ಮುಂಬೈ : ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. ಅವರ ಪತ್ನಿ ಸಫಾ ಬೇಗ್ ಮಂಗಳವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿಯ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಇರ್ಫಾನ್ ಪಠಾಣ್ ಹಂಚಿಕೊಂಡಿದ್ದಾರೆ.
2016ರ ಫೆಬ್ರವರಿಯಲ್ಲಿ ಇರ್ಫಾನ್ ಪಠಾಣ್ ಸೌದಿ ಅರೇಬಿಯಾದ ಸಫಾ ಬೇಗಮ್ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಅದೇ ವರ್ಷ ಡಿಸೆಂಬರ್ನಲ್ಲಿ ಮೊದಲ ಮಗು ಜನಿಸಿತ್ತು. ಆ ಮಗುವಿಗೆ ಇಮ್ರಾನ್ ಖಾನ್ ಪಠಾಣ್ ಎಂದು ಹೆಸರಿಡಲಾಗಿದೆ.
ಸಫಾ ಮತ್ತು ನಾನು ಎರಡನೇ ಗಂಡು ಮಗು ಸುಲೇಮಾನ್ ಖಾನ್ನನ್ನು ಸ್ವಾಗತಿಸಿದ್ದೇವೆ. ಮಗು ಮತ್ತು ತಾಯಿ ಇಬ್ಬರು ಆರೋಗ್ಯದಿಂದಿದ್ದಾರೆ ಎಂದು ಇರ್ಫಾನ್ ಪಠಾಣ್ ಮಂಗಳವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
-
Safa and me welcome our baby boy SULEIMAN KHAN. Both baby and mother are fine and healthy. #Blessings pic.twitter.com/yCVoqCAggW
— Irfan Pathan (@IrfanPathan) December 28, 2021 " class="align-text-top noRightClick twitterSection" data="
">Safa and me welcome our baby boy SULEIMAN KHAN. Both baby and mother are fine and healthy. #Blessings pic.twitter.com/yCVoqCAggW
— Irfan Pathan (@IrfanPathan) December 28, 2021Safa and me welcome our baby boy SULEIMAN KHAN. Both baby and mother are fine and healthy. #Blessings pic.twitter.com/yCVoqCAggW
— Irfan Pathan (@IrfanPathan) December 28, 2021
ಮಧ್ಯಮ ವೇಗಿಯಾಗಿ ವೃತ್ತಿ ಜೀವನ ಆರಂಭಿಸಿದ್ದ ಇರ್ಫಾನ್ ಪಠಾಣ್, ತಮ್ಮ 19ನೇ ವಯಸ್ಸಿನಲ್ಲೇ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಇವರನ್ನ ಆರಂಭದ ದಿನಗಳಲ್ಲೇ ಪಾಕಿಸ್ತಾನದ ಲೆಜೆಂಡರಿ ವೇಗಿ ವಾಸಿಮ್ ಅಕ್ರಮ್ರೊಂದಿಗೆ ಹೋಲಿಕೆ ಮಾಡಲಾಗುತ್ತಿತ್ತು.
2006ರಲ್ಲಿ ಮೊದಲ ಓವರ್ನಲ್ಲೇ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ವಿಶ್ವ ದಾಖಲೆಗೆ ಪಾತ್ರರಾಗಿದ್ದರು. ಅವರು ಪಾಕಿಸ್ತಾನದಲ್ಲಿ ಈ ಸಾಧನೆ ಮಾಡಿದ್ದರು.
29 ಟೆಸ್ಟ್, 120 ಏಕದಿನ ಮತ್ತು 24 ಟಿ20 ಪಂದ್ಯಗಳಿಂದ ಕ್ರಮವಾಗಿ 100, 173 ಮತ್ತು 28 ವಿಕೆಟ್ ಜೊತೆಗೆ 1105 ಟೆಸ್ಟ್ ರನ್, 1544 ಏಕದಿನ ರನ್ಗಳಿಸುವ ಮೂಲಕ ಭಾರತದ ಶ್ರೇಷ್ಠ ಆಲ್ರೌಂಡರ್ ಪಟ್ಟಿಯಲ್ಲಿ ಕಪಿಲ್ ದೇವ್ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಇನ್ನಿಂಗ್ಸ್ ಸೋಲಿನೊಂದಿಗೆ 18 ವರ್ಷಗಳ ಹಿಂದಿನ ಬೇಡದ ದಾಖಲೆಗೆ ಪಾತ್ರವಾದ ಇಂಗ್ಲೆಂಡ್!