ETV Bharat / sports

ಟೆಸ್ಟ್‌ ಕ್ರಿಕೆಟ್‌ನಲ್ಲಿ 650 ವಿಕೆಟ್​ ಕಿತ್ತು ಹೊಸ ದಾಖಲೆ ಬರೆದ ಜೇಮ್ಸ್ ಆ್ಯಂಡರ್​ಸನ್ - ಇಂಗ್ಲೆಂಡ್​ ಬೌಲರ್​ ಜೇಮ್ಸ್ ಆ್ಯಂಡರ್​ಸನ್

ಇಂಗ್ಲೆಂಡ್​ ವೇಗಿ ಜೇಮ್ಸ್​ ಆ್ಯಂಡರ್​ಸನ್​ ಟೆಸ್ಟ್​ ಕ್ರಿಕೆಟ್​ನಲ್ಲಿ 650 ವಿಕೆಟ್​ ಗಳಿಸಿದ ಸಾಧನೆ ಮಾಡಿದ್ದು, ಅತಿ ಹೆಚ್ಚು ವಿಕೆಟ್​ ಪಡೆದವರಲ್ಲಿ ಮೂರನೇ, ಮೊದಲ ವೇಗದ ಬೌಲರ್​ ಆಗಿದ್ದಾರೆ.

650 ವಿಕೆಟ್​ ಕಿತ್ತ ಜೇಮ್ಸ್ ಆ್ಯಂಡರ್​ಸನ್
650 ವಿಕೆಟ್​ ಕಿತ್ತ ಜೇಮ್ಸ್ ಆ್ಯಂಡರ್​ಸನ್
author img

By

Published : Jun 13, 2022, 8:01 PM IST

ಇಂಗ್ಲೆಂಡ್​ ತಂಡದ ವೇಗದ ಬೌಲರ್​ ಜೇಮ್ಸ್​ ಆ್ಯಂಡರ್​ಸನ್​ 650 ವಿಕೆಟ್​ ಪಡೆಯುವ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಮತ್ತೊಂದು ಮೈಲುಗಲ್ಲು ನೆಟ್ಟಿದ್ದಾರೆ. ನ್ಯೂಜಿಲ್ಯಾಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ಆ್ಯಂಡರ್​ಸನ್​ 4 ವಿಕೆಟ್​ ಗಳಿಸುವ ಮೂಲಕ ಮೇರು ಸಾಧನೆ ಮಾಡಿದ ವಿಶ್ವದ, ಇಂಗ್ಲೆಂಡ್​ನ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ನಾಟಿಂಗ್​ಹ್ಯಾಮ್​ನ ಟ್ರೆಂಟ್​ಬ್ರಿಡ್ಜ್​ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ನ ಟಾಮ್ ಲಾಥಮ್ ಅವರ ವಿಕೆಟ್​ ಪಡೆಯುವ ಮೂಲಕ ಆ್ಯಂಡರ್​ಸನ್ 650ನೇ ವಿಕೆಟ್​ ಸಾಧನೆ ಮಾಡಿದರು. ಟೆಸ್ಟ್​ ಕ್ರಿಕೆಟ್​ ಅತಿ ಹೆಚ್ಚು ವಿಕೆಟ್​ ಪಡೆದ ಬೌಲರ್​ಗಳಲ್ಲಿ ಇವರು​ 3ನೇ ಸ್ಥಾನದಲ್ಲಿದ್ದು, ಇದಕ್ಕೂ ಮೊದಲು ಶ್ರೀಲಂಕಾದ ಸ್ಪಿನ್ ದಂತಕಥೆ ಮುತ್ತಯ್ಯ ಮುರಳೀಧರನ್ (800) ಮತ್ತು ಈಚೆಗಷ್ಟೇ ವಿಧಿವಶರಾದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ ಶ್ರೇಷ್ಠರಾದ ಶೇನ್ ವಾರ್ನ್ (708) ಅತಿ ಹೆಚ್ಚು ವಿಕೆಟ್​ ಗಳಿಸಿದವರಾಗಿದ್ದಾರೆ. ಜೇಮ್ಸ್​ ಆ್ಯಂಡರ್​ಸನ್​ ಶೇನ್​ ವಾರ್ನ್​ ದಾಖಲೆ ಅಳಿಸಲು 58, ಮುತ್ತಯ್ಯ ಮುರಳೀಧರನ್​ಗಿಂತ 158 ವಿಕೆಟ್​ ಹಿಂದಿದ್ದಾರೆ.

ಇದನ್ನೂ ಓದಿ: 'ವಿಕೆಟ್ ಪಡೆಯುವ ಒಬ್ಬ ಬೌಲರ್ ಇಲ್ಲ': ಭಾರತದ ಕಳಪೆ ಆಟಕ್ಕೆ ಗವಾಸ್ಕರ್​ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.