ನವದೆಹಲಿ: ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತ ತಂಡಕ್ಕೆ ಅನುಭವಿ ವೇಗಿ ಜಸ್ಪ್ರೀತ್ ಬುಮ್ರಾರನ್ನು ಸೇರಿಸಲಾಗಿದೆ. ಬೆನ್ನು ನೋವು ಮತ್ತು ಒತ್ತಡದ ಕಾರಣದಿಂದಾಗಿ ಕಳೆದ ಸೆಪ್ಟೆಂಬರ್‌ನಿಂದ ತಂಡದಿಂದ ಹೊರಗುಳಿದಿದ್ದರು. ಅಲ್ಲದೇ ಟಿ20 ವಿಶ್ವಕಪ್ಗೂ ಅಲಭ್ಯರಾಗಿದ್ದರು. ಅಂದಿನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆದು, ಫಿಟ್ನೆಸ್ಗಾಗಿ ಶ್ರಮಿಸುತ್ತಿದ್ದರು.
ಬಾಂಗ್ಲಾದೇಶದ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆಯಲ್ಲಿ ರೋಹಿತ್ ಶರ್ಮಾ ಹೆಬ್ಬೆರಳಿಗೆ ಗಾಯವಾಗಿತ್ತು. ಢಾಕಾದಿಂದ ನೇರವಾಗಿ ಭಾರತಕ್ಕೆ ಬಂದಿದ್ದ ಶರ್ಮಾ ಚಿಕಿತ್ಸೆ ಪಡೆದಿದ್ದರು. ನಂತರದ ಪಂದ್ಯಗಳ ನಾಯಕತ್ವ ಕೆ.ಎಲ್.ರಾಹುಲ್ಗೆ ನೀಡಲಾಗಿತ್ತು. ಅವರು ಟೆಸ್ಟ್ ಸರಣಿಯನ್ನೂ ಮುನ್ನಡೆಸಿದ್ದರು. ಲಂಕಾ ವಿರುದ್ಧದ ಟಿ20ಗೆ ಹಾರ್ದಿಕ್ಗೆ ನಾಯಕತ್ವ ಹೊಣೆ ನೀಡಲಾಗಿದ್ದು, ಏಕದಿನ ಪಂದ್ಯಗಳಿಗೆ ಮತ್ತೆ ರೋಹಿತ್ ನಾಯಕತ್ವ ವಹಿಸಲಿದ್ದಾರೆ.
16 ಸದಸ್ಯರ ಭಾರತೀಯ ತಂಡವನ್ನು ಬಿಸಿಸಿಐ ಡಿಸೆಂಬರ್ 27ರಂದು ಪ್ರಕಟಿಸಿತ್ತು. ನಂತರದಲ್ಲಿ ಬುಮ್ರಾ ತಂಡದಲ್ಲಿ ಸ್ಥಾನ ಪಡೆಯಲಿಲ್ಲ. ಶ್ರೀಲಂಕಾ ವಿರುದ್ಧದ ಮೊದಲ ಪಂದ್ಯ ಗುವಾಹಟಿಯಲ್ಲಿ, ಎರಡನೇ ಪಂದ್ಯ ಕೋಲ್ಕತ್ತಾದ ಈಡನ್ಸ್ ಗಾರ್ಡನ್ ಮತ್ತು ಮೂರನೇ ಪಂದ್ಯ ತಿರುವನಂತಪುರಂನಲ್ಲಿ ನಡೆಯಲಿದೆ. ಎಲ್ಲಾ ಪಂದ್ಯಗಳು ಹಗಲು-ರಾತ್ರಿ ನಡೆಯಲಿದ್ದು, ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.
-
NEWS - The All-India Senior Selection Committee has included pacer Jasprit Bumrah in India’s ODI squad for the upcoming Mastercard 3-match ODI series against Sri Lanka.
— BCCI (@BCCI) January 3, 2023 " class="align-text-top noRightClick twitterSection" data="
More details here - https://t.co/hIoAKbDnLA #INDvSL #TeamIndia
">NEWS - The All-India Senior Selection Committee has included pacer Jasprit Bumrah in India’s ODI squad for the upcoming Mastercard 3-match ODI series against Sri Lanka.
— BCCI (@BCCI) January 3, 2023
More details here - https://t.co/hIoAKbDnLA #INDvSL #TeamIndiaNEWS - The All-India Senior Selection Committee has included pacer Jasprit Bumrah in India’s ODI squad for the upcoming Mastercard 3-match ODI series against Sri Lanka.
— BCCI (@BCCI) January 3, 2023
More details here - https://t.co/hIoAKbDnLA #INDvSL #TeamIndia
ಶ್ರೀಲಂಕಾ ಏಕದಿನ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಟಿ20 ನಾಯಕ), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್.
ಬುಮ್ರಾ ಏಕದಿನ ಕ್ರಿಕೆಟ್ ವೃತ್ತಿಜೀವನವನ್ನು 2016 ರಂದು ಆರಂಭಿಸಿದ್ದರು. ಆಸ್ಟ್ರೇಲಿಯಾ ವಿರುದ್ಧ ತಮ್ಮ ಚೊಚ್ಚಲ ಪಂದ್ಯ ಆಡಿದ್ದರು. ಮೊಹಮ್ಮದ್ ಶಮಿ ನಂತರ ಬುಮ್ರಾ ಅತಿವೇಗದ 100 ಏಕದಿನ ವಿಕೆಟ್‌ಗಳನ್ನು ಕಬಳಿಸಿದ ದಾಖಲೆ ಮಾಡಿದ್ದಾರೆ. ಶಮಿ ಕೇವಲ 56 ಪಂದ್ಯಗಳಲ್ಲಿ 100 ವಿಕೆಟ್ ಪಡೆದರೆ, ಬುಮ್ರಾ 57 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಬುಮ್ರಾ ಇದುವರೆಗೆ ಏಕದಿನದಲ್ಲಿ 5 ಬಾರಿ 4 ವಿಕೆಟ್ ಹಾಗೂ ಒಮ್ಮೆ 5 ವಿಕೆಟ್ ಪಡೆದಿದ್ದಾರೆ. ಡೆತ್ ಓವರ್ಗಳಲ್ಲಿ ಉತ್ತಮ ಎಕಾನಮಿ ಬೌಲರ್ ಆಗಿ ಬುಮ್ರಾ ಗುರುತಿಸಲಾಗಿತ್ತು.
ಅತ್ಯಂತ ವೇಗವಾಗಿ 100 ವಿಕೆಟ್ ಪಡೆದ ಭಾರತೀಯ ಬೌಲರ್ಗಳೆಂದರೆ ಮೊಹಮ್ಮದ್ ಶಮಿ - 56 ಪಂದ್ಯಗಳಿಂದ, ಜಸ್ಪ್ರೀತ್ ಬುಮ್ರಾ - 57 ಪಂದ್ಯಗಳಿಂದ, ಇರ್ಫಾನ್ ಪಠಾಣ್ - 59 ಪಂದ್ಯಗಳಿಂದ, ಜಹೀರ್ ಖಾನ್ - 65 ಪಂದ್ಯಗಳಿಂದ, ಅಜಿತ್ ಅಗರ್ಕರ್ - 67 ಪಂದ್ಯಗಳಿಂದ 100 ವಿಕೆಟ್ ಪಡೆದಿದ್ದರು.
ಬುಮ್ರಾ ಟೆಸ್ಟ್ ವೃತ್ತಿಜೀವನವು 2018 ರಂದು ಕೇಪ್ ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶುರುವಾಗಿತ್ತು. ಟೆಸ್ಟ್ ಪಂದ್ಯದಲ್ಲಿ ಬುಮ್ರಾ 40 ವರ್ಷಗಳ ಹಳೆಯ ಭಾರತೀಯ ದಾಖಲೆಯನ್ನು ಮುರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ವರ್ಷದಲ್ಲಿ 48 ವಿಕೆಟ್‌ಗಳನ್ನು ಪಡೆಯುವ ಮೂಲಕ ಭಾರತದ ಪರ ಚೊಚ್ಚಲ ವರ್ಷದಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ದಿಲೀಪ್ ದೋಷಿ ಅವರ ದಾಖಲೆ ಮುರಿದಿದ್ದರು. ದಿಲೀಪ್ ದೋಷಿ 1979 ರಲ್ಲಿ ತಮ್ಮ ಚೊಚ್ಚಲ ಟೆಸ್ಟ್ ವರ್ಷದಲ್ಲಿ 40 ವಿಕೆಟ್‌ಗಳನ್ನು ಗಳಿಸಿದ್ದರು.
ಇದನ್ನೂ ಓದಿ: ದೆಹಲಿ ಕ್ಯಾಪಿಟಲ್ಸ್ ಸೇರಲಿದ್ದಾರಾ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ?