ETV Bharat / sports

IPL 2023: 'ಪ್ಲೇ ಆಫ್ ರೇಸ್‌ನಲ್ಲಿ ಆರ್​ಸಿಬಿ ಉಳಿಯಲು ವಿರಾಟ್ ಕೊಹ್ಲಿ ನೆರವು' - ಯೂಸುಫ್ ಪಠಾಣ್

ಇಂದು ಹೈದರಾಬಾದ್​ನಲ್ಲಿ ನಡೆಯಲಿರುವ ಐಪಿಎಲ್​ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಲಿವೆ. ಪ್ಲೇ ಆಫ್ ಪ್ರವೇಶಕ್ಕೆ ಆರ್​ಸಿಬಿ ಮಹತ್ವದ ಪಂದ್ಯವಾಗಿದೆ.

Virat Kohli
ವಿರಾಟ್ ಕೊಹ್ಲಿ
author img

By

Published : May 18, 2023, 7:01 PM IST

ಮುಂಬೈ (ಮಹಾರಾಷ್ಟ್ರ): ಐಪಿಎಲ್​ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ಲೇ ಆಫ್ ರೇಸ್‌ನಲ್ಲಿ ಉಳಿಸಿಕೊಳ್ಳಲು ರನ್​ ಮಷಿನ್​ ವಿರಾಟ್ ಕೊಹ್ಲಿ ನೆರವಾಗಲಿದ್ದಾರೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್‌ ಮೂಡಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾಜಿ ಕ್ರಿಕೆಟರ್​ ಯೂಸುಫ್ ಪಠಾಣ್, ಆರ್​ಸಿಬಿಯ ಪ್ರತಿಯೊಬ್ಬ ಆಟಗಾರರ ಮೇಲೂ ಜವಾಬ್ದಾರಿ ಇದೆ ಎಂದು ಎಚ್ಚರಿಕೆ ಮತ್ತು ಸಲಹೆಯನ್ನು ನೀಡಿದ್ದಾರೆ.

16ನೇ ಆವೃತ್ತಿಯ ಐಪಿಎಲ್​ ಕೊನೆಯ ಘಟ್ಟಕ್ಕೆ ಬಂದಿದೆ. ಲೀಗ್ ಹಂತದಲ್ಲಿ ಕೇವಲ 7 ಪಂದ್ಯಗಳು ಉಳಿದಿದ್ದು, 18 ಅಂಕ ಗಳಿಸಿ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಕ್ವಾಲಿಫೈ ಹಂತ ತಲುಪಿದೆ. ಇನ್ನೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸತತ ಸೋಲಿನಿಂದಾಗಿ ಟೂರ್ನಿಯಿಂದ ಹೊರಬಿದ್ದಿವೆ.

ಉಳಿದ 7 ತಂಡಗಳ ಮಧ್ಯೆ 3 ಪ್ಲೇ ಆಫ್ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆದಿದೆ. ಇಂದು ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿದ್ದು, ಬೆಂಗಳೂರು ತಂಡಕ್ಕೆ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಈ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್‌ಗೇರುವ ಅವಕಾಶ ಹೆಚ್ಚು. ಹಾಗಾಗಿ ಈ ದಿನದ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಇದನ್ನೂ ಓದಿ: ಕೊನೆ ಘಟ್ಟದಲ್ಲಿ ಐಪಿಎಲ್​: ಯಾರಿಗಿದೆ ಪ್ಲೇ ಆಫ್​ ಪ್ರವೇಶ ಚಾನ್ಸ್​,? ಲೆಕ್ಕಾಚಾರ ಇಲ್ಲಿದೆ

ಈ ವಿಚಾರ ಕುರಿತು ಪ್ರತಿಕ್ರಿಯೆ ನೀಡಿ ಟಾಮ್‌ ಮೂಡಿ, ಬೆಂಗಳೂರು ತಂಡ ಈ ಆವೃತ್ತಿಯ ಮೊದಲ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿತ್ತು. ಆದರೆ, ದ್ವಿತೀಯಾರ್ಧದಲ್ಲಿ ಅಂದುಕೊಂಡಂತೆ ಪ್ರದರ್ಶನ ತೋರಿರಲಿಲ್ಲ. ಇದರ ನಡುವೆಯೂ ಪ್ಲೇ ಆಫ್ ಹಂತಕ್ಕೆ ಬಂದು ತಲುಪಿದೆ. ಕೊನೆಯ ಎರಡು ಪಂದ್ಯಗಳು ಬಾಕಿ ಇದ್ದು, ಇಂದಿನ ಪಂದ್ಯ ತುಂಬಾ ಮಹತ್ವದ್ದಾಗಿದೆ. ಗೆಲುವು ಕೂಡ ಅನಿವಾರ್ಯ. ಹಾಗಾಗಿ ತಂಡ ಪೂರ್ಣ ಪ್ರಮಾಣದ ಪ್ರದರ್ಶನ ತೋರಬೇಕಾಗಿದೆ. ಕೊಹ್ಲಿ ಅವರಂಥ ಶ್ರೇಷ್ಠ ಆಟಗಾರ ತಂಡದಲ್ಲಿರುವುದರಿಂದ ಪ್ಲೇ ಆಫ್‌ ಹಾದಿಗೆ ಖಂಡಿತವಾಗಿ ನೆರವಾಗಲಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಂದೆಡೆ, ಯೂಸುಫ್ ಪಠಾಣ್ ಮಾತನಾಡಿ, ಆರ್‌ಸಿಬಿ ಒಂದು ಸಂಪೂರ್ಣ ತಂಡವಾಗಿ ಆಡಬೇಕಿದೆ. ಕೇವಲ ಮೂವರು ಆಟಗಾರರ ಮೇಲೆ (ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್) ಮಾತ್ರ ಆರ್​ಸಿಬಿ ಗಮನಹರಿಸುವ ಸಮಯ ಇದಲ್ಲ. ಈಗ ಪ್ರತಿಯೊಬ್ಬ ಆಟಗಾರನು ಮುಂದೆ ಬಂದು ತನ್ನ ಜವಾಬ್ದಾರಿಯನ್ನು ಪೂರೈಸಬೇಕಾಗಿದೆ ಎಂದು ಹೇಳಿದ್ದಾರೆ.

ಈ ಮೊದಲು ಹೇಳಿದಂತೆ ಅಂಕ ಪಟ್ಟಿಯಿಂದ ಹೈದರಾಬಾದ್ ಹಿಂದಿದ್ದು,​​ ಈಗಾಗಲೇ ಪ್ಲೇ ಆಫ್‌ನಿಂದ ಹೊರ ಬಿದ್ದಿದೆ. ಆದರೆ, ಕಠಿಣ ಸವಾಲು ಒಡ್ಡಿದರೆ ಬೆಂಗಳೂರು ತಂಡಕ್ಕೆ ಪ್ಲೇ ಆಫ್‌ ಹಾದಿ ಕಷ್ಟವಾಗಬಹುದು. ಹಾಗಾಗಿ ಫಾಫ್ ಡು ಪ್ಲೆಸಿಸ್ ನಾಯಕತ್ವದ ಬೆಂಗಳೂರು ತಂಡ, ಒತ್ತಡಲಿದ್ದು ಇಂದಿನ ಪಂದ್ಯ ಗೆದ್ದು ಪ್ಲೇ ಆಫ್‌ ಹಾದಿಯನ್ನು ಸುಗಮ ಮಾಡಿಕೊಳ್ಳುವ ಅನಿವಾರ್ಯತೆ ಇದೆ.

ಇದನ್ನೂ ಓದಿ: ಪ್ಲೇಆಫ್​ ರೇಸಿಂದ ಹೊರಬಿದ್ದ ಪಂಜಾಬ್​​: ದೆಹಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.