ETV Bharat / sports

ಭಾರತ-ಐರ್ಲೆಂಡ್‌ ಮೊದಲ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ: ಭಾರತಕ್ಕೆ 139 ರನ್​ ಗುರಿ - ಪ್ರಸಿದ್ಧ ಕೃಷ್ಣ

Ireland vs India1st T20I: ಐರ್ಲೆಂಡ್​-ಭಾರತ ನಡುವಿನ ಮೂರು ಟಿ20 ಸರಣಿಯ ಮೊದಲ ಪಂದ್ಯ ನಡೆಯುತ್ತಿದ್ದು ಐರ್ಲೆಂಡ್​ 139 ರನ್​ಗಳ ಗುರಿ ನೀಡಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

Ireland vs India1st T20I
Ireland vs India1st T20I
author img

By

Published : Aug 18, 2023, 7:26 PM IST

Updated : Aug 18, 2023, 11:00 PM IST

ಡಬ್ಲಿನ್​ (ಐರ್ಲೆಂಡ್​): ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಿದ್ದು, ಮೊದಲ ಪಂದ್ಯ ಡಬ್ಲಿನ್‌ನ ವಿಲೇಜ್​ ಮೈದಾನದಲ್ಲಿ ನಡೆಯುತ್ತಿದೆ. ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಲು ಎರಡೂ ತಂಡಗಳು ತವಕಿಸುತ್ತಿವೆ. ಟಾಸ್ ಗೆದ್ದ ಬುಮ್ರಾ ಪಡೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು.

ಮೊದಲು ಬ್ಯಾಟ್ ಮಾಡಿದ ಐರ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದೆ. ಐರ್ಲೆಂಡ್ ಪರ ಬ್ಯಾರಿ ಮೆಕಾರ್ಥಿ ಅರ್ಧಶತಕ ಗಳಿಸಿ ಗರಿಷ್ಠ ಸ್ಕೋರರ್​ ಆದರು. ಭಾರತದ ಪರ ಬುಮ್ರಾ, ಪ್ರಸಿದ್ಧ ಕೃಷ್ಣ ಮತ್ತು ರವಿ ಬಿಷ್ನೋಯಿ ತಲಾ 2 ವಿಕೆಟ್ ಪಡೆದರು. ಇದಕ್ಕುತ್ತರವಾಗಿ ಭಾರತ 6.5 ಓವರ್‌ಗಳಲ್ಲಿ ಎರಡು ವಿಕೆಟ್‌ ನಷ್ಟಕ್ಕೆ 47 ರನ್​ ಗಳಿಸಿದೆ. ಸದ್ಯ ಮಳೆಯಿಂದಾಗಿ ಪಂದ್ಯ ನಿಂತಿದೆ. ಭಾರತವು ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಎರಡು ರನ್ ಮುಂದಿದ್ದು, ಒಂದು ವೇಳೆ ಪಂದ್ಯ ಆರಂಭಗೊಳ್ಳದಿದ್ದಲ್ಲಿ ಭಾರತ ಗೆಲುವು ಸಾಧಿಸಲಿದೆ.

ಐರ್ಲೆಂಡ್ ಕಳಪೆ ಆರಂಭ ಪಡೆಯಿತು. 31 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ ಕಳೆದುಕೊಂಡಿತ್ತು. 11 ತಿಂಗಳ ನಂತರ ಕ್ರಿಕೆಟ್‌ಗೆ ಮರಳಿದ ಜಸ್ಪ್ರೀತ್ ಬುಮ್ರಾ ಮೊದಲ ಓವರ್‌ನಲ್ಲೇ ಐರ್ಲೆಂಡ್​ನ ಎರಡು ವಿಕೆಟ್​ಗಳನ್ನು ಪಡೆದರು. ಆಂಡ್ರ್ಯೂ ಬಲ್ಬಿರ್ನಿ (4) ಮತ್ತು ಲಾರ್ಕೆನ್ ಟಕರ್ (0) ಅವರ ವಿಕೆಟ್​ ಉರುಳಿಸಿದರು. ಇದರ ನಂತರ, ಐದನೇ ಓವರ್‌ನಲ್ಲಿ, ಪ್ರಸಿದ್ಧ ಕೃಷ್ಣ ಕೂಡ ಹ್ಯಾರಿ ಟೆಕ್ಟರ್ ವಿಕೆಟ್​ ಪಡೆದರು. ರವಿ ಬಿಷ್ಣೋಯ್ ನಾಯಕ ಪಾಲ್ ಸ್ಟಿರ್ಲಿಂಗ್ (11) ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಏಳನೇ ಓವರ್‌ನಲ್ಲಿ ಡಾಕ್ರೆಲ್ (1) ವಿಕೆಟ್​ ಪಡೆಯುವ ಮೂಲಕ ಪ್ರಸಿದ್ದ ಕೃಷ್ಣ ಐರ್ಲೆಂಡ್‌ಗೆ ಐದನೇ ಹೊಡೆತ ನೀಡಿದರು. ಇದಾದ ಬಳಿಕ ಮಾರ್ಕ್ 16 ಎಸೆತಗಳಲ್ಲಿ 16 ರನ್ ಗಳಿಸಿ ಔಟಾದರು. ಕ್ಯಾಂಪರ್ ಮತ್ತು ಬ್ಯಾರಿ ಏಳನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನಡೆಸಿದರು.

ಸಂಜು ಸ್ಯಾಮ್ಸನ್​ಗೆ ಮತ್ತೊಂದು ಅವಕಾಶ: ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಸಾಮಾನ್ಯ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್​ಗೆ ಕೀಪಿಂಗ್​ ಮತ್ತು ಮಧ್ಯಮ ಕ್ರಮಾಂಕದ ಜವಾಬ್ದಾರಿ ನೀಡುವ ಸಾಧ್ಯತೆ ಇದೆ.

ಜೈಸ್ವಾಲ್​, ಗಾಯಕ್ವಾಡ್​ ಮೇಲೆ ಭರವಸೆ: ವೆಸ್ಟ್​ ಇಂಡೀಸ್​ನಲ್ಲಿ ಪಾದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್​ ಒಂದು ಅರ್ಧಶತಕದ ಮೂಲಕ ಗಮನಾರ್ಹ ಬ್ಯಾಟಿಂಗ್​ ಪ್ರದರ್ಶನ ಮಾಡಿದ್ದಾರೆ. ಇವರು ಐರ್ಲೆಂಡ್​ನಲ್ಲಿ ಮೂರು ಪಂದ್ಯಗಳನ್ನು ಸರಿಯಾಗಿ ಬಳಸಿಕೊಂಡಲ್ಲಿ ಮುಂದಿನ ವರ್ಷದ ವಿಶ್ವಕಪ್​ ತಂಡದ ಕದ ತಟ್ಟುವ ಅವಕಾಶವಿದೆ.

ತಂಡಗಳು ಇಂತಿವೆ: ಐರ್ಲೆಂಡ್​​: ಪಾಲ್ ಸ್ಟಿರ್ಲಿಂಗ್(ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಲೋರ್ಕನ್ ಟಕರ್( ವಿಕೆಟ್​ ಕೀಪರ್​), ಹ್ಯಾರಿ ಟೆಕ್ಟರ್, ಕರ್ಟಿಸ್ ಕ್ಯಾಂಫರ್, ಜಾರ್ಜ್ ಡಾಕ್ರೆಲ್, ಮಾರ್ಕ್ ಅಡೇರ್, ಬ್ಯಾರಿ ಮೆಕಾರ್ಥಿ, ಕ್ರೇಗ್ ಯಂಗ್, ಜೋಶುವಾ ಲಿಟಲ್, ಬೆಂಜಮಿನ್ ವೈಟ್

ಭಾರತ: ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​​), ತಿಲಕ್ ವರ್ಮಾ, ರಿಂಕು ಸಿಂಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಪ್ರಸಿದ್ಧ ಕೃಷ್ಣ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ (ನಾಯಕ), ರವಿ ಬಿಷ್ಣೋಯ್

ಇದನ್ನೂ ಓದಿ: IND vs IRE T20: ಇಂದಿನಿಂದ ಭಾರತ - ಐರ್ಲೆಂಡ್ ಟಿ-20 ಸರಣಿ ಆರಂಭ: ಐಪಿಎಲ್​ ಸ್ಟಾರ್​ಗಳ ಮೇಲೆ ಎಲ್ಲರ ಕಣ್ಣು

Last Updated : Aug 18, 2023, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.