ಭಾರತದ ಕ್ರಿಕೆಟ್ನಲ್ಲಿ ಮಹೇಂದ್ರ ಸಿಂಗ್ ಧೋನಿಗೆ ವಿಶಿಷ್ಟ ಸ್ಥಾನಮಾನ ಇರುವುದಂತೂ ಖಂಡಿತ. ಅವರಿಗೆ ಕ್ರಿಕೆಟ್ ಲೋಕದ ದಿಗ್ಗಜರೇ ಅಭಿಮಾನಿಗಳಾಗಿದ್ದಾರೆ. ಭಾರತಕ್ಕೆ ತಂಡವನ್ನು ಮೂರು ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಹಿರಿಮೆ ಧೋನಿ ಅವರದ್ದು. ಇದಲ್ಲದೇ ಭಾರತಕ್ಕೆ ಎರಡನೇ ಏಕದಿನ ವಿಶ್ವಕಪ್, ಟಿ 20 ವಿಶ್ವಕಪ್ನ್ನೂ ಸಹಾ ತಂದುಕೊಟ್ಟಿದ್ದಾರೆ. ಅಲ್ಲದೇ ಭಾರತಕ್ಕೆ ಎಲ್ಲಾ ಐಸಿಸಿ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. (ಧೋನಿ ನಾಯಕರಾಗಿದ್ದಾರೆ ಟೆಸ್ಟ್ ಚಾಂಪಿಯನ್ಶಿಪ್ ಇರಲಿಲ್ಲ.)
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಧೋನಿ ದೂರ ಸರಿದು ಸುಮಾರು ನಾಲ್ಕು ವರ್ಷಗಳಾಯಿತು. ಅವರು ಕೇಲವ ಐಪಿಎಲ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಈ ವರ್ಷ ಅವರ ಕೊನೆಯ ಐಪಿಎಲ್ ಆವೃತ್ತಿ ಎಂದು ಹೇಳಲಾಗುತ್ತಿತ್ತು. 34 ವರ್ಷದ ಧೋನಿ ನಿವೃತ್ತಿಯ ಬಗ್ಗೆ ಕೆಲವೊಂದು ಊಹಾಪೋಹಗಳು ಹರಿದಾಡುತ್ತಲೇ ಇದೆ. ಐಪಿಎಲ್ ಆರಂಭದ ಸಮಯದಲ್ಲಿ ಕೋಲ್ಕತ್ತಾ ಪಂದ್ಯದ ವೇಳೆ ಧೋನಿಗೆ ವಿಶೇಷ ಗೌರವದ ವಿದಾಯ ಪಂದ್ಯವನ್ನು ಆಡಿಸಲಾಗುವುದು ಎಂದಿತ್ತು. ಅಲ್ಲದೇ ಚೆನ್ನೈ ತಂಡ ಆಡಿದ ಎಲ್ಲಾ ಕಡೆ ಧೋನಿ ಅಭಿಮಾನಿಗಳು ಕಿಕ್ಕಿರಿದು ಸೇರಿ ಸಂಭ್ರಮಿಸಿದ್ದರು.
-
🐐💛💥 pic.twitter.com/giFH5P83UY
— Agent Leo 🦁™️ (@HowYouDoin_96) May 16, 2023 " class="align-text-top noRightClick twitterSection" data="
">🐐💛💥 pic.twitter.com/giFH5P83UY
— Agent Leo 🦁™️ (@HowYouDoin_96) May 16, 2023🐐💛💥 pic.twitter.com/giFH5P83UY
— Agent Leo 🦁™️ (@HowYouDoin_96) May 16, 2023
ಈ ನಿವೃತ್ತಿಯ ಬಗ್ಗೆ ಮಾತುಗಳು ಓಡಾಡುತ್ತಿರುವ ಸಂದರ್ಭದಲ್ಲಿ, ಮಾಜಿ ಕ್ರಿಕೆಟಿಗ ಸುನೀಲ್ ಗವಾಸ್ಕರ್ ಧೋನಿಯ ನಿವೃತ್ತಿಯ ಬಗ್ಗೆ ಮಾತನಾಡಿದ್ದು, ಕೊನೆಯ ತವರು ಪಂದ್ಯದ ವೇಳೆ ವಿಶೇಷ ಉಡುಗೊರೆಯನ್ನೂ ಧೋನಿಯಿಂದ ಪಡೆದುಕೊಂಡಿದ್ದಾರೆ. ಕೋಲ್ಕತ್ತಾ ಎದುರಿನ ಪಂದ್ಯದ ನಂತರ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕಾಲು ನೋವಿದ್ದರೂ ಧೋನಿ ಐಸ್ ಪ್ಯಾಕ್ ಕಟ್ಟಿಕೊಂಡು ಮೈದಾನದ ಸುತ್ತ ನಡೆದು ಅಭಿಮಾನಿಗಳತ್ತ ಕೈ ಬೀಸಿದ್ದಾರೆ. ಈ ವೇಳೆ ಸುನೀಲ್ ಗವಾಸ್ಕರ್ ಧೋನಿಯ ಬಳಿ ತೆರಳಿ ಅವರಿಂದ ಶರ್ಟ್ ಮೇಲೆ ಆಟೋಗ್ರಾಫ್ ಪಡೆದುಕೊಂಡಿದ್ದಾರೆ.
ಈ ಕ್ಷಣದ ಬಗ್ಗೆ ಮಾತನಾಡಿದರುವ ಗವಾಸ್ಕರ್, "ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಎಂಎಸ್ ಧೋನಿ ಚೆಪಾಕ್‌ನಲ್ಲಿ ಲ್ಯಾಪ್ ಹಾನರ್ ತೆಗೆದುಕೊಳ್ಳುತ್ತಾರೆ ಎಂದು ನನಗೆ ತಿಳಿದಾಗ, ಈ ಕ್ಷಣವನ್ನು ವಿಶೇಷವಾಗಿರಿಸಿಕೊಳ್ಳಲು ನಾನು ಬಯಸಿದೆ. ಅದಕ್ಕಾಗಿಯೇ ನಾನು ಅವರ ಆಟೋಗ್ರಾಫ್ ತೆಗೆದುಕೊಳ್ಳಲು ಧೋನಿ ಕಡೆಗೆ ಓಡಿದೆ. ಇದು ಅವರ ಕೊನೆಯ ಚೆಪಾಕ್ ಪಂದ್ಯವಾಗಿತ್ತು. ಆದ್ದರಿಂದ, ನಾನು ಮಾಹಿ ಬಳಿಗೆ ಹೋಗಿ ಧರಿಸಿದ್ದ ಶರ್ಟ್ ಮೇಲೆ ಹಸ್ತಾಕ್ಷರ ಹಾಕುವಂತೆ ವಿನಂತಿಸಿದೆ. ಅವರು ಅದನ್ನು ಒಪ್ಪಿಕೊಂಡಿರುವುದು ತುಂಬಾ ಸಂತೋಷವಾಗಿದೆ. ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ. ಏಕೆಂದರೆ ಧೋನಿ ಭಾರತೀಯ ಕ್ರಿಕೆಟ್‌ಗೆ ಅಪಾರ ಕೊಡುಗೆ ನೀಡಿದ್ದಾರೆ" ಎಂದು ಬಣ್ಣಿಸಿದ್ದಾರೆ.
-
𝙔𝙚𝙡𝙡𝙤𝙫𝙚! 💛
— IndianPremierLeague (@IPL) May 14, 2023 " class="align-text-top noRightClick twitterSection" data="
A special lap of honour filled with memorable moments ft. @msdhoni & Co. and the ever-so-energetic Chepauk crowd 🤗#TATAIPL | #CSKvKKR | @ChennaiIPL pic.twitter.com/yHntEpuHNg
">𝙔𝙚𝙡𝙡𝙤𝙫𝙚! 💛
— IndianPremierLeague (@IPL) May 14, 2023
A special lap of honour filled with memorable moments ft. @msdhoni & Co. and the ever-so-energetic Chepauk crowd 🤗#TATAIPL | #CSKvKKR | @ChennaiIPL pic.twitter.com/yHntEpuHNg𝙔𝙚𝙡𝙡𝙤𝙫𝙚! 💛
— IndianPremierLeague (@IPL) May 14, 2023
A special lap of honour filled with memorable moments ft. @msdhoni & Co. and the ever-so-energetic Chepauk crowd 🤗#TATAIPL | #CSKvKKR | @ChennaiIPL pic.twitter.com/yHntEpuHNg
"ಸಿಎಸ್‌ಕೆ ಪ್ಲೇಆಫ್‌ಗೆ ಅರ್ಹತೆ ಪಡೆದರೆ ಖಂಡಿತವಾಗಿಯೂ ಅವರು ಇಲ್ಲಿ ಮತ್ತೆ ಆಡುವ ಅವಕಾಶವನ್ನು ಪಡೆಯುತ್ತಾರೆ. ಆದರೆ ನಾನು ಆ ಕ್ಷಣವನ್ನು ವಿಶೇಷವಾಗಿಸಲು ನಿರ್ಧರಿಸಿದೆ. ಕ್ಯಾಮೆರಾ ವಿಭಾಗದಲ್ಲಿ ಯಾರೋ ಮಾರ್ಕರ್ ಪೆನ್ ಹೊಂದಿದ್ದಕ್ಕಾಗಿ ನಾನು ಸಾಕಷ್ಟು ಅದೃಷ್ಟಶಾಲಿಯಾಗಿದ್ದೆ. ಹಾಗಾಗಿ ನಾನು ಅದಕ್ಕೆ ಆ ವ್ಯಕ್ತಿಗೆ ಕೂಡ ಕೃತಜ್ಞನಾಗಿದ್ದೇನೆ" ಎಂದು ಗವಾಸ್ಕರ್ ಹೇಳಿದರು.
ಇದನ್ನೂ ಓದಿ: ತನ್ನ ಶರ್ಟ್ ಮೇಲೆ ಧೋನಿ ಆಟೋಗ್ರಾಫ್ ಪಡೆದ ಕ್ರಿಕೆಟ್ ದಿಗ್ಗಜ ಸುನೀಲ್ ಗವಾಸ್ಕರ್