ETV Bharat / sports

2022ರ ಐಪಿಎಲ್​ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಇಶಾನ್ ಕಿಶನ್​ - mumbai indians

ತಂಡದ ನಾಯಕ ರೋಹಿತ್ ಶರ್ಮಾ 16 ಕೋಟಿ ರೂ. ಪಡೆದಿದ್ದಾರೆ. ಅದೇ ಟೀಂನಲ್ಲಿ ಇಶಾನ್​ 2ನೇ ಗರಿಷ್ಠ ಬೆಲೆ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈವರೆಗಿನ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಭಾರತದ 2ನೇ ಆಟಗಾರನಾಗಿದ್ದಾರೆ..

Ishan Kishan becomes 2nd most expensive Indian player in IPL auction
2022ರ ಐಪಿಎಲ್​ನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಇಶಾನ್ ಕಿಶನ್​
author img

By

Published : Feb 12, 2022, 5:06 PM IST

ಬೆಂಗಳೂರು : ಯುವ ವಿಕೆಟ್ ಕೀಪರ್​ ಬ್ಯಾಟರ್​ ಇಶಾನ್ ಕಿಶನ್​ ಅವರನ್ನು ಖರೀದಿಸಲು ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದ್ದಾರೆ. ದಾಖಲೆಯ ಕೋಟಿ ರೂ. ನೀಡಿ ಖರೀದಿಸುವಲ್ಲಿ ಮುಂಬೈ ಇಂಡಿಯನ್ಸ್​ ಫ್ರಾಂಚೈಸಿ ಯಶಸ್ವಿಯಾಗಿದೆ.

ಕಳೆದ ಎರಡು ಆವೃತ್ತಿಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ಭಾರತ ತಂಡಕ್ಕೆ ಸೇರ್ಪಡೆಗೊಂಡಿರುವ ಇಶಾನ್‌ರನ್ನು ಖರೀದಿಸಲು ಮುಂಬೈ ಇಂಡಿಯನ್ಸ್​, ಸನ್​ರೈಸರ್ಸ್​ ಹೈದಾರಾಬಾದ್​ ಮತ್ತು ಗುಜರಾತ್ ಟೈಟನ್ಸ್​ ಫ್ರಾಂಚೈಸಿಗಳು ಭಾರಿ ಪೈಪೋಟಿ ನಡೆಸಿದರು.

ಉದಯೋನ್ಮುಖ ಆಟಗಾರನನ್ನು ಬರೋಬ್ಬರಿ 15.25 ಕೋಟಿ ರೂ. ನೀಡಿ ಖರೀದಿಸುವಲ್ಲಿ ಮುಂಬೈ ಯಶಸ್ವಿಯಾಗಿದೆ. 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದ ಆಟಗಾರನಿಗೆ 5 ಬಾರಿಯ ಚಾಂಪಿಯನ್​ ತಂಡ 15.25 ಕೋಟಿ ರೂ. ನೀಡಿದೆ.

ತಂಡದ ನಾಯಕ ರೋಹಿತ್ ಶರ್ಮಾ 16 ಕೋಟಿ ರೂ. ಪಡೆದಿದ್ದಾರೆ. ಅದೇ ಟೀಂನಲ್ಲಿ ಇಶಾನ್​ 2ನೇ ಗರಿಷ್ಠ ಬೆಲೆ ಪಡೆದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಈವರೆಗಿನ ಐಪಿಎಲ್​ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಬಿಕರಿಯಾದ ಭಾರತದ 2ನೇ ಆಟಗಾರನಾಗಿದ್ದಾರೆ.

2018ರಲ್ಲಿ ಇಶಾನ್​ರನ್ನು ಮುಂಬೈ ತಂಡ 6.20 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ, ಮೊದಲೆರಡು ಪ್ರಾಶಸ್ತ್ಯದಲ್ಲಿ ರೋಹಿತ್ ಮತ್ತು ಬುಮ್ರಾರನ್ನು ರಿಟೈನ್ ಮಾಡಿಕೊಂಡಿದ್ದರಿಂದ ಇಶಾನ್​ ಕಿಶನ್​ ತಾವಾಗಿಯೇ ಹರಾಜಿಗೆ ಹೋಗಲು ನಿರ್ಧರಿಸಿದ್ದರು.

ಇಶಾನ್​ ಕಿಶನ್​ 110 ಪಂದ್ಯಗಳಿಂದ 133ರ ಸ್ಟ್ರೈಕ್​ರೇಟ್​​ನಲ್ಲಿ 2,726 ರನ್ ​ಗಳಿಸಿದ್ದಾರೆ. 2 ಶತಕ ಮತ್ತು 15 ಅರ್ಧಶತಕ ಬಾರಿಸಿದ್ದಾರೆ.

ಇದನ್ನೂ ಓದಿ: ರೈನಾ, ಸ್ಟೀವ್​ ಸ್ಮಿತ್ ಸೇರಿದಂತೆ ಅನ್​ಸೋಲ್ಡ್ ಆದ ಸ್ಟಾರ್​ ಕ್ರಿಕೆಟಿಗರು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.