ETV Bharat / sports

ಟಿ20ಯಲ್ಲಿ ಲೆಗ್‌ ಸ್ಪಿನ್ನರ್‌ ಚಹಾಲ್ 'ತ್ರಿಶತಕ' ಸಾಧನೆ!

author img

By

Published : Apr 3, 2023, 1:30 PM IST

ಯುಜುವೇಂದ್ರ ಚಹಾಲ್​ ನಿನ್ನೆ ನಡೆದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ನಾಲ್ಕು ವಿಕೆಟ್​ಗಳನ್ನು ಪಡೆದಿದ್ದಾರೆ. ಇದರೊಂದಿಗೆ ಅವರು ವಿನೂತನ ದಾಖಲೆಯನ್ನೂ ಬರೆದರು.

ಯುಜುವೇಂದ್ರ ಚಹಾಲ್
ಯುಜುವೇಂದ್ರ ಚಹಾಲ್

ನವದೆಹಲಿ: ಭಾನುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ ಹೈದರಾಬಾದ್ ವಿರುದ್ಧ 72 ರನ್‌ಗಳ ಅಂತರದಿಂದ ಭರ್ಜರಿ ಜಯ ಸಾಧಿಸುವ ಮೂಲಕ ಐಪಿಎಲ್​ ಹೊಸ ಋತುವಿನ ಜರ್ನಿ ಆರಂಭಿಸಿದೆ. ಪಂದ್ಯದಲ್ಲಿ ರಾಜಸ್ಥಾನ ಪರ ಬ್ಯಾಟಿಂಗ್​ ವಿಭಾಗದಲ್ಲಿ ಜಾಸ್​ ಬಟ್ಲರ್​, ಯಶಸ್ವಿ ಜೈಸ್ವಾಲ್​, ಸಂಜು ಸ್ಯಾಮ್ಸನ್ ಅಬ್ಬರಿಸಿದರೆ, ಬೌಲಿಂಗ್‌ನಲ್ಲಿ ಲೆಗ್​ ಸ್ಪಿನ್ನರ್​ ಯುಜುವೇಂದ್ರ ಚಹಾಲ್​ ಮಿಂಚಿದರು.

ಪಂದ್ಯದಲ್ಲಿ ಯುಜುವೇಂದ್ರ ಚಹಾಲ್​ 4 ವಿಕೆಟ್​ಗಳನ್ನು ಕಿತ್ತು ಅದ್ಭುತ ಪ್ರದರ್ಶನ ತೋರಿದರು. ಚಹಾಲ್​ ಬೌಲಿಂಗ್​ ದಾಳಿಗೆ ಸಿಲುಕಿದ ಹೈದರಾಬಾದ್​ ಆಟಗಾರರಾದ ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್, ಆದಿಲ್ ರಶೀದ್, ಭುವನೇಶ್ವರ್ ಕುಮಾರ್ ಬಹುಬೇಗನೇ ವಿಕೆಟ್​ ಒಪ್ಪಿಸಿ ಹೊರನಡೆದರು. ನಾಲ್ಕು ಓವರ್ ಬೌಲಿಂಗ್​ ಮಾಡಿದ ಚಹಾಲ್​ 17 ರನ್​ಗಳನ್ನಷ್ಟೇ ನೀಡಿ ನಾಲ್ಕು ವಿಕೆಟ್​ ಕಿತ್ತು ಸಂಭ್ರಮಿಸಿದರು.

ಇದೇ ಪಂದ್ಯದಲ್ಲಿ ಚಹಾಲ್​ ಹೊಸ ದಾಖಲೆ ಬರೆದಿದ್ದಾರೆ. ಟಿ20 ಪಂದ್ಯಗಳಲ್ಲಿ 300 ವಿಕೆಟ್​ ಪಡೆದ ಮೊದಲ ಭಾರತೀಯರಾಗಿ ಕ್ರಿಕೆಟ್​ ದಾಖಲೆಯ ಪುಟ ಸೇರಿದ್ದಾರೆ. 265 ಟಿ20 ಪಂದ್ಯಗಳಲ್ಲಿ ಚಹಾಲ್​ ಈ ಸಾಧನೆ ಮಾಡಿದ್ದಾರೆ. ಇವರ ನಂತರದ ಸ್ಥಾನದಲ್ಲಿ ರವಿಚಂದ್ರನ್​ ಅಶ್ವಿನ್, ಪಿಯೂಷ್ ಚಾವ್ಲಾ, ಅಮಿತ್ ಮಿಶ್ರಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಇದ್ದಾರೆ.

ಟಿ20ಯಲ್ಲಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ಆಟಗಾರರು:

  • ಯುಜ್ವೇಂದ್ರ ಚಾಹಲ್ - 303
  • ಆರ್.ಅಶ್ವಿನ್ - 287
  • ಪಿಯೂಷ್ ಚಾವ್ಲಾ - 276
  • ಅಮಿತ್ ಮಿಶ್ರಾ - 272
  • ಜಸ್ಪ್ರೀತ್ ಬುಮ್ರಾ - 256
  • ಭುವನೇಶ್ವರ್ ಕುಮಾರ್ - 256

5ನೇ ಬಾರಿ ನಾಲ್ಕು ವಿಕೆಟ್​ ಗೊಂಚಲು: 300 ವಿಕೆಟ್​ ಪಡೆದು ತ್ರಿಶತಕ ಸಾಧನೆ ಮಾಡಿರುವ ಚಹಾಲ್, ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ 4 ವಿಕೆಟ್​ ಪಡೆದ ಆಟಗಾರರ ಪಟ್ಟಿ ಸೇರ್ಪಡೆಗೊಂಡಿದ್ದಾರೆ. 5ನೇ ಬಾರಿಗೆ ಇವರು 4 ವಿಕೆಟ್​ ಪಡೆದಿದ್ದಾರೆ. ಇದಕ್ಕೂ ಮುನ್ನ ಐದು ಬಾರಿ ನಾಲ್ಕು ವಿಕೆಟ್ ಪಡೆದ ಸಾಧನೆ ಅಮಿತ್ ಮಿಶ್ರಾ ಹೆಸರಿನಲ್ಲಿ ದಾಖಲಾಗಿದೆ. ಐಪಿಎಲ್​ನಲ್ಲಿ​ ಅತಿ ಹೆಚ್ಚು ಬಾರಿ ನಾಲ್ಕು ವಿಕೆಟ್​ ಕಿತ್ತಿರುವ ಬೌಲರ್ ಎಂಬ​ ದಾಖಲೆ ವೆಸ್ಟ್​ ಇಂಡೀಸ್​ ಆಟಗಾರ ಸುನಿಲ್​ ನರೈನ್ ಹೆಸರಲ್ಲಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ಇದ್ದಾರೆ. ​

ಐಪಿಎಲ್‌ನಲ್ಲಿ ಹೆಚ್ಚು ಬಾರಿ ನಾಲ್ಕು ವಿಕೆಟ್ ಪಡೆದ ಬೌಲರ್‌ಗಳು:

  • ಸುನಿಲ್ ನರೈನ್ - 8
  • ಲಸಿತ್ ಮಾಲಿಂಗ - 7
  • ಕಗಿಸೊ ರಬಾಡ - 6
  • ಯುಜ್ವೇಂದ್ರ ಚಹಾಲ್ - 5
  • ಅಮಿತ್ ಮಿಶ್ರಾ - 5

ಇದನ್ನೂ ಓದಿ: IPLನಲ್ಲಿ 50ನೇ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಕೊಹ್ಲಿ!

12 ವರ್ಷಗಳ ಹಿಂದಿನ ಧೋನಿ ಶಾಟ್​ ನೆನಪಿಸಿದ ವಿರಾಟ್​ ಕೊನೆಯ ಸಿಕ್ಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.