ದುಬೈ: ಐಸಿಸಿ ವಿಶ್ವಕಪ್ 2023 ರಲ್ಲಿ ವಿಧ್ವಂಸಕ ದಾಳಿ ನಡೆಸುತ್ತಿರುವ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅಕ್ಟೋಬರ್ 2023ರ ಐಸಿಸಿ ಪುರುಷರ ತಿಂಗಳ ಆಟಗಾರ ಪ್ರಶಸ್ತಿಗೆ ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮತ್ತು ನ್ಯೂಜಿಲೆಂಡ್ನ ಬ್ಯಾಟಿಂಗ್ ಆಲ್ರೌಂಡರ್ ರಚಿನ್ ರವೀಂದ್ರ ಅವರೊಂದಿಗೆ ನಾಮನಿರ್ದೇಶನಗೊಂಡಿದ್ದಾರೆ.
2023ರ ವಿಶ್ವಕಪ್ ನಡೆಯುತ್ತಿದ್ದು 10 ದೇಶದ ಆಟಗಾರರು ಮೈದಾನದಲ್ಲಿ ಮಿಂಚುತ್ತಿದ್ದಾರೆ. ಇದರಲ್ಲಿ ಮೂವರು ಆಟಗಾರರು ತಿಂಗಳ ಆಟಗಾರ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಅಕ್ಟೋಬರ್ ಮಾಸದ ಪ್ರಶಸ್ತಿಗೆ ಇರುವ ಮೂವರು ಸ್ಪರ್ಧಿಗಳನ್ನು ಪ್ರಕಟಿಸಿದೆ.
-
Three #CWC23 superstars make the cut 🤩
— ICC (@ICC) November 7, 2023 " class="align-text-top noRightClick twitterSection" data="
Here are the nominees for the ICC Men's Player of the Month award for October ⬇️https://t.co/g8tb5x8CMx
">Three #CWC23 superstars make the cut 🤩
— ICC (@ICC) November 7, 2023
Here are the nominees for the ICC Men's Player of the Month award for October ⬇️https://t.co/g8tb5x8CMxThree #CWC23 superstars make the cut 🤩
— ICC (@ICC) November 7, 2023
Here are the nominees for the ICC Men's Player of the Month award for October ⬇️https://t.co/g8tb5x8CMx
ಬುಮ್ರಾ: ಭಾರತದ ಯಾರ್ಕರ್ ಸ್ಪೆಷಾಲಿಸ್ಟ್, ಸ್ಪೀಡ್ ಸ್ಟಾರ್ ಬುಮ್ರಾ ಕ್ರಿಕೆಟ್ ವಿಶ್ವಕಪ್23ರಲ್ಲಿ ಆರಂಭಿಕ ಓವರ್ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುತ್ತಿದ್ದಾರೆ. ವಿಶ್ವಕಪ್ನಲ್ಲಿ ಭಾರತ ಅಜೇಯವಾಗಿ 8 ಗೆಲುವು ಸಾಧಿಸಿದ್ದು, ಇದರಲ್ಲಿ ಬೌಲರ್ಗಳ ಪಾತ್ರ ಬಹಳ ಪ್ರಮುಖವಾಗಿದೆ. ಬುಮ್ರಾ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ 35 ರನ್‌ಗಳಿಗೆ ಎರಡು ವಿಕೆಟ್‌ಗಳೊಂದಿಗೆ ತಮ್ಮ ಅಭಿಯಾನವನ್ನು ಪ್ರಾರಂಭಿಸಿದರು, ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 39 ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದು ಮಿಂಚಿದ್ದರು. ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 19 ರನ್ ಕೊಟ್ಟು ಎರಡು ವಿಕೆಟ್ ಉರುಳಿಸಿದ್ದರು. ಬುಮ್ರಾ ವಿಶ್ವಕಪ್ನಲ್ಲಿ 15.07 ಸರಾಸರಿಯಲ್ಲಿ 3.91ರ ಎಕಾನಮಿಯಲ್ಲಿ ಬೌಲಿಂಗ್ ಮಾಡುತ್ತಿದ್ದು, 14 ವಿಕೆಟ್‌ಗಳನ್ನು ಪಡೆದಿದ್ದಾರೆ.
ಡಿ ಕಾಕ್: ಕ್ವಿಂಟನ್ ಡಿ ಕಾಕ್ ಈ ವಿಶ್ವಕಪ್ ನಂತರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ನಡೆಯುತ್ತಿರುವ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕ ಎರಡನೇ ಪ್ರಬಲ ತಂಡವಾಗಿದೆ. ಕೊನೆಯ ವಿಶ್ವಕಪ್ನಲ್ಲಿ ಡಿ ಕಾಕ್ ತಮ್ಮ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಒಟ್ಟಾರೆ ಈ ವರ್ಷದ ಟೂರ್ನಿಯಲ್ಲಿ ಅವರ ಬ್ಯಾಟ್ನಿಂದ 4 ಶತಕಗಳು ದಾಖಲಾಗಿವೆ. ಇವರ ಬಿರುಸಿನ ಆರಂಭದ ನೆರವಿನಿಂದ ಹರಿಣಗಳ ತಂಡ 350+ ರನ್ ಗಳಿಸಿದೆ. ವಿಶ್ವಕಪ್ನ 8 ಇನ್ನಿಂಗ್ಸ್ನಲ್ಲಿ 111.33 ಸ್ಟ್ರೈಕ್ರೇಟ್ ಮತ್ತು 68.75 ರ ಸರಾಸರಿಯಲ್ಲಿ 55 ಬೌಂಡರಿ, 18 ಸಿಕ್ಸ್ನ ಸಹಾಯದಿಂದ ಡಿ ಕಾಕ್ 550 ರನ್ ಕಲೆಹಾಕಿದ್ದಾರೆ. ಈ ಹಿಂದೆ 2021ರ ಜೂನ್ನಲ್ಲಿ ಅವರು ಈ ಪ್ರಶಸ್ತಿಗೆ ನಾಮನಿರ್ದೆಶನಗೊಂಡಿದ್ದರು.
- " class="align-text-top noRightClick twitterSection" data="">
ರಚಿನ್ ರವೀಂದ್ರ: ಕಿವೀಸ್ ನಾಡಿನ ಉದಯೋನ್ಮುಖ ಪ್ರತಿಭೆ ರಚಿನ್ ರವೀಂದ್ರ ಅವರ ಕ್ರಿಕೆಟ್ ವಿಶ್ವಕಪ್ 23ರಲ್ಲಿ ಮಿಂಚುತ್ತಿದ್ದಾರೆ. ಈ 23ರ ಹರೆಯದ ಯುವ ಆಟಗಾರ ಈ ವಿಶ್ವಕಪ್ನಲ್ಲಿ 3 ಶತಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಬರಿ ಬ್ಯಾಟಿಂಗ್ನಿಂದ ಅಲ್ಲದೇ ಬೌಲಿಂಗ್ನಲ್ಲೂ ನ್ಯೂಜಿಲೆಂಡ್ ತಂಡಕ್ಕೆ ಆಸರೆ ಆಗುತ್ತಿದ್ದಾರೆ. ವಿಶ್ವಕಪ್ನಲ್ಲಿ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರ ಗಾಯದ ಹಿನ್ನೆಲೆ ತಂಡದಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಕೇನ್ ಸ್ಥಾನವನ್ನು ಯಶಸ್ವಿಯಾಗಿ ರಚಿನ್ ತುಂಬಿದರು.
ಅಹಮದಾಬಾದ್‌ನಲ್ಲಿ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ರಚಿನ್ 96 ಎಸೆತಗಳಲ್ಲಿ 123 ರನ್ ಗಳಿಸಿದರು. ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧದ ಮೊದಲ ದಿನದಾಟದಲ್ಲಿ ನ್ಯೂಜಿಲ್ಯಾಂಡ್ ಒಂಬತ್ತು ವಿಕೆಟ್‌ಗಳ ಜಯ ಸಾಧಿಸಿದೆ. ನಂತರ ಆಸ್ಟ್ರೇಲಿಯ ವಿರುದ್ಧ 116 ರನ್, ನೆದರ್ಲೆಂಡ್ಸ್ (51) ಮತ್ತು ಭಾರತ (75) ವಿರುದ್ಧ ಉತ್ತಮ ಆಟವನ್ನು ಪ್ರದರ್ಶಿಸಿದ್ದಾರೆ. ವಿಶ್ವಕಪ್ನಲ್ಲಿ ಒಟ್ಟಾರೆ, 8 ಇನ್ನಿಂಗ್ಸ್ನಲ್ಲಿ 107.39 ಸ್ಟ್ರೈಕ್ರೇಟ್ನಲ್ಲಿ 74.71 ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 523 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ: 'ನನ್ನ 15 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ ಇಂತಹ ಕೆಳಮಟ್ಟದ ಆಟಗಾರ, ತಂಡವನ್ನು ನೋಡಿಲ್ಲ'