ಬರೋಡ : ಭಾರತ ತಂಡದ ಮಾಜಿ ಕ್ರಿಕೆಟಿಗರಾದ ಇರ್ಫಾನ್ ಪಠಾಣ್ ಮತ್ತು ಯೂಸುಫ್ ಪಠಾಣ್ ಭಾರತದಲ್ಲಿ ಕೋವಿಡ್ ಹೋರಾಟಕ್ಕೆ ನೀಡುತ್ತಿರುವ ಬೆಂಬಲವನ್ನು ಮುಂದುವರಿಸಿದ್ದಾರೆ.
ಈಗಾಗಲೇ ಪಠಾಣ್ ಫೌಂಡೇಷನ್ ಮೂಲಕ ಸಾವಿರಾರು ಕುಟುಂಬಗಳಿಗೆ ಒಂದು ತಿಂಗಳ ರೇಷನ್ ಒದಗಿಸಿಕೊಟ್ಟಿದ್ದ ಪಠಾಣ್ ಸಹೋದರರು ಇದೀಗ ಮತ್ತೆ ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ವಿವಿಧ ಕೋವಿಡ್ ಸೆಂಟರ್ಗಳಿಗೆ ದೇಣಿಗೆ ನೀಡಲು ಸಿದ್ಧರಾಗಿದ್ದಾರೆ.
-
One more slot ready to go to our ppl 🇮🇳 #oxygen #pathanfoundation @iamyusufpathan pic.twitter.com/xAo4fHhkpr
— Irfan Pathan (@IrfanPathan) May 24, 2021 " class="align-text-top noRightClick twitterSection" data="
">One more slot ready to go to our ppl 🇮🇳 #oxygen #pathanfoundation @iamyusufpathan pic.twitter.com/xAo4fHhkpr
— Irfan Pathan (@IrfanPathan) May 24, 2021One more slot ready to go to our ppl 🇮🇳 #oxygen #pathanfoundation @iamyusufpathan pic.twitter.com/xAo4fHhkpr
— Irfan Pathan (@IrfanPathan) May 24, 2021
ಜನರಿಗಾಗಿ ನೆರವಾಗಲು 10 ಆಕ್ಸಿಜನ್ ಕಾನ್ಸಂಟ್ರೇಟರ್ಗಳು ಸಿದ್ಧವಾಗುತ್ತಿವೆ ಎಂದು ಇರ್ಫಾನ್ ಪಠಾಣ್ ತಮ್ಮ ಸಾಮಾಜಿಕ ಜಾಲಾತಾಣಗಳ ಖಾತೆಯಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಅಲ್ಲದೆ ವಾರದ ಹಿಂದೆಯಷ್ಟೇ ತಮ್ಮ ಸಾಮಾಜಿಕ ಜಾಲಾತಾಣಗಳಿಂದ ಬರುವ ಎಲ್ಲಾ ಆದಾಯವನ್ನು ಸಮಾಜ ಸೇವೆಗೆ ನೀಡುವುದಾಗಿ ಘೋಷಿಸಿದ್ದ ಇರ್ಫಾನ್,ಇದೀಗ ಅಂದುಕೊಂಡಂತೆ ನಡೆದುಕೊಳ್ಳುತ್ತಿದ್ದಾರೆ.
ಇದರ ಜೊತೆಗೆ ತಮ್ಮ ಅಭಿಮಾನಿಗಳು ಮತ್ತು ಸ್ನೇಹಿತರ ಕಡೆಯಿಂದಲೂ ಅವಶ್ಯಕತೆಯಿರುವವರಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳು, ವೈದ್ಯಕೀಯ ಸಲಕರಣೆಗಳನ್ನು ಒದಗಿಸಿಕೊಡುವ ಕೆಲಸವನ್ನು ಈ ಸಹೋದರರು ಪ್ರತಿದಿನ ಮಾಡುತ್ತಿದ್ದಾರೆ.
ಇದನ್ನು ಓದಿ: 90 ಸಾವಿರ ಕುಟುಂಬಗಳಿಗೆ ರೇಷನ್ ಕೊಟ್ಟ ಪಠಾಣ್; ಈಗ ಮತ್ತೊಂದು ಸಮಾಜಮುಖಿ ಕಾರ್ಯ!