್ರಾ ಸ್ಥಾನಕ್ಕೆ ಯಾರ ಹೆಸರನ್ನೂ ಬಿಸಿಸಿಐ ಸೂಚಿಸಿಲ್ಲ. ಲಂಕಾ ಸರಣಿಗೆ ಈ ಮೊದಲು ತಂಡದ ಘೋಷಣೆ ವೇಳೆ ವೇಗಿಗೆ ಸ್ಥಾನ ನೀಡಲಾಗಿತ್ತು. ನಾಳೆ ಉಭಯ ತಂಡಗಳ ಮಧ್ಯೆ ಗುವಾಹಟಿಯಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಅದಕ್ಕೂ ಮೊದಲು ಬಿಸಿಸಿಐ ಈ ಮಹತ್ತರ ನಿರ್ಧಾರವನ್ನು ಘೋಷಿಸಿದೆ.

ಜಸ್ಪ್ರೀತ್​ ಬೂಮ್ರಾ ಇನ್ನೂ ಸಂಪೂರ್ಣವಾಗಿ ಗಾಯದಿಂದ ಚೇತರಿಕೆ ಕಂಡಿಲ್ಲ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ತಂಡದಿಂದ ಕೈಬಿಡಲಾಗಿದೆ ಎಂದು ಬಿಸಿಸಿಐ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿದೆ. ಆದಾಗ್ಯೂ, ಭಾರತ ತಂಡದ ಹಿರಿಯರ ಆಯ್ಕೆ ಸಮಿತಿಯು ಬುಮ್ರಾ ಅವರ ಬದಲಿ ಆಟಗಾರನನ್ನು ಹೆಸರಿಸಿಲ್ಲ.

ವಿಶ್ವಕಪ್​ನಿಂದಲೂ ಹೊರಬಿದ್ದಿದ್ದ ಬೂಮ್ರಾ: ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ ವೇಳೆ ಭಾರತದ ಪ್ರಮುಖ ವೇಗಿ ಜಸ್ಪ್ರೀತ್ ಬೂಮ್ರಾ ಬೆನ್ನು ನೋವಿನ ಕಾರಣಕ್ಕಾಗಿ ಹೊರಬಿದ್ದಿದ್ದರು. ಅಂದಿನಿಂದಲೂ ಕ್ರಿಕೆಟ್​ನಿಂದ ದೂರವುಳಿದಿದ್ದಾರೆ. ವಿಶ್ವಕಪ್​ಗೂ ಮೊದಲು ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಬೂಮ್ರಾ ಮೊದಲ ಪಂದ್ಯವಾಡಿದ್ದರು. ಬಳಿಕ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ​ಬೂಮ್ರಾ ಸತತವಾಗಿ ಆರು ತಿಂಗಳಿನಿಂದ ಕ್ರಿಕೆಟ್​ನಿಂದ ದೂರವಿದ್ದಾರೆ. ಕಾಲಿಗೆ ಗಾಯ ಮಾಡಿಕೊಂಡಿದ್ದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ಕೂಡ ಸರಣಿಗೆ ಆಯ್ಕೆಯಾಗಿಲ್ಲ.

ಏಕದಿನ ಸರಣಿ ಪಂದ್ಯಗಳ ಪಟ್ಟಿ: ಜನವರಿ 10 ರಂದು ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ತನ್ನ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಬಳಿಕ ಜನವರಿ 12 ರಂದು ಕೋಲ್ಕತ್ತಾದಲ್ಲಿ 2ನೇ, ತಿರುವನಂತಪುರಂನಲ್ಲಿ ಮೂರನೇ ಮತ್ತು ಕೊನೆಯ ಪಂದ್ಯ ನಡೆಯಲಿದೆ. ನ್ಯೂಜಿಲ್ಯಾಂಡ್​ ಮತ್ತು ಶ್ರೀಲಂಕಾ ವಿರುದ್ಧದ ಟಿ20, ಏಕದಿನ ಸರಣಿಯಿಂದ ತಂಡದ ನಾಯಕ ರೋಹಿತ್ ಶರ್ಮಾ ಅವರು ಹೊರಗುಳಿದಿದ್ದರು. ಈ ಸರಣಿಗೆ ವಾಪಸ್​ ಆಗಿದ್ದು, ಮುಂದಾಳತ್ವ ವಹಿಸಲಿದ್ದಾರೆ. ಈ ಮೂಲಕ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆಗಳನ್ನು ಅಧಿಕೃತವಾಗಿ ಪ್ರಾರಂಭಿಸಲಿದೆ. ಅವರ ಜೊತೆಗೆ ಇನ್ನೂ ಅನೇಕ ಅನುಭವಿ ಆಟಗಾರರು ಮತ್ತೆ ತಂಡವನ್ನು ಸೇರಿಕೊಂಡಿದ್ದಾರೆ.

ಶ್ರೀಲಂಕಾ ವಿರುದ್ಧ ಭಾರತ ಕೊನೆಯ ಏಕದಿನ ಸರಣಿಯನ್ನು ಜುಲೈ 2021ರಲ್ಲಿ ಶಿಖರ್ ಧವನ್ ಅವರ ನಾಯಕತ್ವದಲ್ಲಿ ದ್ವೀಪ ರಾಷ್ಟ್ರಕ್ಕೆ ಪ್ರಯಾಣ ಬೆಳೆಸಿ ಆಡಿತ್ತು. ಭಾರತ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು. ತವರಿನಲ್ಲಿ ನಡೆಯುವ ಮೂರು ಪಂದ್ಯಗಳ ಸರಣಿಯನ್ನೂ ಉಳಿಸಿಕೊಳ್ಳಲು ತಂಡ ಸಜ್ಜಾಗಿದೆ.

ಟಿ20 ಸರಣಿ ಸೋಲಿಗೆ ಸೇಡು: ಇದಕ್ಕೂ ಮೊದಲು ನಡೆದ ಟಿ20 ಸರಣಿಯನ್ನು ಭಾರತ 2-1 ರಿಂದ ಜಯಿಸಿದೆ. ಮೊದಲ ಪಂದ್ಯವನ್ನು ಅಂತಿಮ ಹಂತದಲ್ಲಿ ಸೋತಿದ್ದ ಲಂಕಾ, 2ನೇ ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಮೂರನೇ ಮತ್ತು ಕೊನೆಯ ಪಂದ್ಯವನ್ನು ಗೆದ್ದು ಮೊದಲ ಬಾರಿಗೆ ಭಾರತ ನೆಲದಲ್ಲಿ ಸರಣಿ ಗೆಲುವಿನ ಉತ್ಸಾಹದಲ್ಲಿ ತಂಡಕ್ಕೆ ಭಾರತದ ಸೂರ್ಯಕುಮಾರ್​ ಯಾದವ್​ ನೀರೆರಚಿದರು.

ಭರ್ಜರಿ ಶತಕ ಬಾರಿಸಿ ಭಾರತ 200 ಅಧಿಕ ಬೃಹತ್​ ಮೊತ್ತ ಪೇರಿಸುವಂತೆ ನೋಡಿಕೊಂಡಿದ್ದರು. ಲಂಕಾ ಪಡೆ ಮೊತ್ತವನ್ನು ದಾಟಲಾಗದೇ ಸೋಲು ಕಂಡಿತ್ತು. ಇದರಿಂದ ಸರಣಿ ತಪ್ಪಿಸಿಕೊಂಡಿತ್ತು. ಇದೀಗ ಏಕದಿನ ಸರಣಿಯನ್ನು ಗೆದ್ದು ಮುಯ್ಯಿ ತೀರಿಸಿಕೊಳ್ಳಲು ಹವಣಿಸುತ್ತಿದೆ.

ಪರಿಷ್ಕೃತ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ (ಉಪ ನಾಯಕ), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಕುಲದೀಪ್ ಯಾದವ್, ಅಕ್ಸರ್ ಪಟೇಲ್, ಮೊಹಮದ್​ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.

ಓದಿ: ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಸೇರಿದ ಬುಮ್ರಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.