ಹೈದರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿಯ ನಿನ್ನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸ್ಫೋಟಕ ಆಟ ಪ್ರದರ್ಶಿಸಿದ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಇದರ ಜೊತೆಗೆ ತಾವು ಗ್ರೇಟ್ ಫಿನಿಶರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಧೋನಿ ಬ್ಯಾಟಿಂಗ್ ಪ್ರದರ್ಶನಕ್ಕೆ ಅನೇಕ ಕ್ರಿಕೆಟರ್ಸ್, ಉದ್ಯಮಿಗಳು, ನಟರು ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಭರ್ಜರಿ ಆಟಕ್ಕೆ ಮನಸೋತಿರುವ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದು, ಮಹೀಂದ್ರಾ ಎಂಬ ಹೆಸರಿನಲ್ಲಿ 'ಮಹಿ' ಎಂಬ ಅಕ್ಷರವಿದೆ. ಇದರಿಂದ ನನಗೆ ಸಂತೋಷವಾಗಿದೆ. 'ಅದ್ಭುತ ಫಿನಿಶ್' ಎಂದು ಬರೆದುಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ನೀಡಿದ್ದ 156ರನ್ಗಳ ಗುರಿ ಬೆನ್ನತ್ತಿದ ಸಿಎಸ್ಕೆ ಮೇಲಿಂದ ಮೇಲೆ ವಿಕೆಟ್ ಕಳೆದುಕೊಂಡಿದ್ದರಿಂದ ಕೊನೆಯ ಓವರ್ನಲ್ಲಿ 17ರನ್ಗಳ ಅವಶ್ಯಕತೆ ಇತ್ತು. ಈ ವೇಳೆ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಮಹೇಂದ್ರ ಸಿಂಗ್ ಧೋನಿ ತಂಡವನ್ನg ಗೆಲುವಿನ ದಡ ಸೇರಿಸಿದರು. ಇವರ ಆಟಕ್ಕೆ ಇನ್ನಿಲ್ಲದ ಪ್ರಶಂಸೆ ವ್ಯಕ್ತವಾಗಿದೆ.
-
Well, all I can say is that I’m glad we have the letters MAHI in Mahi-ndra! 💪🏽😃 #MSDhoni Awesome finish. https://t.co/FNv6u89zRA
— anand mahindra (@anandmahindra) April 21, 2022 " class="align-text-top noRightClick twitterSection" data="
">Well, all I can say is that I’m glad we have the letters MAHI in Mahi-ndra! 💪🏽😃 #MSDhoni Awesome finish. https://t.co/FNv6u89zRA
— anand mahindra (@anandmahindra) April 21, 2022Well, all I can say is that I’m glad we have the letters MAHI in Mahi-ndra! 💪🏽😃 #MSDhoni Awesome finish. https://t.co/FNv6u89zRA
— anand mahindra (@anandmahindra) April 21, 2022
ಇದನ್ನೂ ಓದಿ: ಕೊನೆ ಓವರ್ನಲ್ಲಿ ಮುಂಬೈ 'ಫಿನಿಶ್' ಮಾಡಿದ ಧೋನಿ... ರೋಹಿತ್ ಬಳಗಕ್ಕೆ ಸತತ 7ನೇ ಸೋಲು
ಮುಂಬೈ ವಿರುದ್ಧ ಗ್ರೇಟ್ ಫಿನಿಷರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿರುವ ಧೋನಿಯ ಗುಣಗಾನ ಮಾಡಿರುವ ವಿರೇಂದ್ರ ಸೆಹ್ವಾಗ್, ಓಂ ಫಿನಿಶಾಯ ನಮಃ ಎಂದು ಬರೆದುಕೊಂಡಿದ್ದಾರೆ. ಉಳಿದಂತೆ ಹರಭಜನ್ ಸಿಂಗ್, ಸುರೇಶ್ ರೈನಾ, ಕಾರ್ತಿಕ್ ಮುರುಳಿ,ಇರ್ಫಾನ್ ಪಠಾಣ್, ಕೆವಿನ್ ಪಿಟರ್ಸನ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ.
-
MS Dhoni … Om Finishaya Namaha .
— Virender Sehwag (@virendersehwag) April 21, 2022 " class="align-text-top noRightClick twitterSection" data="
What a win. Romba Nalla #MIvsCSK
">MS Dhoni … Om Finishaya Namaha .
— Virender Sehwag (@virendersehwag) April 21, 2022
What a win. Romba Nalla #MIvsCSKMS Dhoni … Om Finishaya Namaha .
— Virender Sehwag (@virendersehwag) April 21, 2022
What a win. Romba Nalla #MIvsCSK