ETV Bharat / sports

'ಮುಂದಿನ IPLನಲ್ಲಿ ಸಿಗೋಣ': ಅಭಿಯಾನದ ಉದ್ದಕ್ಕೂ ಸಾಥ್​​ ನೀಡಿದ ಎಲ್ಲರಿಗೂ ಥ್ಯಾಂಕ್ಸ್​​ ಎಂದ ಕೊಹ್ಲಿ

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ತಂಡದ ಮಾಜಿ ಕ್ಯಾಪ್ಟನ್ ವಿರಾಟ್​​ ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ.

Virat Kohli Emotional Message
Virat Kohli Emotional Message
author img

By

Published : May 28, 2022, 8:36 PM IST

Updated : May 28, 2022, 9:06 PM IST

ಅಹಮದಾಬಾದ್​​: 15ನೇ ಆವೃತ್ತಿ ಐಪಿಎಲ್​​ ಕ್ವಾಲಿಫೈಯರ್​​ನಲ್ಲಿ ಸೋಲು ಕಾಣುವ ಮೂಲಕ ಬೆಂಗಳೂರು ತಂಡ ಟೂರ್ನಿಯಿಂದ ಹೊರ ಬಿದ್ದಿದೆ. ತಂಡದ ಮಾಜಿ ಕ್ಯಾಪ್ಟನ್ ವಿರಾಟ್​​ ಕೊಹ್ಲಿ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದು, ಮುಂದಿನ ಆವೃತ್ತಿಯಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ. ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಗಮನಾರ್ಹ ಪ್ರದರ್ಶನದೊಂದಿಗೆ ಕ್ವಾಲಿಫೈಯರ್​​ಗೆ ಲಗ್ಗೆ ಹಾಕಿತ್ತು. ಆದರೆ, ರಾಜಸ್ಥಾನ ರಾಯಲ್ಸ್​ ವಿರುದ್ಧ ಸೋಲು ಕಾಣುವ ಮೂಲಕ ಅಭಿಯಾನ ಅಂತ್ಯಗೊಳಿಸಿದೆ. ಇದರ ಬೆನ್ನಲ್ಲೇ ತಂಡದ ಮಾಜಿ ಕ್ಯಾಪ್ಟನ್​ ಟ್ವೀಟ್ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಟ್ವೀಟ್ ಇಂತಿದೆ: ಕೆಲವೊಮ್ಮೆ ಗೆಲ್ಲುತ್ತೀರಿ, ಕೆಲವೊಮ್ಮೆ ಸೋಲುತ್ತೀರಿ. ಆದರೆ, 12th ಮ್ಯಾನ್ ಆರ್ಮಿಯಾಗಿ ನಿವೆಲ್ಲರೂ ಅಭಿಯಾನದ ಉದ್ದಕ್ಕೂ ನಮಗೆ ಬೆಂಬಲ ನೀಡುತ್ತೀರಿ. ಜೊತೆಗೆ ಕ್ರಿಕೆಟ್​​ ಅನ್ನು ವಿಶೇಷವಾಗಿಸಿದ್ದೀರಿ. ಕಲಿಕೆ ಎಂದಿಗೂ ನಿಲ್ಲಲ್ಲ ಎಂದಿರುವ ವಿರಾಟ್​, ಆಡಳಿತ ಮಂಡಳಿ, ಸಹಾಯಕ ಸಿಬ್ಬಂದಿ ಹಾಗೂ ಫ್ರಾಂಚೈಸಿಯ ಭಾಗವಾಗಿರುವ ಎಲ್ಲರಿಗೂ ಥ್ಯಾಂಕ್ಸ್​. ಮುಂದಿನ ಆವೃತ್ತಿಯಲ್ಲಿ ಸಿಗೋಣ ಎಂದು ಬರೆದುಕೊಂಡಿದ್ದಾರೆ.

  • Sometimes you win, and sometimes you don't, but the 12th Man Army, you have been fantastic, always backing us throughout our campaign. You make cricket special. The learning never stops. (1/2) pic.twitter.com/mRx4rslWFK

    — Virat Kohli (@imVkohli) May 28, 2022 " class="align-text-top noRightClick twitterSection" data=" ">

ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿ ವಿರಾಟ್​ ಕೊಹ್ಲಿ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡಿಲ್ಲ. 16 ಪಂದ್ಯಗಳಿಂದ ಕೇವಲ 341ರನ್​​ಗಳಿಕೆ ಮಾಡಿದ್ದಾರೆ. ಇದರಲ್ಲಿ ಎರಡು ಅರ್ಧಶತಕ ಸೇರಿಕೊಂಡಿವೆ. ವಿಶೇಷ ಎಂದರೆ, ಪ್ರಸಕ್ತ ಸಾಲಿನ ಐಪಿಎಲ್​​ನಲ್ಲೇ ವಿರಾಟ್ ಮೂರು ಸಲ ಗೋಲ್ಡನ್​ ಡಕ್​ ಆಗಿದ್ದಾರೆ. ರಾಜಸ್ಥಾನ ವಿರುದ್ಧದ ಕ್ವಾಲಿಫೈಯರ್​ ಪಂದ್ಯದಲ್ಲೂ ವಿರಾಟ್​ ಕೊಹ್ಲಿ ಕೇವಲ 7ರನ್​​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿ, ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಇವರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಕಳೆದ ಕೆಲ ತಿಂಗಳಿಂದ ವಿರಾಟ್​ ಕೊಹ್ಲಿ ನಿರಂತರವಾಗಿ ಕ್ರಿಕೆಟ್​​ ಆಡಿರುವ ಕಾರಣ, ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ, ಇಂಗ್ಲೆಂಡ್​ ವಿರುದ್ಧದ ಟೆಸ್ಟ್​​ ಸರಣಿಗೆ ಟೀಂ ಇಂಡಿಯಾ ಸೇರ್ಪಡೆಯಾಗಲಿದ್ದಾರೆ.

Last Updated : May 28, 2022, 9:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.