ಡುಬ್ಲಿನ್(ಐರ್ಲೆಂಡ್): ಕ್ರಿಕೆಟ್ ಶಿಶು ಐರ್ಲೆಂಡ್ ವಿರುದ್ಧ ನಡೆದ ಎರಡನೇ ಟಿ20 ಪಂದ್ಯದಲ್ಲಿ ದೀಪಕ್ ಹೂಡಾ(104ರನ್) ಶತಕ ಸಿಡಿಸಿ ಅಬ್ಬರಿಸಿದ್ದು, ಎದುರಾಳಿ ತಂಡದ ಗೆಲುವಿಗೆ 226ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಆರಂಭದಲ್ಲೇ ವಿಕೆಟ್ ಕೀಪರ್ ಇಶಾನ್ ಕಿಶನ್(3) ವಿಕೆಟ್ ಕಳೆದುಕೊಂಡಿತು. ಈ ವೇಳೆ ಒಂದಾದ ಸ್ಯಾಮ್ಸನ್ ಹಾಗೂ ದೀಪಕ್ ಹೂಡಾ ಜೋಡಿ ಐರ್ಲೆಂಡ್ ಬೌಲರ್ಗಳನ್ನ ಬೆಂಡೆತ್ತಿದರು.
ದೀಪಕ್ ಹೂಡಾ ತಾವು ಎದುರಿಸಿದ 57 ಎಸೆತಗಳಲ್ಲಿ 6 ಸಿಕ್ಸರ್, 9 ಬೌಂಡರಿ ಸಮೇತ 104ರನ್ಗಳಿಕೆ ಮಾಡಿದರೆ, ಸ್ಯಾಮ್ಸನ್ 4 ಸಿಕ್ಸರ್, 9 ಬೌಂಡರಿ ಸಮೇತ 42 ಎಸೆತಗಳಲ್ಲಿ 77ರನ್ಗಳಿಸಿದರು. ಈ ಜೋಡಿ ಮುರಿಯದ ಜೊತೆಯಾಟವಾಡಿ 176 ರನ್ಗಳ ಕಾಣಿಕೆ ನೀಡಿತು.
-
Innings Break!
— BCCI (@BCCI) June 28, 2022 " class="align-text-top noRightClick twitterSection" data="
A mammoth 176 run partnership between @HoodaOnFire & @IamSanjuSamson propels #TeamIndia to a total of 227/7 on the board.
Scorecard - https://t.co/6Ix0a6dXCj #IREvIND pic.twitter.com/UkqThwKHVU
">Innings Break!
— BCCI (@BCCI) June 28, 2022
A mammoth 176 run partnership between @HoodaOnFire & @IamSanjuSamson propels #TeamIndia to a total of 227/7 on the board.
Scorecard - https://t.co/6Ix0a6dXCj #IREvIND pic.twitter.com/UkqThwKHVUInnings Break!
— BCCI (@BCCI) June 28, 2022
A mammoth 176 run partnership between @HoodaOnFire & @IamSanjuSamson propels #TeamIndia to a total of 227/7 on the board.
Scorecard - https://t.co/6Ix0a6dXCj #IREvIND pic.twitter.com/UkqThwKHVU
104ರನ್ಗಳಿಕೆ ಮಾಡಿದ್ದ ಹೂಡಾ ಲಿಟ್ಲಿ ಓವರ್ನಲ್ಲಿ ವಿಕೆಟ್ ಒಪ್ಪಿಸಿದರೆ, ಸ್ಯಾಮ್ಸನ್ ಮಾರ್ಕ್ ಓವರ್ನಲ್ಲಿ ಔಟಾದರು. ಇದಾದ ಬಳಿಕ ಬಂದ ಸೂರ್ಯಕುಮಾರ್ ಯಾದವ್(15ರನ್), ಹಾರ್ದಿಕ್ ಪಾಂಡ್ಯ(15ರನ್) ಗಳಿಸಿದರೆ, ದಿನೇಶ್ ಕಾರ್ತಿಕ್, ಅಕ್ಸರ್ ಪಟೇಲ್ ಹಾಗೂ ಹರ್ಷಲ್ ಪಟೇಲ್ ಶೂನ್ಯ ಸುತ್ತಿದರು.
ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 225 ರನ್ಗಳಿಕೆ ಮಾಡಿದ್ದು, ಎದುರಾಳಿ ತಂಡಕ್ಕೆ 226ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಐರ್ಲೆಂಡ್ ಪರ ಮಾರ್ಕ್ 3 ವಿಕೆಟ್ ಪಡೆದರೆ, ಲಿಟ್ಲ್ ಹಾಗೂ ಯಂಗ್ ತಲಾ 2 ವಿಕೆಟ್ ಪಡೆದುಕೊಂಡರು.
ಟಿ20ಯಲ್ಲಿ ಶತಕ ಸಿಡಿಸಿದ 4ನೇ ಭಾರತೀಯ: ಐರ್ಲೆಂಡ್ ವಿರುದ್ಧ ನಡೆದ 2ನೇ ಟಿ20ಯಲ್ಲಿ ಶತಕ ಸಿಡಿಸಿದ ದೀಪಕ್ ಹೂಡಾ ವಿಶೇಷ ಸಾಧನೆ ಮಾಡಿದ್ದಾರೆ. ಚುಟುಕು ಕ್ರಿಕೆಟ್ನಲ್ಲಿ ರೈನಾ, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಬಳಿಕ ಸೆಂಚುರಿ ಬಾರಿಸಿರುವ 4ನೇ ಭಾರತೀಯ ಬ್ಯಾಟರ್ ಆಗಿದ್ದಾರೆ.