ETV Bharat / sports

ಧೋನಿ, ವಿರಾಟ್​ ನಾಯಕತ್ವದ ಬಗ್ಗೆ ಇಶಾಂತ್​ ಶರ್ಮಾ ಹೇಳಿದ್ದೇನು?

ಜಿಯೋ ಸಿನಿಮಾದ ಹೋಮ್ ಆಫ್ ಹೀರೋಸ್ ಜೊತೆಗಿನ ಸಂದರ್ಶನದ ನಾಲ್ಕನೇ ಭಾಗದಲ್ಲಿ ಇಶಾಂತ್ ಶರ್ಮಾ ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಧೋನಿ ಮತ್ತು ವಿರಾಟ್​ ಕೊಹ್ಲಿ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.

Ishant Sharma compared the captaincy of MS Dhoni and Virat Kohli  Ishant Sharma  Ishant Sharma on ms dhoni captaincy  Ishant Sharma on virat kohli captaincy  ms dhoni  virat kohli  ವಿರಾಟ್​ ನಾಯಕತ್ವದ ಬಗ್ಗೆ ಇಶಾಂತ್​ ಶರ್ಮಾ  ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಧೋನಿ  ಧೋನಿ ಮತ್ತು ವಿರಾಟ್​ ಕೊಹ್ಲಿ ಬಗ್ಗೆ ಕೆಲವೊಂದು ವಿಷಯ  ನೀವು ವಿಕೆಟ್‌ ಪಡೆದಿದ್ದು ಯಾವಾಗ  ಕೊಹ್ಲಿ ನಾಯಕತ್ವದಲ್ಲಿ ನೀವು ಯಶಸ್ಸನ್ನು ಗಳಿಸಿದ್ದು  ವಿರಾಟ್​ನಲ್ಲಿ ನೀವು ಯಾವ ಬದಲಾವಣೆ  ಧೋನಿ ನಾಯಕತ್ವದ ಬಗ್ಗೆ ಹೇಳಿದ್ದು ಹೀಗೆ  2023ರ ವಿಶ್ವಕಪ್ ಭಾರತ ಗೆಲ್ಲುವ ಸಾಧ್ಯತೆ
ವಿರಾಟ್​ ನಾಯಕತ್ವದ ಬಗ್ಗೆ ಇಶಾಂತ್​ ಶರ್ಮಾ ಹೇಳಿದ್ದೇನು?
author img

By ETV Bharat Karnataka Team

Published : Aug 30, 2023, 10:35 AM IST

ಚೆನ್ನೈ, ತಮಿಳುನಾಡು: ಹಿರಿಯ ವೇಗದ ಬೌಲರ್ ಇಶಾಂತ್ ಶರ್ಮಾ ಅವರು ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಜಿಯೋಸಿನಿಮಾದ ಹೋಮ್ ಆಫ್ ಹೀರೋಸ್‌ನೊಂದಿಗಿನ ಸಂದರ್ಶನದಲ್ಲಿ ಅವರು ಕೆಲವೊಂದು ವಿಷಯಗಳನ್ನು ಬಹಿರಂಗ ಪಡಿಸಿದ್ದಾರೆ.

ನೀವು ವಿಕೆಟ್‌ ಪಡೆದಿದ್ದು ಯಾವಾಗ? : ನಾನು 2015 ರಲ್ಲಿ ಚೆಂಡನ್ನು ವಿಭಿನ್ನ ರೀತಿಯಲ್ಲಿ ಎಸೆಯುವ ಬಗ್ಗೆ ಅರ್ಥಮಾಡಿಕೊಂಡೆ. ಆ ಸಮಯದಲ್ಲಿ ನನ್ನ ಲೆಂಥ್​ ಸ್ವಲ್ಪ ಕಡಿಮೆ ಇತ್ತು. ನಾವು ಬ್ರಿಸ್ಬೇನ್‌ನಲ್ಲಿ ತುಂಬಾ ಬಿಸಿ ವಾತಾವರಣದಲ್ಲಿ ಆಡುತ್ತಿದ್ದಾಗ ವಿಕೆಟ್ ಪಡೆಯಲು ತುಂಬಾ ಕಷ್ಟವೆಂದು ನನಗೆ ಅರ್ಥವಾಯಿತು. ಸೀಮ್ ಸಂಪೂರ್ಣವಾಗಿ ಕಳೆದುಹೋಗಿತ್ತು. ಆಗ ನಾನು ನಾಲ್ಕನೇ ಸ್ಟಂಪ್‌ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದೆ ಮತ್ತು ಸ್ಟೀವ್ ಸ್ಮಿತ್ ಅವರನ್ನು ಒಂದೆರಡು ಬಾರಿ ವಿಕೆಟ್​ ಪಡೆದೇ ಎಂದು ಇಶಾಂತ್ ಶರ್ಮಾ ಹೇಳಿದರು.

ಆ ನಂತರ ಐಪಿಎಲ್ ಹರಾಜಿನಲ್ಲಿ ನನ್ನನ್ನು ಖರೀದಿಸದ ಕಾರಣ ಕೌಂಟಿ ಕ್ರಿಕೆಟ್ ಕೂಡ ಆಡಿದ್ದೇನೆ. ಸಸೆಕ್ಸ್‌ನಲ್ಲಿರುವ ನಮ್ಮ ತರಬೇತುದಾರ ಜೇಸನ್ ಗಿಲ್ಲೆಸ್ಪಿ ನನಗೆ ಬಹಳಷ್ಟು ವಿಷಯಗಳ ಬಗ್ಗೆ ಹೇಳಿದರು. ನಾನು ನನ್ನ ಲೆಂಥ್​ ಸುಧಾರಿಸಬೇಕು ಎಂದು ಅವರಿಗೆ ತಿಳಿಸಿದೆ. ಆಗ ಅವರು 6m ನಲ್ಲಿ ಶೂಟ್ ಮಾಡುವ ರೀತಿಯಲ್ಲಿ 4m ನಲ್ಲಿ ಶೂಟ್ ಮಾಡಲು ಹೇಳಿದರು ಎಂದು ಇಶಾಂತ್​ ಮಾಹಿತಿ ಹಂಚಿಕೊಂಡರು.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ನೀವು ಯಶಸ್ಸನ್ನು ಗಳಿಸಿದ್ದು ಹೇಗೆ?: ಮೊದಲನೆಯದಾಗಿ ವಿರಾಟ್ ಕೊಹ್ಲಿ ತುಂಬಾ ಆಕ್ರಮಣಕಾರಿ ಆಟಗಾರ. ಅವರ ನಾಯಕತ್ವದಲ್ಲಿ ನಮಗೆ ಸಲಹೆ ನೀಡುತ್ತಿದ್ದರು. ನಾವು ಹೊಸ ಬಾಲ್​ನೊಂದಿಗೆ ಬೌಲಿಂಗ್ ಮಾಡುತ್ತಿದ್ದರೆ, ಅವರು 5 ಓವರ್‌ಗಳಲ್ಲಿ 25 ರನ್‌ಗಳನ್ನು ನೀಡಿ ಆದ್ರೂ ಎರಡು ವಿಕೆಟ್‌ಗಳನ್ನು ಕಬಳಿಸಬೇಕು. ನೀವು ಸಾಕಷ್ಟು ಪಂದ್ಯಗಳನ್ನು ಆಡಿದ್ದೀರಿ ಮತ್ತು ಈಗ ಉತ್ತಮ ಪ್ರದರ್ಶನ ನೀಡಬೇಕಾಗಿದೆ. ಒಂದೇ ಸ್ಥಳದಲ್ಲಿ ಬೌಲ್ ಮಾಡಬೇಕು ಎಂದು ಭಾವಿಸಿ ಬೌಲ್ ಮಾಡಬೇಡಿ. ನೀವು ವಿಕೆಟ್ ಪಡೆಯಲು ಪ್ರಯತ್ನಿಸಬೇಕು ಎಂದು ವಿರಾಟ್ ಯಾವಾಗಲೂ ನನಗೆ ಹೇಳುತ್ತಿದ್ದರು ಅಂತಾ ಇಶಾಂತ್​ ಶರ್ಮಾ ಹೇಳಿದರು.

ವಿರಾಟ್ ಶಮಿ ಬಳಿ ಹೋಗಿ ನೀವು ವಿಕೆಟ್‌ಗಳನ್ನು ತೆಗೆಯಬಹುದು ಎಂದು ನನಗೆ ಗೊತ್ತು. ಆದರೆ, ಈ ಸಮಯದಲ್ಲಿ ನಾನು ನಿಮ್ಮನ್ನು ನಿರಂತರವಾಗಿ ಬೌಲ್ ಮಾಡಲು ಬಯಸುತ್ತೇನೆ ಎಂದು ಹೇಳುತ್ತಿದ್ದರು. ಕೊಹ್ಲಿ ಜಸ್ಪ್ರೀತ್ ಬುಮ್ರಾ ಬಳಿ ಹೋಗಿ, 'ಇದ ನಿಮಗೆ ಚೊಚ್ಚಲ ಪಂದ್ಯ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ಬೌಲಿಂಗ್ ಮಾಡುವುದು ಬಹಳ ಮುಖ್ಯ' ಎಂದು ಹೇಳುತ್ತಿದ್ದರು ಅಂತಾ ಹೇಳಿದರು.

ವಿರಾಟ್​ನಲ್ಲಿ ನೀವು ಯಾವ ಬದಲಾವಣೆಗಳನ್ನು ಕಂಡಿದ್ದೀರಿ?: ವಿರಾಟ್ ತಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಫ್ಲೈಟ್‌ನಲ್ಲಿ 8 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡುತ್ತಿದ್ದ ಕೊಹ್ಲಿ ಒಮ್ಮೆ ಮಾತ್ರ ಊಟ ಮಾಡುತ್ತಿದ್ದರು. ಆ ಸಮಯದಲ್ಲಿ ನಾವು ಫ್ಲೈಟ್‌ನಿಂದ ಇಳಿದಾಗ, ಅವರು ಮೊದಲು ಜಿಮ್‌ಗೆ ಹೋಗುತ್ತಿರುತ್ತಿದ್ದರು. ಇದು ಎಲ್ಲರಿಗೂ ಗೊತ್ತಿರದಿದ್ದರೂ ಅವರು ತೂಕ ಇಳಿಸಿಕೊಳ್ಳಲು ಶ್ರಮಿಸಿದ್ದಾರೆ. ಕೊಹ್ಲಿಗೆ ಛೋಲಾ ಭಟೂರ ಅಂದ್ರೆ ತುಂಬಾನೇ ಇಷ್ಟ.. ಆದರೆ ವಿರಾಟ್​ ಅದನ್ನು ಬಹಳ ಸಮಯದಿಂದ ತಿನ್ನುವುದನ್ನು ಬಿಟ್ಟಿದ್ದಾನೆ ಎಂದು ಇಶಾಂತ್​ ಹೇಳಿದ್ದಾರೆ.

ಧೋನಿ ನಾಯಕತ್ವದ ಬಗ್ಗೆ ಹೇಳಿದ್ದು ಹೀಗೆ..: ನಾಯಕನಾಗಿ ವಿರಾಟ್ ಕೊಹ್ಲಿ ತುಂಬಾ ಒಳ್ಳೆಯವರಾಗಿದ್ದರು. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ನಾವು ಆಡುತ್ತಿರುವಾಗ ಅದು ಆರಂಭಿಕ ಸಮಯವಾಗಿತ್ತು. ಆಗ ಶಮಿ ಮತ್ತು ಉಮೇಶ್ ಹೊಸಬರು ಮತ್ತು ನಾನು ಮಾತ್ರ ಅಲ್ಲಿ ಹಾಜರಿದ್ದೆ. ಭುವನೇಶ್ವರ್ ಕುಮಾರ್ ಕೂಡ ಇರಲಿಲ್ಲ. ಧೋನಿಗಿಂತ ಉತ್ತಮ ಸಂಭಾಷಣೆಕಾರರು ಯಾರೂ ಇಲ್ಲ. ಅವರು ಎಲ್ಲವನ್ನೂ ಚೆನ್ನಾಗಿ ತಿಳಿದಿದ್ದಾರೆ ಮತ್ತು ಬೌಲರ್‌ಗಳಿಂದಲೂ ಸಾಕಷ್ಟು ಸಲಹೆಗಳನ್ನು ತೆಗೆದುಕೊಳ್ಳುತ್ತಾರೆ ಎಂದರು.

ಯಾರೊಂದಿಗೆ ಬೌಲಿಂಗ್ ಮಾಡಲು ನಿಮಗೆ ಇಷ್ಟ?: ಶಮಿ ಮತ್ತು ಬುಮ್ರಾ ಅವರೊಂದಿಗೆ ನನ್ನ ಅಂಕಿ - ಅಂಶಗಳು ತುಂಬಾ ಚೆನ್ನಾಗಿವೆ. ಆದರೆ ನಾನು ಜಹೀರ್ ಭಾಯ್ ಅವರೊಂದಿಗೆ ಬೌಲಿಂಗ್ ಮಾಡುವುದನ್ನು ನಿಜವಾಗಿಯೂ ಆನಂದಿಸಿದ್ದೇನೆ. ಎಲ್ಲವನ್ನೂ ತುಂಬಾ ಸರಳವಾಗಿ ತಿಳಿಸುತ್ತಿದ್ದರು. ರಿವರ್ಸ್ ಸ್ವಿಂಗ್ ಮಾಡುವುದು ಹೇಗೆ ಎಂದು ಅವರು ನನಗೆ ಹೇಳಿದರು. ಬ್ಯಾಟ್ಸ್‌ಮನ್ ಯಾವಾಗಲೂ ಚೆಂಡಿನ ಹೊಳಪನ್ನು ನೋಡುತ್ತಾನೆ, ಆದ್ದರಿಂದ ಯಾವಾಗಲೂ ಚೆಂಡನ್ನು ಇನ್ನೊಂದು ಕಡೆ ಇಟ್ಟುಕೊಂಡು ಓಡಲು ಪ್ರಾರಂಭಿಸಿ ಎಂದು ನನಗೆ ಜಹೀರ್​ ಭಾಯ್​ ಸಲಹೆ ನೀಡಿದ್ದರು ಎಂದು ಇಶಾಂತ್​ ಹೇಳಿದರು.

2023ರ ವಿಶ್ವಕಪ್ ಭಾರತ ಗೆಲ್ಲುವ ಸಾಧ್ಯತೆಗಳೇನು?: ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, ತವರಿನ ಅನುಕೂಲಕ್ಕೆ ಹೆಚ್ಚಿನ ಅವಕಾಶ ಸಿಗಲಿದೆ. 2011ರಲ್ಲಿಯೂ ಆಸ್ಟ್ರೇಲಿಯಾ ವಿರುದ್ಧ ಕಠಿಣ ಸವಾಲು ಎದುರಿಸಿದ್ದ ನಮ್ಮ ತಂಡ ಈ ಬಾರಿ ಇಲ್ಲಿ ವಿಶ್ವಕಪ್ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದರು.

ಓದಿ: ಏಷ್ಯಾಕಪ್ 2023: ನೇಪಾಳದ ವಿರುದ್ಧ ಪಾಕಿಸ್ತಾನದ 11 ಆಟಗಾರರ ತಂಡ ಪ್ರಕಟ, ತಂಡಕ್ಕೆ ಮರಳಿದ ಇಫ್ತಿಕರ್, ನಸೀಮ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.