ETV Bharat / sports

ಟೀಂ ಇಂಡಿಯಾ ಟೆಸ್ಟ್​ ನಾಯಕನಾದರೆ ದೊಡ್ಡ ಜವಾಬ್ದಾರಿ, ಗೌರವ:ಕೆ.ಎಲ್‌.ರಾಹುಲ್ - ಟೆಸ್ಟ್ ನಾಯಕತ್ವದ ಬಗ್ಗೆ ರಾಹುಲ್ ಮಾತು

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಮುನ್ನಡೆಸುತ್ತಿರುವ ಕನ್ನಡಿಗ ಕೆ.ಎಲ್‌.ರಾಹುಲ್​ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದು, ಈ ವೇಳೆ ಟೆಸ್ಟ್​ ತಂಡದ ನಾಯಕತ್ವ ಜವಾಬ್ದಾರಿ ಸೇರಿದಂತೆ ಅನೇಕ ವಿಚಾರಗಳ ಕುರಿತಾಗಿ ಮಾತನಾಡಿದ್ದಾರೆ.

KL Rahul on Test Captain
KL Rahul on Test Captain
author img

By

Published : Jan 18, 2022, 5:20 PM IST

ಕೇಪ್​ಟೌನ್(ದಕ್ಷಿಣ ಆಫ್ರಿಕಾ)​: ವಿರಾಟ್​​ ಕೊಹ್ಲಿ ಟೀಂ ಇಂಡಿಯಾ ಟೆಸ್ಟ್​ ನಾಯಕತ್ವ ಸ್ಥಾನ ತೊರೆಯುತ್ತಿದ್ದಂತೆ ನೂತನ ಕಪ್ತಾನ್‌​ ರೇಸ್​​​​ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್​ ಹೆಸರು ಮುಂಚೂಣಿಯಲ್ಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ನಾಳೆಯಿಂದ ಏಕದಿನ ಸರಣಿ ಆರಂಭಗೊಳ್ಳಲಿದ್ದು, ನಾಯಕನಾಗಿರುವ ಕೆ.ಎಲ್. ರಾಹುಲ್​ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು. ಈ ವೇಳೆ ತಮ್ಮ ಅಭಿಪ್ರಾಯ ಹೊರಹಾಕಿರುವ ಅವರು​, ಟೀಂ ಇಂಡಿಯಾ ಟೆಸ್ಟ್ ನಾಯಕನಾದರೆ ಅದೊಂದು ದೊಡ್ಡ ಜವಾಬ್ದಾರಿ ಹಾಗೂ ನನಗೆ ಸಿಗುವ ಗೌರವ ಎಂದಿದ್ದಾರೆ.

​​

ಟೆಸ್ಟ್ ತಂಡದ ನಾಯಕನ ಹೆಸರು ಹೊರಬರುವವರೆಗೂ ನಾನು ಅದರ ಬಗ್ಗೆ ಯೋಚನೆ ಮಾಡಲ್ಲ. ನಿಸ್ಸಂಶಯವಾಗಿ ಜೋಹಾನ್ಸ್​ಬರ್ಗ್​​ ಟೆಸ್ಟ್​ನಲ್ಲಿ ತಂಡ ಮುನ್ನಡೆಸುವ ಅವಕಾಶ ಸಿಕ್ಕಿತು. ನಿಜಕ್ಕೂ ಅದು ವಿಶೇಷವಾಗಿತ್ತು. ಆದರೆ, ಫಲಿತಾಂಶ ನಮ್ಮ ಕೈಮೀರಿ ಹೋಯಿತು. ಇದೊಂದು ಉತ್ತಮ ಕಲಿಕೆಯಾಗಿದೆ. ಹೆಮ್ಮೆ ಪಡುವ ಸಂಗತಿಯೂ ಹೌದು ಎಂದರು.

ಇದನ್ನೂ ಓದಿ: IPL 2022: ಲಕ್ನೋ ತಂಡಕ್ಕೆ ರಾಹುಲ್​ ಕ್ಯಾಪ್ಟನ್‌; ಸ್ಟೋಯ್ನಿಸ್‌​​,​​ ಬಿಷ್ಣೋಯ್​​ ಪಡೆದ ಹಣವೆಷ್ಟು ಗೊತ್ತೇ?

'ಟೀಂ ಇಂಡಿಯಾ ಮುನ್ನಡೆಸುವುದು ಯಾವಾಗಲೂ ವಿಶೇಷ'

ಟೀಂ ಇಂಡಿಯಾ ಮುನ್ನಡೆಸುವುದು ನಿಜಕ್ಕೂ ಎಲ್ಲರಿಗೂ ವಿಶೇಷವಾಗಿರುತ್ತದೆ. ನಾನೂ ಅದರಿಂದ ಹೊರತಾಗಿಲ್ಲ. ಟೆಸ್ಟ್​ ತಂಡದ ನಾಯಕನ ಜವಾಬ್ದಾರಿ ನೀಡಿದರೆ ಅದು ರೋಮಾಂಚನಕಾರಿ ಸಂಗತಿಯಾಗಲಿದೆ. ಜೊತೆಗೆ, ದೊಡ್ಡ ಗೌರವ ಎಂದು ತಿಳಿಸಿದ್ದಾರೆ.

KL Rahul on Test Captain
​​

ಈಗಾಗಲೇ ಸೀಮಿತ ಓವರ್​ಗಳ ಉಪನಾಯಕನಾಗಿ ಆಯ್ಕೆಯಾಗಿರುವ ರಾಹುಲ್​​, ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್​​​ ಪಂದ್ಯದಲ್ಲಿ ನಾಯಕನಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಇದೀಗ ರೋಹಿತ್​ ಅನುಪಸ್ಥಿತಿಯಲ್ಲಿ ಏಕದಿನ ತಂಡವನ್ನೂ ಮುನ್ನಡೆಸಲಿದ್ದಾರೆ. ಸಾಕಷ್ಟು ಅನುಭವ ಹೊಂದಿರುವ ಅವರಿಗೆ ಬಿಸಿಸಿಐ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.