ಚೆನ್ನೈ (ತಮಿಳುನಾಡು): ಐಪಿಎಲ್ 2023 ರ ಕ್ವಾಲಿಫೈಯರ್ 1 ಕ್ಕೆ ಮುಂಚಿತವಾಗಿ, ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸಲ್ಲಿಸಿದ್ದಾರೆ. ಧೋನಿಗೆ ಎಂದಿಗೂ ನಾನು ಅಭಿಮಾನಿ, ಧೋನಿಯನ್ನು ಮಣಿಸಲು ಡೆವಿಲ್ ಆಗಬೇಕಷ್ಟೇ ಇಲ್ಲದೇ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
-
Captain. Leader. Legend.@msdhoni is an emotion 💙 Here’s a special tribute from @hardikpandya7 to the one and only Thala ahead of a special matchday in Chennai! 🤝#GTvCSK | #PhariAavaDe | #TATAIPL Playoffs 2023 pic.twitter.com/xkrJETARbJ
— Gujarat Titans (@gujarat_titans) May 23, 2023 " class="align-text-top noRightClick twitterSection" data="
">Captain. Leader. Legend.@msdhoni is an emotion 💙 Here’s a special tribute from @hardikpandya7 to the one and only Thala ahead of a special matchday in Chennai! 🤝#GTvCSK | #PhariAavaDe | #TATAIPL Playoffs 2023 pic.twitter.com/xkrJETARbJ
— Gujarat Titans (@gujarat_titans) May 23, 2023Captain. Leader. Legend.@msdhoni is an emotion 💙 Here’s a special tribute from @hardikpandya7 to the one and only Thala ahead of a special matchday in Chennai! 🤝#GTvCSK | #PhariAavaDe | #TATAIPL Playoffs 2023 pic.twitter.com/xkrJETARbJ
— Gujarat Titans (@gujarat_titans) May 23, 2023
ಮಂಗಳವಾರ ಸಂಜೆ ಚೆಪಾಕ್‌ನಲ್ಲಿ ನಡೆಯಲಿರುವ ಮೊದಲ ಪ್ಲೇ-ಆಫ್‌ನಲ್ಲಿ ಹಾರ್ದಿಕ್ ನಾಯಕತ್ವದ ಗುಜರಾತ್ ಟೈಟಾನ್ಸ್ (ಜಿಟಿ)ಯು ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಸೆಣಸಲಿದೆ. ಎರಡೂ ತಂಡಗಳು ಲೀಗ್ನ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಹಾಲಿಚಾಂಪಿಯನ್ ಗುಜರಾತ್ ಈ ವರ್ಷ ಅವರ ಚಾರ್ಮ್ನ್ನು ಮುಂದುವರೆಸಿದ್ದಾರೆ.
ಗುಜರಾತ್ ಟೈಟಾನ್ಸ್ನ ಟ್ವಿಟರ್ ಹ್ಯಾಂಡಲ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹಾರ್ದಿಕ್ ಧೋನಿ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ, "ಹಲವು ಜನರು ಮಹೇಂದ್ರ ಸಿಂಗ್ ಗಂಭೀರವಾಗಿರುವ ವ್ಯಕ್ತಿ ಎಂದು ನೋಡುತ್ತಾರೆ. ಅವರನ್ನು ಹೊರಗಿನಿಂದ ಕಾಣುವಾಗ ಆ ರೀತಿ ಭಾಸವಾಗುತ್ತದೆ. ಆದರೆ ನಾನು ಅವರೊಂದಿಗೆ ಹಾಸ್ಯಗಳನ್ನು ಮಾಡಿದ್ದೇನೆ, ಅವರನ್ನು ನಾನು ಧೋನಿ ಎಂದು ನೋಡಿಲ್ಲ, ಒಬ್ಬ ಆತ್ಮೀಯನಂತೆ ಸ್ನೇಹ ಬೆಳೆಸಿಕೊಂಡಿದ್ದೇನೆ".
"ನಿಸ್ಸಂಶಯವಾಗಿ, ನಾನು ಅವನಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ, ಬಹಳಷ್ಟು ಧನಾತ್ಮಕ ವಿಷಯಗಳನ್ನು, ನಾನು ಅವರನ್ನು ನೋಡುತ್ತಾ ಕಲಿತಿದ್ದೇನೆ, ಹೆಚ್ಚು ಮಾತನಾಡುವುದಿಲ್ಲ. ಆದರೆ ನನಗೆ, ಅವರು ನನ್ನ ಆತ್ಮೀಯ ಸ್ನೇಹಿತ, ಪ್ರೀತಿಯ ಸಹೋದರ. ನಾನು ಅವರೊಂದಿಗೆ ಎಷ್ಟೇ ಕುಚೇಷ್ಟೆಗಳನ್ನು ಮಾಡಿದರೂ ಅವರು ತಾಳ್ಮೆಯಿಂದಲೇ ಇರುತ್ತಾರೆ. ಅವರನ್ನು ಸೋಲಿಸಬೇಕಾದರೆ ನಾವು ಡೆವಿಲ್ಗಳಾಗ ಬೇಕಾಗುತ್ತದೆ" ಎಂದು ಹೇಳಿಕೊಂಡಿದ್ದಾರೆ.
ಹಾರ್ದಿಕ್ ನೇತೃತ್ವದ ಗುಜರಾತ್ ಟೈಟಾನ್ಸ್ ಗುಂಪು ಹಂತಗಳಲ್ಲಿ ಅವರ 14 ಪಂದ್ಯಗಳಲ್ಲಿ 10 ಅನ್ನು ಗೆದ್ದು ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದ್ದಾರೆ. ಆವೃತ್ತಿಯಲ್ಲಿ +0.809 ರನ್ ರೇಟ್ ನೊಂದಿಗೆ 20 ಅಂಕಗಳು ತಂಡ ಪಡೆದುಕೊಂಡಿದೆ. ಮತ್ತೊಂದೆಡೆ, ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಈ ಋತುವಿನಲ್ಲಿ ಅವರ 14 ಪಂದ್ಯಗಳಲ್ಲಿ 8 ಅನ್ನು ಗೆದ್ದು, ಒಂದು ರದ್ದಾದ ಹಿನ್ನೆಲೆಯಲ್ಲಿ +0.652 ರನ್ ರೇಟ್ನಿಂದ 17 ಅಂಕದಿಂದ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.
ಈ ಎರಡು ತಂಡಗಳು ಐಪಿಎಲ್ 2023 ರ ಗುಂಪು ಹಂತದಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದವು, ಅಲ್ಲಿ ಗುಜರಾತ್ ಟೈಟಾನ್ಸ್ 5 ವಿಕೆಟ್‌ಗಳಿಂದ ಗೆದ್ದಿತು. ಒಟ್ಟಾರೆಯಾಗಿ, ಈ ಎರಡು ತಂಡಗಳು ಐಪಿಎಲ್ ಇತಿಹಾಸದಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದು, ಗುಜರಾತ್ ಟೈಟಾನ್ಸ್ ಎಲ್ಲಾ 3 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈ ವರೆಗೆ 4 ಬಾಕಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕಳೆದ ಬಾರಿಯಿಂದ ಲೀಗ್ಗೆ 10 ತಂಡಗಳನ್ನು ಸೇರಿಸಿಲಾಯಿತು. ಚೊಚ್ಚಲ ಆವೃತ್ತಿಯಲ್ಲೇ ಹಾರ್ದಿಕ್ ನಾಯತ್ವದಲ್ಲಿ ಗುಜರಾತ್ ಕಪ್ನ್ನು ತನ್ನದಾಗಿಸಿಕೊಂಡಿತು. ಈ ಬಾರಿ ಲಕ್ನೋ ಮಾತ್ರ ಚೊಚ್ಚಲ ಕಪ್ಗಾಗಿ ಎದುರು ನೋಡುತ್ತಿದೆ. ಮುಂಬೈ 5 ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಕ್ಕಿದೆ.
ಇದನ್ನೂ ಓದಿ: ನಾವು ಮತ್ತೆ ಬಲಶಾಲಿಯಾಗಿ ಮುಂದಿನ ಆವೃತ್ತಿಯಲ್ಲಿ ಬರುತ್ತೇವೆ: ವಿರಾಟ್ ಭಾವನಾತ್ಮಕ ಧನ್ಯವಾದ