ETV Bharat / sports

ಕೊರೊನಾ ಹೋರಾಟಕ್ಕೆ ದೇಣಿಗೆ ನೀಡಿದ ಆಸ್ಟ್ರೇಲಿಯಾ ವೇಗಿ ಜೇಸನ್ ಬೆಹ್ರೆನ್​ಡಾರ್ಫ್​​ - ಆಸ್ಟ್ರೇಲಿಯಾ ತಂಡದ ಆಟಗಾರರಿಂದ ದೇಣಿಗೆ

ಜೋಶ್ ಹೆಜಲ್​ವುಡ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಕೊಂಡಿದ್ದ ಅವರು ಕ್ವಾರಂಟೈನ್ ಮುಗಿಸಿದ್ದರು. ಮುಂದಿನ ಪಂದ್ಯಗಳಲ್ಲಿ ತಂಡದ ಭಾಗವಾಗಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಕೆಕೆಆರ್ ಮತ್ತು ಸಿಎಸ್​ಕೆ ತಂಡದ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿರುವುದರಿಂದ ಇಡೀ ಟೂರ್ನಿಯನ್ನೇ ಮುಂದೂಡಲಾಗಿದೆ.

ಜೇಸನ್  ಬೆಹ್ರೆನ್​ಡಾರ್ಫ್​
ಜೇಸನ್ ಬೆಹ್ರೆನ್​ಡಾರ್ಫ್​
author img

By

Published : May 4, 2021, 5:14 PM IST

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್​ ತಂಡದಲ್ಲಿದ್ದ ಆಸ್ಟ್ರೇಲಿಯಾದ ವೇಗಿ ಜೇಸನ್ ಬೆಹ್ರೆನ್​ಡಾರ್ಫ್​ ಭಾರತದಲ್ಲಿ ಕೊರೊನಾ ನಿಯಂತ್ರಣಕ್ಕೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಅವರು ಯುನಿಸೆಫ್ ಆಸ್ಟ್ರೇಲಿಯಾ ಪ್ರಾಜೆಕ್ಟ್​ 'ಭಾರತದ ಕೋವಿಡ್​ 19 ಕ್ರೈಸಿಸ್​'ಗೆ ದೇಣಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಆದರೆ, ಎಷ್ಟು ಹಣ ನೀಡಿದ್ದಾರೆಂದು ಬಹಿರಂಗಪಡಿಸಿಲ್ಲ.

ಜೋಶ್ ಹೆಜಲ್​ವುಡ್ ಬದಲಿಗೆ ಚೆನ್ನೈ ಸೂಪರ್ ಕಿಂಗ್ಸ್​ ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಕೊಂಡಿದ್ದ ಅವರು ಕ್ವಾರಂಟೈನ್ ಮುಗಿಸಿದ್ದರು. ಮುಂದಿನ ಪಂದ್ಯಗಳಲ್ಲಿ ತಂಡದ ಭಾಗವಾಗಬೇಕಿತ್ತು. ಆದರೆ ಅಷ್ಟರಲ್ಲಾಗಲೇ ಕೆಕೆಆರ್ ಮತ್ತು ಸಿಎಸ್​ಕೆ ತಂಡದ ಸದಸ್ಯರಿಗೆ ಕೋವಿಡ್ ಸೋಂಕು ತಗುಲಿರುವುದರಿಂದ ಇಡೀ ಟೂರ್ನಿಯನ್ನೇ ಮುಂದೂಡಲಾಗಿದೆ.

ಬಹುಪಾಲು ಕ್ರಿಕೆಟಿಗರಂತೆ ಭಾರತ ನನಗೂ ಕೂಡ ವಿಶೇಷವಾದ ಸ್ಥಳ. ಇದೊಂದು ಸುಂದರವಾದ ದೇಶ. ಬೇರೆ ದೇಶದ ಕ್ರಿಕೆಟಿಗರನ್ನು ಇಲ್ಲಿನ ಜನರು ಯಾವಾಗಲೂ ಸ್ವಾಗತ ಕೋರಿರುತ್ತಾರೆ. ಇಲ್ಲಿ ಕ್ರಿಕೆಟ್ ಆಡಿದ ಅನುಭವ ವಿಶ್ವದ ಬೇರೆಲ್ಲೂ ಸಿಗುವುದಿಲ್ಲ. ಕಳೆದ 16 ತಿಂಗಳುಗಳಿಗಿಂತಲೂ ಹೆಚ್ಚು ದಿನಗಳ ನಂತರ ಕ್ರಿಕೆಟ್ ಆಡಲು ಮತ್ತು ಭಾರಕ್ಕೆ ಪ್ರಯಾಣಿಸಲು ಅವಕಾಶ ಸಿಕ್ಕಿದ್ದು ದೊಡ್ಡ ಗೌರವ, ಅದನ್ನು ನಾನು ಎಂದಿಗೂ ಕಳೆದುಕೊಳ್ಳಲು ಬಯಸುವುದಿಲ್ಲ.

ಆದರೆ ಪ್ರಸ್ತುತ ಇಲ್ಲಿನ ಪರಿಸ್ಥಿತಿಯನ್ನು ನೋಡುವುದು ನಿಜಕ್ಕೂ ಭಯಾನಕ ಮತ್ತು ದುಃಖಕರವಾಗಿದೆ. ಈ ಸಂದರ್ಭದಲ್ಲಿ ನನ್ನ ಆಲೋಚನೆಗಳು ಈ ದೇಶದಲ್ಲಿ ಸಂಕಷ್ಟಕ್ಕೀಡಾಗಿರುವ ಜನತೆಯೊಂದಿಗೆ ಇರುತ್ತದೆ. ನಾನು ಈ ಸಂದರ್ಭದಲ್ಲಿ ಇಲ್ಲಿನ ಜನತೆಗೆ ನೆರವಾಗಲು ನನ್ನಿಂದಾದಷ್ಟನ್ನು ಯುನಿಸೆಫ್ ಆಸ್ಟ್ರೇಲಿಯಾದ' ಭಾರತದ ಕೋವಿಡ್​ 19 ಬಿಕ್ಕಟ್ಟು' ಪ್ರಾಜೆಕ್ಟ್​ಗೆ ದೇಣಿಗೆ ನೀಡಿದ್ದೇನೆ.

ನನ್ನಂತೆ ಭಾರತದ ಆತಿಥ್ಯವನ್ನು ಆನಂದಿಸಿರುವ ಎಲ್ಲರಿಗೂ ಕೂಡ ನೆರವಾಗಲು ವಿನಂತಿಸಿಕೊಳ್ಳುತ್ತಿದ್ದೇನೆ. ನನ್ನ ಸಹಾಯ ತುಂಬಾ ಚಿಕ್ಕದು ಎಂದು ನನಗೆ ಗೊತ್ತಿದೆ. ಈ ವರ್ಷಗಳಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ತೋರಿಸಿರುವ ಪ್ರೀತಿ ಮತ್ತು ಸ್ನೇಹಕ್ಕೆ ನನ್ನ ಸಹಾಯ ಎಂದಿಗೂ ಸರಿಸಮನಾದದ್ದಲ್ಲ. ಆದರೆ, ಇದು ಸ್ವಲ್ಪ ವ್ಯತ್ಯಾಸವನ್ನು ಸಹ ಮಾಡಬಲ್ಲದು ಎಂದು ನಾನು ಭಾವಿಸುತ್ತೇನೆ ಎಂದು ಜೇಸನ್​ ಟ್ವಿಟರ್​ನಲ್ಲಿ ಹೇಳಿದ್ದಾರೆ.

ಈಗಾಗಲೆ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್, ಬ್ರೆಟ್​ ಲೀ ಹಾಗೂ ಕ್ರಿಕೆಟ್​ ಆಸ್ಟ್ರೇಲಿಯಾ ಭಾರತದ ಕೋವಿಡ್19 ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದೆ. ವೆಸ್ಟ್​ ಇಂಡೀಸ್​ನ ನಿಕೋಲಸ್ ಪೂರನ್ ಕೂಡ ತಮ್ಮ ಐಪಿಎಲ್ ವೇತನದ ಶೇ 10ರಷ್ಟನ್ನು ದೇಣಿಗೆಯಾಗಿ ನೀಡಿ ಭಾರತೀಯರ ನೋವು ಹಂಚಿಕೊಂಡಿದ್ದಾರೆ.

ಇದನ್ನು ಓದಿ:ಎಲ್ಲಾ ಆಟಗಾರರನ್ನು ಸುರಕ್ಷಿತ ಮಾರ್ಗದಲ್ಲಿ ಕಳುಹಿಸುತ್ತೇವೆ: ಬಿಸಿಸಿಐ ಭರವಸೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.