ಇಂಡಿಯನ್ ಪ್ರೀಮಿಯರ್ಲೀಗ್ನಲ್ಲಿ ಪ್ರತೀ ವರ್ಷ ಹೊಸತಾರೆಗಳು ಹುಟ್ಟಿಕೊಳ್ಳುತ್ತಾರೆ. ಈ ವರ್ಷ ಭಾರತದ ಯುವ ಆಟಗಾರರು ಐಪಿಎಲ್ನಲ್ಲಿ ಮಿಂಚುತ್ತಿದ್ದಾರೆ. ಆದರೆ ಕೆಲ ಆಟಗಾರರ ಮೇಲೆ ಆವೃತ್ತಿ ಆರಂಭವಾದಾಗ ಹೆಚ್ಚಿನ ನಿರೀಕ್ಷೆಗಳಿರುತ್ತವೆ ಆದರೆ, ಸೀಸನ್ ಅರ್ಧದಷ್ಟಾದರೂ ಅವರಿಂದ ಉತ್ತಮ ಬ್ಯಾಟಿಂಗ್ ಪ್ರದರ್ಶನ ಬರುತ್ತಿಲ್ಲ. ಅಂತಹ ಕೆಲ ಆಟಗಾಗರ ಪಟ್ಟಿ ಇಲ್ಲಿದೆ..
ಆಂಡ್ರೆ ರಸೆಲ್: ಕೋಲ್ಕತ್ತಾ ನೈಟ್ ರೈಡರ್ಸ್‌ನ ಆಂಡ್ರೆ ರಸೆಲ್ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸಿದ್ದಾರೆ. ಇದುವರೆಗೆ ಮ್ಯಾಚ್ ಫಿನಿಶರ್ ಆಗಿ ಯಾವುದೇ ಪಂದ್ಯದಲ್ಲೂ ಕೊಡುಗೆ ನೀಡಿಲ್ಲ. ಬೌಲಿಂಗ್ನಲ್ಲಿ 12 ಓವರ್ ಮಾಡಿದ್ದು 73 ರನ್ ಕೊಟ್ಟು ಆರು ವಿಕೆಟ್ ಪಡೆದಿದ್ದಾರೆ, ಈ ಬಾರಿಯ ಐಪಿಎಲ್ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ರಸೆಲ್ ವಿಫಲರಾಗಿದ್ದಾರೆ. ಇನ್ನು ಮೇಲಾದರೂ ಘರ್ಜಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಪೃಥ್ವಿ ಶಾ: ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಆರಂಭಿಕರಾಗಿರುವ ಶಾ ಈ ಬಾರಿ ಡೆಲ್ಲಿಯಲ್ಲಿ ಸೈಲೆಂಟ್ ಆಗಿದ್ದಾರೆ. ಅವರ ಬ್ಯಾಟ್ ರನ್ಗಳಿಸಲು ಪರದಾಡುತ್ತಿದೆ. ಈ ಆವೃತ್ತಿಯಲ್ಲಿ ಆರು ಪಂದ್ಯಗಳಲ್ಲಿ ಶಾ ಕೇವಲ 47 ರನ್ ಗಳಿಸಿದ್ದಾರೆ. ಆರಂಭಿಕರಾಗಿ ಬಂದ ಪೃಥ್ವಿ ಕೇವಲ 8 ಬೌಂಡರಿಗಳನ್ನು ಬಾರಿಸಿದರು. ಸ್ಟ್ರೈಕ್ ರೇಟ್ (117.50) ಕೂಡ ಉತ್ತಮವಾಗಿಲ್ಲ.
ಮೊಯಿನ್ ಅಲಿ: ರುತುರಾಜ್ ಮತ್ತು ದೇವನ್ ಕಾನ್ವೇ ಅವರ ಅಬ್ಬರದ ನಡುವೆ ಮೊಯಿನ್ ಮಂಕಾಗಿದ್ದಾರೆ. ಸೆಕೆಂಡ್ ಡೌನ್‌ನಲ್ಲಿ ಬ್ಯಾಟಿಂಗ್‌ಗೆ ಬರುವ ಮೊಯಿನ್ ಅಲಿ ಋತುವಿನಲ್ಲಿ ಅವರು 8 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಲ್ಲಿ ಕೇವಲ 107 ರನ್ ಗಳಿಸಿದ್ದಾರೆ. ಚೆನ್ನೈನಲ್ಲಿ ದುಬೆ ಸಹ ಮಿಂಚುತ್ತಿರುವುದರಿಂದ ಮೂರನೇ ಆಟಗರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.
ಅಂಬಟಿ ರಾಯುಡು: ಕಳೆದ ಕೆಲ ಆವೃತ್ತಿಗಳಲ್ಲಿ ಸಿಎಸ್ಕೆಯ ಸ್ಟಾರ್ ಬ್ಯಾಟರ್ ಆಗಿದ್ದ ಅಂಬಟಿ ರಾಯುಡು ಸಹ ಈ ವರ್ಷ ಘರ್ಜಿಸುತ್ತಿಲ್ಲ. ಅವರು 9 ಪಂದ್ಯಗಳಲ್ಲಿ 7 ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡಿದ್ದು, 136.07 ಸ್ಟ್ರೈಕ್ ರೇಟ್‌ನೊಂದಿಗೆ ಕೇವಲ 83 ರನ್ ಗಳಿಸಿದ್ದಾರೆ.
ದಿನೇಶ್ ಕಾರ್ತಿಕ್: ಕಳೆದ ಋತುವಿನಲ್ಲಿ ಸೂಪರ್ 'ಫಿನಿಶರ್' ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ದಿನೇಶ್ ಕಾರ್ತಿಕ್ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ವಿಫಲವಾಗಿ ಟೀಕೆಗೆ ಗುರಿಯಾಗಿದ್ದ ಡಿಕೆ ಮೇಲೆ ಆರ್‌ಸಿಬಿ ನಂಬಿಕೆ ಇಟ್ಟಿದ್ದರೂ ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದಾರೆ. ಈ ಋತುವಿನಲ್ಲಿ ಅವರು 8 ಪಂದ್ಯಗಳಲ್ಲಿ 83 ರನ್ ಗಳಿಸಿದ್ದಾರೆ. ಐಪಿಎಲ್ 2022 ರ ಸೀಸನ್‌ನಲ್ಲಿ 200 ಸ್ಟ್ರೈಕ್ ರೇಟ್‌ನೊಂದಿಗೆ ಆಡಿದ ಡಿಕೆ ಅವರ ಸ್ಟ್ರೈಕ್ ರೇಟ್ ಈಗ 131.75 ಆಗಿದೆ ಎಂಬುದು ಗಮನಾರ್ಹ.
ಇವರ ಜೊತೆಗೆ ರಾಹುಲ್ ತ್ರಿಪಾಠಿ, ಮಯಾಂಕ್ ಅಗರ್ವಾಲ್ ಮತ್ತು ಏಡೆನ್ ಮಾರ್ಕ್ರಾಮ್ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ತ್ರಿಪಾಠಿ ಈ ಆವೃತ್ತಿಯಲ್ಲಿ 170 ರನ್ ಕಲೆಹಾಕಿದ್ದಾರೆ. ಅವರಿಂದ ಮ್ಯಾಚ್ ವಿನ್ನಿಂಗ್ ಪ್ರದರ್ಶನ ಬಂದಿಲ್ಲ. ನಾಯಕ ಮಾರ್ಕ್ರಾಮ್ ಕೂಡ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗುತ್ತಿಲ್ಲ. ಅವರು ಏಳು ಪಂದ್ಯಗಳಲ್ಲಿ ಕೇವಲ 132 ರನ್ ಗಳಿಸಿದರು. ಮಯಾಂಕ್ ಅಗರ್ವಾಲ್ (169 ರನ್) ಅವರು ಅನುಭವದ ಅಡಿಯಲ್ಲಿ ಬ್ಯಾಟಿಂಗ್ ಮಾಡುತ್ತಿಲ್ಲ.
ಇದನ್ನೂ ಓದಿ: ಜಿಯೋ ಸಿನಿಮಾಗೆ ಐಪಿಎಲ್ನಿಂದ ಭರ್ಜರಿ ಆದಾಯ: 26 ಸಂಸ್ಥೆಗಳಿಂದ ಜಾಹೀರಾತು