ಲಖನೌ (ಉತ್ತರ ಪ್ರದೇಶ): ನಡೆಯುತ್ತಿರುವ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಚೇಸಿಂಗ್ ಮಾಸ್ಟರ್ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ. ಸತತ ಐದು ಪಂದ್ಯಗಳನ್ನು ಗೆದ್ದ ಭಾರತಕ್ಕೆ ನಾಲ್ಕು ಪಂದ್ಯದಲ್ಲಿ ತಮ್ಮ ಉತ್ತಮ ರನ್ ಕೊಡುಗೆ ನೀಡಿರುವ ವಿರಾಟ್ ತಂಡಕ್ಕೆ ಆಸರೆ ಆಗಿದ್ದಾರೆ. ಅಕ್ಟೋಬರ್ 29 ರಂದು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಎದುರಿಸಲು ಭಾರತ ತಂಡವು ಮರಳಲು ಸಜ್ಜಾಗುತ್ತಿದೆ. ಈ ವೇಳೆ ವಿರಾಟ್ ತಮ್ಮ ಪ್ರದರ್ಶನದ ಹಿಂದಿರುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
ಶ್ರೆಷ್ಠತೆ ಎಂಬುದಿಲ್ಲ, ಮಾಡುವ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲು ಪ್ರತೀ ಸಲವೂ ಪ್ರಯತ್ನಿಸಬೇಕು ಎಂಬ ಕಿವಿಮಾತನ್ನು ವಿರಾಟ್ ಆಡಿದ್ದಾರೆ. "ಪ್ರತಿ ದಿನ, ಪ್ರತಿ ಅಭ್ಯಾಸದ ಅವಧಿ, ಪ್ರತಿ ವರ್ಷ ಮತ್ತು ಪ್ರತಿ ಋತುವಿನಲ್ಲಿ ನಾನು ಹೇಗೆ ಉತ್ತಮವಾಗಿ ಇರಬಹುದು ಎಂಬುದರ ಕುರಿತು ಯಾವಾಗಲೂ ಕೆಲಸ ಮಾಡಿದ್ದೇನೆ. ಹಾಗಾಗಿ, ಇದು ನನಗೆ ಇಷ್ಟು ದಿನ ಆಡಲು ಮತ್ತು ಪ್ರದರ್ಶನ ನೀಡಲು ಸಹಾಯ ಮಾಡಿದೆ. ಆ ಮನಸ್ಥಿತಿಯನ್ನು ಹೊಂದಿರದೆ ಸ್ಥಿರವಾಗಿ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಪ್ರದರ್ಶನವು ನಿಮ್ಮ ಗುರಿಯಾಗಿದ್ದರೆ, ಸ್ವಲ್ಪ ಸಮಯದ ನಂತರ ಒಬ್ಬರು ತೃಪ್ತರಾಗಬಹುದು ಮತ್ತು ಅವರ ಆಟದಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬಹುದು" ಎಂದು ವಿರಾಟ್ ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಡೆದ ಸಂವಾದದಲ್ಲಿ ಹೇಳಿದರು.
-
.@imVkohli's motto 👉 "Chase betterment."
— Star Sports (@StarSportsIndia) October 24, 2023 " class="align-text-top noRightClick twitterSection" data="
Elite mentality personified 🧠
Find out how #KingKohli strives to get better everyday 🗣️
Tune-in to #INDvENG in the #WorldCupOnStar
SUN, OCT 29, 12:30 PM | Star Sports Network#CWC23 pic.twitter.com/oxtEOY4w9X
">.@imVkohli's motto 👉 "Chase betterment."
— Star Sports (@StarSportsIndia) October 24, 2023
Elite mentality personified 🧠
Find out how #KingKohli strives to get better everyday 🗣️
Tune-in to #INDvENG in the #WorldCupOnStar
SUN, OCT 29, 12:30 PM | Star Sports Network#CWC23 pic.twitter.com/oxtEOY4w9X.@imVkohli's motto 👉 "Chase betterment."
— Star Sports (@StarSportsIndia) October 24, 2023
Elite mentality personified 🧠
Find out how #KingKohli strives to get better everyday 🗣️
Tune-in to #INDvENG in the #WorldCupOnStar
SUN, OCT 29, 12:30 PM | Star Sports Network#CWC23 pic.twitter.com/oxtEOY4w9X
ಮುಂದುವರೆದು ಮಾತನಾಡಿದ ಅವರು "ಉತ್ತಮವಾಗಿ ಆಡಲು ಪ್ರಯತ್ನಿಸುವುದು ಯಾವಾಗಲೂ ನನ್ನ ಧ್ಯೇಯವಾಗಿದೆ ಮತ್ತು ಶ್ರೇಷ್ಠತೆಯಲ್ಲ. ಏಕೆಂದರೆ ಶ್ರೇಷ್ಠತೆಯ ವ್ಯಾಖ್ಯಾನ ಏನು ಎಂದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲ. ಅದಕ್ಕೆ ಯಾವುದೇ ಮಿತಿಯಿಲ್ಲ, ಹಾಗೇ ಮಾನದಂಡವೂ ಇಲ್ಲ. ಆದ್ದರಿಂದ, ನಾನು ಪ್ರತಿದಿನ ಉತ್ತಮಗೊಳ್ಳುವ ಕಡೆಗೆ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ತಂಡದ ಗೆಲುವಿಗೆ ಏನು ಮಾಡಬೇಕು ಎಂಬುದು ನಮ್ಮ ಆಲೋಚನೆಯಲ್ಲಿದ್ದರೆ ಪ್ರದರ್ಶನ ತಾನಾಗಿಯೇ ಉತ್ತಮವಾಗುತ್ತದೆ" ಎಂದಿದ್ದಾರೆ.
ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಲಿ ಆಡಿರುವ ಐದು ಪಂದ್ಯದಲ್ಲಿ ಕಿಂಗ್ ಕೊಹ್ಲಿ ನಾಲ್ಕರಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತದ ಪರ ವಿಶ್ವಕಪ್ನಲ್ಲಿ ಅತಿ ಹೆಚ್ಚು ಮತ್ತು ಒಟ್ಟಾರೆ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ನಾಲ್ಕು ಇನ್ನಿಂಗ್ಸ್ನಲ್ಲಿ 3 ಅರ್ಧಶತಕ ಮತ್ತು 1 ಶತಕ ಒಳಗೊಂಡಿದ್ದು, 354 ರನ್ ಕಲೆಹಾಕಿದ್ದಾರೆ. ಒಟ್ಟಾರೆ ಏಕದಿನ ವಿಶ್ವಕಪ್ ಪಂದ್ಯಗಳಲ್ಲಿ ಕೊಹ್ಲಿ 55.36 ರ ಸರಾಸರಿಯಲ್ಲಿ 1,384 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಶತಕಗಳು ಮತ್ತು ಒಂಬತ್ತು ಅರ್ಧಶತಕಗಳಿವೆ. 107 ಅವರ ಅತ್ಯಧಿಕ ಸ್ಕೋರ್ ಆಗಿದೆ.
ಇದನ್ನೂ ಓದಿ: ವಿಶ್ವ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪಾರಮ್ಯ: ನಂ.1 ಸ್ಥಾನಕ್ಕಾಗಿ ಕಿಂಗ್ - ಪ್ರಿನ್ಸ್ ನಡುವೆ ಸ್ಪರ್ಧೆ