ETV Bharat / sports

ಐಪಿಎಲ್​ ಸಮಯದಲ್ಲಿ ಭಾರತದ ಕೋವಿಡ್ ಸ್ಥಿತಿ ಭಯ ಹುಟ್ಟಿಸಿತ್ತು: ಡೇವಿಡ್ ವಾರ್ನರ್​ - ಯುಎಇ

ಕೋವಿಡ್ ಪರಿಸ್ಥಿತಿ ಭಯಹುಟ್ಟಿಸುವಂತಿತ್ತು. ಮಾನವೀಯ ದೃಷ್ಟಿಕೋನದಿಂದ ನೋಡಿದಾಗ ತುಂಬಾ ಅಸಮಾಧಾನ ಉಂಟುಮಾಡುತ್ತಿತ್ತು. ಹೀಗಾಗಿ ಐಪಿಎಲ್​ ರದ್ದು ಮಾಡಿದ್ದು ಒಂದೊಳ್ಳೆ ನಿರ್ಧಾರ ಎಂದು ಬಿಸಿಸಿಐ ನಿರ್ಧಾರವನ್ನ ಬೆಂಬಲಿಸಿದ್ದಾರೆ.

Warner
ಡೇವಿಡ್ ವಾರ್ನರ್​
author img

By

Published : Jun 2, 2021, 6:21 PM IST

ಸಿಡ್ನಿ (ಆಸ್ಟ್ರೇಲಿಯಾ) : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಮಯದಲ್ಲಿ ಭಾರತೀಯರು ಆಮ್ಲಜನಕಕ್ಕಾಗಿ ಹೋರಾಡುವುದನ್ನು ಮತ್ತು ಕುಟುಂಬ ಸದಸ್ಯರನ್ನು ಅಂತ್ಯಸಂಸ್ಕಾರ ಮಾಡಲು ಬೀದಿಗಳಲ್ಲಿ ಸಾಲುಗಟ್ಟಿ ನಿಂತಿರುವುದನ್ನು ನೋಡಿದೆ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.

ಬೀದಿಗಳಲ್ಲಿ ಜನರು ತಮ್ಮ ಕುಟುಂಬಸ್ಥರನ್ನು ಅಂತ್ಯಸಂಸ್ಕಾರ ಮಾಡಲು ಸಾಲುಗಟ್ಟಿ ನಿಂತಿದ್ದಾರೆ ಮತ್ತು ಒಂದೆರಡು ಬಾರಿ ಮೈದಾನಕ್ಕೆ ಹೋಗುವಾಗ ನಾವು ನೋಡಿದ್ದೆವು ಎಂದು ಫಾಕ್ಸ್​ ಸ್ಟೋರ್ಟ್​​ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್ ವಿಪರೀತವಾದ ವೇಳೆ ಮೇ 4ರಂದು ಐಪಿಎಲ್ ಟೂರ್ನಿಯನ್ನು ರದ್ಧು ಮಾಡಲಾಯಿತು. ಆದರೆ, ಯುಎಇಯಲ್ಲಿ ಉಳಿದ 31 ಪಂದ್ಯಗಳನ್ನು ಸೆಪ್ಟೆಂಬರ್-ಅಕ್ಟೋಬರ್​​ನಲ್ಲಿ ನಡೆಸಲು ನಿರ್ಧರಿಸಲಾಗಿದೆ.

ಕೋವಿಡ್ ಪರಿಸ್ಥಿತಿ ಭಯಹುಟ್ಟಿಸುವಂತಿತ್ತು. ಮಾನವೀಯ ದೃಷ್ಟಿಕೋನದಿಂದ ನೋಡಿದಾಗ ತುಂಬಾ ಅಸಮಾಧಾನ ಉಂಟುಮಾಡುತ್ತಿತ್ತು. ಹೀಗಾಗಿ ಐಪಿಎಲ್​ ರದ್ಧು ಮಾಡಿದ್ದು ಒಂದೊಳ್ಳೆ ನಿರ್ಧಾರ ಎಂದು ಬಿಸಿಸಿಐ ನಿರ್ಧಾರವನ್ನ ಬೆಂಬಲಿಸಿದ್ದಾರೆ.

ಭಾರತದಲ್ಲಿ ಕ್ರಿಕೆಟ್​ ಅನ್ನು ಅತಿಯಾಗಿ ಪ್ರೀತಿಸುತ್ತಾರೆ. ಅದಕ್ಕಾಗಿ ಟೂರ್ನಿಯನ್ನು ನಿಲ್ಲಿಸಲು ಬಿಸಿಸಿಐಗೆ ಕಷ್ಟವಾಗಿತ್ತು. ಅರ್ಧದಷ್ಟು ಜನಸಂಖ್ಯೆ ಕ್ರಿಕೆಟ್​​​​ನಿಂದ ಮುಖದಲ್ಲಿ ಮಂದಹಾಸ ಮೂಡುತ್ತಿತ್ತು ಎಂದಿದ್ದಾರೆ.

ನಾವು ಭಾರತದಿಂದ ತೆರಳುವ ಮುನ್ನಾ ಮಾಲ್ಡೀವ್ ತೆರಳಿದೆವು. ಅಲ್ಲಿ ಹಲವಾರು ಮಂದಿ ಭಾರತದಿಂದ ಬಂದಿದ್ದವರಿದ್ದರು, ಅವರೆಲ್ಲರೂ ತಮ್ಮ ಸ್ವಂತ ದೇಶಕ್ಕೆ ತೆರಳುವವರಾಗಿದ್ದರು ಎಂದಿದ್ದಾರೆ.

ಇದನ್ನೂ ಓದಿ: 8 ವರ್ಷಗಳಲ್ಲಿ 4 ಟಿ20 ವಿಶ್ವಕಪ್ ಸೇರಿ 12 ಐಸಿಸಿ ಟೂರ್ನಿ, ತಂಡಗಳಲ್ಲೂ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.