ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಬಿಗಿ ಹಿಡಿತ ಸಾಧಿಸಿದೆ. ಸೋಮವಾರ ಕೊನೆಯ ದಿನವಾಗಿದ್ದು, ವಿಂಡೀಸ್ಗೆ ಗೆಲ್ಲಲು 289 ರನ್ ಬೇಕಿವೆ. ಕೈಯಲ್ಲಿ 8 ವಿಕೆಟ್ಗಳಿವೆ. 4 ನೇ ದಿನದಾಟದಲ್ಲಿ ಭರ್ಜರಿ ಬ್ಯಾಟ್ ಮಾಡಿದ ರೋಹಿತ್ ಪಡೆ ಕೆರೆಬಿಯನ್ನರಿಗೆ 365 ರನ್ಗಳ ಬೃಹತ್ ಗುರಿ ನೀಡಿದೆ.
-
Ishan Kishan said "Virat bhaiya backed me & told me to go & play at 4 - he took the initiative". pic.twitter.com/C839Au1wau
— Johns. (@CricCrazyJohns) July 24, 2023 " class="align-text-top noRightClick twitterSection" data="
">Ishan Kishan said "Virat bhaiya backed me & told me to go & play at 4 - he took the initiative". pic.twitter.com/C839Au1wau
— Johns. (@CricCrazyJohns) July 24, 2023Ishan Kishan said "Virat bhaiya backed me & told me to go & play at 4 - he took the initiative". pic.twitter.com/C839Au1wau
— Johns. (@CricCrazyJohns) July 24, 2023
4 ನೇ ದಿನದಾಟದಲ್ಲಿ ಹೊಡಿಬಡಿ ಆಟಕ್ಕಿಳಿದ ಭಾರತ 2 ವಿಕೆಟ್ಗೆ 181 ರನ್ ಗಳಿಸಿತು. ರೋಹಿತ್ ಕೇವಲ 44 ಎಸೆತಗಳಲ್ಲಿ 57 ರನ್ ಬಾರಿಸಿದರೆ, ಜೈಸ್ವಾಲ್ 38, ಶುಭ್ಮನ್ ಗಿಲ್ 29, ಇಶಾನ್ ಕಿಶನ್ ಸ್ಫೋಟಕ 52 ರನ್ ಮಾಡಿದರು. ನಾಲ್ಕನೇ ಕ್ರಮಾಂಕದಲ್ಲಿ ಸಹಜವಾಗಿ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇಳಿಯುತ್ತಾರೆ. ಆದರೆ, ಇಶಾನ್ ಕಿಶನ್ ಮೈದಾನಕ್ಕಿಳಿದು ಭರ್ಜರಿ ಬ್ಯಾಟ್ ಬೀಸಿದರು.
ಭಾರತದ ಪ್ಲಾನ್ ಸಕ್ಸಸ್: ಕಡಿಮೆ ಅವಧಿಯಲ್ಲಿ ಹೆಚ್ಚು ರನ್ ಮಾಡುವ ಯೋಜನೆಯೊಂದಿಗೆ 2 ನೇ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಅಂದುಕೊಂಡಂತೆ ಮಾಡಿತು. ಆರಂಭಿಕ ಜೋಡಿ ರೋಹಿತ್- ಜೈಸ್ವಾಲ್ 12 ಓವರ್ಗಳಲ್ಲಿ 98 ರನ್ ಅಬ್ಬರದ ಜೊತೆಯಾಟ ನೀಡಿದರು. ಇಬ್ಬರೂ ಔಟಾದ ಬಳಿಕ ಶುಭ್ಮನ್ ಗಿಲ್ ಜೊತೆ ನಾಲ್ಕನೇ ಕ್ರಮಾಂಕಕ್ಕೆ ಕಿಶನ್ ಮೈದಾನಕ್ಕಿಳಿದರು. ಇದು ಅಚ್ಚರಿಗೆ ಕಾರಣವಾಗಿತ್ತು.
ಕಿಶನ್ ಸೂಚಿಸಿದ ವಿರಾಟ್: ನಾಲ್ಕನೇ ಕ್ರಮಾಂಕಕ್ಕೆ ವಿರಾಟ್ ಬದಲಾಗಿ ಇಶಾನ್ ಕಿಶನ್ ಅವರನ್ನು ಆಡಲು ತಂಡ ನಿರ್ಧರಿಸಿತು. ಇದರ ಪ್ರಸ್ತಾಪ ಮಾಡಿದ್ದೇ ವಿರಾಟ್ ಕೊಹ್ಲಿ ಎಂಬುದು ವಿಶೇಷ. ಡ್ರೆಸ್ಸಿಂಗ್ ರೂಮ್ನಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಇಶಾನ್ ಕಿಶನ್ರನ್ನು ಕಳುಹಿಸಲು ಸಲಹೆ ಬಂದಿತು. ಇದಕ್ಕೆ ತಂಡ ಒಪ್ಪಿತು.
ವಿರಾಟ್ ಸಲಹೆ, ಮ್ಯಾನೇಜ್ಮೆಂಟ್ ನಿರ್ಧಾರವನ್ನು ಸಮರ್ಥಿಸಿಕೊಂಡ ಯುವ ಆಟಗಾರ 4 ನೇ ಕ್ರಮಾಂಕದಲ್ಲಿ ಧೂಳೆಬ್ಬಿಸಿದರು. ಅತಿ ಕಡಿಮೆ ಸಮಯದಲ್ಲಿ 34 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಚಚ್ಚಿ ಅಜೇಯ 52 ರನ್ ಗಳಿಸಿದರು. ಇದಾದ ಬಳಿಕ ನಾಯಕ ರೋಹಿತ್ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಆತಿಥೇಯರಿಗೆ 365 ರನ್ಗಳ ಟಾರ್ಗೆಟ್ ನೀಡಿದರು.
ಪಂದ್ಯ ಮುಗಿದ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಇಶಾನ್ ಕಿಶನ್, ಮಳೆ ವಿರಾಮದ ನಂತರ 10 ರಿಂದ 12 ಓವರ್ಗಳಲ್ಲಿ ವೇಗವಾಗಿ ಆಡಿ 70ರಿಂದ 80 ರನ್ ಗಳಿಸಿ, ಎದುರಾಳಿಗೆ 370ರಿಂದ 380 ಟಾರ್ಗೆಟ್ ನೀಡುವುದು ಯೋಜನೆಯಾಗಿತ್ತು. ವಿಂಡೀಸ್ ನಾಯಕ ಎಡಗೈ ಮತ್ತು ಬಲಗೈ ಬೌಲರ್ಗಳನ್ನು ಬಳಸುತ್ತಿದ್ದರು. ಹೀಗಾಗಿ ವಿರಾಟ್ ಕೊಹ್ಲಿ ತನ್ನನ್ನು ಆಡಲು ಕಳುಹಿಸಿದರು ಎಂದು ಹೇಳಿದರು.
ಮೊದಲ ಇನಿಂಗ್ಸ್ನಲ್ಲಿ 7 ನೇ ಕ್ರಮಾಂಕದಲ್ಲಿ ಆಡಿದ್ದ ಕಿಶನ್ 25 ರನ್ ಮಾಡಿದ್ದರು. ಮೊದಲ ಟೆಸ್ಟ್ನಲ್ಲಿ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್ ಮೊದಲ ಇನಿಂಗ್ಸ್ನಲ್ಲಿ ಅಜೇಯ 1 ರನ್ ಗಳಿಸಿದ್ದರು. ಎರಡನೇ ಇನಿಂಗ್ಸ್ ಆಡಲು ಅವಕಾಶ ಸಿಕ್ಕಿರಲಿಲ್ಲ.
ಇದನ್ನೂ ಓದಿ: ಭಾರತ vs ವೆಸ್ಟ್ ಇಂಡೀಸ್ ಅಂತಿಮ ಟೆಸ್ಟ್: ವಿಂಡೀಸ್ ಗೆಲುವಿಗೆ ಬೇಕು 289 ರನ್