ETV Bharat / sports

ಐಸಿಸಿ ರ‍್ಯಾಂಕಿಂಗ್‌ .. ಒಂದು ಸ್ಥಾನ ಏರಿಕೆ ಕಂಡ ಬುಮ್ರಾ, ಕೊಹ್ಲಿ-ರೋಹಿತ್ ಶ್ರೇಯಾಂಕವೆಷ್ಟು?

author img

By

Published : Apr 6, 2022, 5:33 PM IST

ಟೆಸ್ಟ್​ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (8) ಮತ್ತು ವಿರಾಟ್​ ಕೊಹ್ಲಿ(10) ಅಗ್ರ 10 ರಲ್ಲಿರುವ ಭಾರತೀಯ ಬ್ಯಾಟರ್​ಗಳಾಗಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್​(892), ಸ್ಟೀವ್​ ಸ್ಮಿತ್​(845), ಕೇನ್ ವಿಲಿಯಮ್ಸನ್​(844), ಜೋ ರೂಟ್​(843) ಮತ್ತು ಬಾಬರ್ ಅಜಮ್(815) ಟಾಪ್​ 5ರಲ್ಲಿದ್ದಾರೆ.

ICC test Ranking
ಐಸಿಸಿ ಟೆಸ್ಟ್​ ರ‍್ಯಾಂಕಿಂಗ್‌

ದುಬೈ: ಐಸಿಸಿ ಬುಧವಾರ ಏಕದಿನ, ಟೆಸ್ಟ್​ ಮತ್ತು ಟಿ20 ಶ್ರೇಯಾಂಕ ಪ್ರಕಟಿಸಿದ್ದು, ಟೆಸ್ಟ್ ಬೌಲಿಂಗ್​ ಶ್ರೇಯಾಂಕದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಸ್ಪಿನ್ನರ್ ಅಶ್ವಿನ್​ 2ನೇ ಶ್ರೇಯಾಂಕದಲ್ಲಿ ಮುಂದುವರಿದ್ದಾರೆ.

ಟೆಸ್ಟ್​ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (8) ಮತ್ತು ವಿರಾಟ್​ ಕೊಹ್ಲಿ(10) ಅಗ್ರ 10 ರಲ್ಲಿರುವ ಭಾರತೀಯ ಬ್ಯಾಟರ್​ಗಳಾಗಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್​(892), ಸ್ಟೀವ್​ ಸ್ಮಿತ್​(845), ಕೇನ್ ವಿಲಿಯಮ್ಸನ್​(844), ಜೋ ರೂಟ್​(843) ಮತ್ತು ಬಾಬರ್ ಅಜಮ್(815) ಟಾಪ್​ 5ರಲ್ಲಿದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್​(901), ಅಶ್ವಿನ್(850), ಜಸ್ಪ್ರೀತ್ ಬಮ್ರಾ(830), ಶಾಹೀನ್ ಅಫ್ರಿದಿ(827), ಕಗಿಸೊ ರಬಾಡ(827) ಅಗ್ರ 5ರಲ್ಲಿದ್ದಾರೆ.

🔸 Shaheen Afridi continues to climb
🔸 Imam-ul-Haq makes significant gains

Pakistan players make major movements in the @MRFWorldwide ICC Men's Player Rankings for ODIs and Tests after #PAKvAUS series 📈

Details 👉 https://t.co/zoY06jyBJ3 pic.twitter.com/dxVyiF78oK

— ICC (@ICC) April 6, 2022

ಆಲ್​ರೌಂಡರ್​ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ (385) ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್​(341) 2ನೇ ಶ್ರೇಯಾಂಕದಲ್ಲಿದ್ದಾರೆ.

ಇನ್ನು ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್​ ಅಜಮ್​(891), ವಿರಾಟ್​ ಕೊಹ್ಲಿ(811) ಮೊದಲೆರಡು ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಿಂಚಿದ ಇಮಾಮ್​ ಉಲ್ ಹಕ್​ 7 ಸ್ಥಾನ ಮೇಲೇರಿ 3ನೇ ರ‍್ಯಾಂಕ್​ಗೆ ಬಡ್ತಿ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ 4 ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್​ ಡಿ ಕಾಕ್​ 5ನೇ ಸ್ಥಾನದಲ್ಲಿ ತಟಸ್ಥರಾಗಿದ್ದಾರೆ.

ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಟ್ರೆಂಟ್​ ಬೌಲ್ಟ್​(726), ಕ್ರಿಸ್ ವೋಕ್ಸ್​(700), ಜೋಶ್​ ಹೇಜಲ್​ವುಡ್​(698) ಅಗ್ರ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಐಪಿಎಲ್​ನಲ್ಲಿ ಶತಕದ ಜಯ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ದುಬೈ: ಐಸಿಸಿ ಬುಧವಾರ ಏಕದಿನ, ಟೆಸ್ಟ್​ ಮತ್ತು ಟಿ20 ಶ್ರೇಯಾಂಕ ಪ್ರಕಟಿಸಿದ್ದು, ಟೆಸ್ಟ್ ಬೌಲಿಂಗ್​ ಶ್ರೇಯಾಂಕದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಒಂದು ಸ್ಥಾನ ಏರಿಕೆ ಕಂಡಿದ್ದಾರೆ. ಸ್ಪಿನ್ನರ್ ಅಶ್ವಿನ್​ 2ನೇ ಶ್ರೇಯಾಂಕದಲ್ಲಿ ಮುಂದುವರಿದ್ದಾರೆ.

ಟೆಸ್ಟ್​ ಬ್ಯಾಟಿಂಗ್ ರ‍್ಯಾಂಕಿಂಗ್​ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ (8) ಮತ್ತು ವಿರಾಟ್​ ಕೊಹ್ಲಿ(10) ಅಗ್ರ 10 ರಲ್ಲಿರುವ ಭಾರತೀಯ ಬ್ಯಾಟರ್​ಗಳಾಗಿದ್ದಾರೆ. ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್​(892), ಸ್ಟೀವ್​ ಸ್ಮಿತ್​(845), ಕೇನ್ ವಿಲಿಯಮ್ಸನ್​(844), ಜೋ ರೂಟ್​(843) ಮತ್ತು ಬಾಬರ್ ಅಜಮ್(815) ಟಾಪ್​ 5ರಲ್ಲಿದ್ದಾರೆ.

ಬೌಲಿಂಗ್ ಶ್ರೇಯಾಂಕದಲ್ಲಿ ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್​(901), ಅಶ್ವಿನ್(850), ಜಸ್ಪ್ರೀತ್ ಬಮ್ರಾ(830), ಶಾಹೀನ್ ಅಫ್ರಿದಿ(827), ಕಗಿಸೊ ರಬಾಡ(827) ಅಗ್ರ 5ರಲ್ಲಿದ್ದಾರೆ.

ಆಲ್​ರೌಂಡರ್​ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ (385) ಅಗ್ರಸ್ಥಾನದಲ್ಲಿದ್ದರೆ, ರವಿಚಂದ್ರನ್ ಅಶ್ವಿನ್​(341) 2ನೇ ಶ್ರೇಯಾಂಕದಲ್ಲಿದ್ದಾರೆ.

ಇನ್ನು ಏಕದಿನ ಶ್ರೇಯಾಂಕದಲ್ಲಿ ಪಾಕಿಸ್ತಾನದ ನಾಯಕ ಬಾಬರ್​ ಅಜಮ್​(891), ವಿರಾಟ್​ ಕೊಹ್ಲಿ(811) ಮೊದಲೆರಡು ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಮಿಂಚಿದ ಇಮಾಮ್​ ಉಲ್ ಹಕ್​ 7 ಸ್ಥಾನ ಮೇಲೇರಿ 3ನೇ ರ‍್ಯಾಂಕ್​ಗೆ ಬಡ್ತಿ ಪಡೆದುಕೊಂಡಿದ್ದಾರೆ. ರೋಹಿತ್ ಶರ್ಮಾ 4 ಮತ್ತು ದಕ್ಷಿಣ ಆಫ್ರಿಕಾದ ಕ್ವಿಂಟನ್​ ಡಿ ಕಾಕ್​ 5ನೇ ಸ್ಥಾನದಲ್ಲಿ ತಟಸ್ಥರಾಗಿದ್ದಾರೆ.

ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಟ್ರೆಂಟ್​ ಬೌಲ್ಟ್​(726), ಕ್ರಿಸ್ ವೋಕ್ಸ್​(700), ಜೋಶ್​ ಹೇಜಲ್​ವುಡ್​(698) ಅಗ್ರ 3 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಐಪಿಎಲ್​ನಲ್ಲಿ ಶತಕದ ಜಯ ಬಾರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.