ಬೆಂಗಳೂರು: ವಿರಾಟ್ ಕೊಹ್ಲಿ 2022ರ ಕೊನೆಯಲ್ಲಿ ಸುಮಾರು ಎರಡು ವರ್ಷಗಳ ನಂತರ ಫಾರ್ಮ್ಗೆ ಮರಳಿದರು. ಎರಡು ವರ್ಷ ಅವರ ಬ್ಯಾಟ್ನಿಂದ ರನ್ ಬರುತ್ತಿಲ್ಲ ಎಂದು ಹಲವಾರು ಟೀಕೆಗಳಿಗೆ ವಿರಾಟ್ ಗುರಿಯಾಗಿದ್ದರು. ಫಾರ್ಮ್ಗೆ ಬಂದ ನಂತರ ವಿರಾಟ್ ಮತ್ತೆ ರನ್ ಮಷಿನ್ ಆಗಿದ್ದಾರೆ. ಐಪಿಎಲ್ನಲ್ಲಿ ಅವರು ತಮ್ಮ ಗೋಲ್ಡನ್ ಫಾರ್ಮ್ನ್ನು ಮುಂದುವರೆಸಿದ್ದಾರೆ.
-
𝐕𝐢𝐫𝐚𝐭, 𝐰𝐞 𝐥𝐨𝐯𝐞 𝐲𝐨𝐮 𝟑𝟎𝟎𝟎 ❤️
— Royal Challengers Bangalore (@RCBTweets) April 26, 2023 " class="align-text-top noRightClick twitterSection" data="
Most T20 runs by any batter at a single venue! 🤯🏟️#PlayBold #ನಮ್ಮRCB #IPL2023 #RCBvKKR pic.twitter.com/lmiGNNm89C
">𝐕𝐢𝐫𝐚𝐭, 𝐰𝐞 𝐥𝐨𝐯𝐞 𝐲𝐨𝐮 𝟑𝟎𝟎𝟎 ❤️
— Royal Challengers Bangalore (@RCBTweets) April 26, 2023
Most T20 runs by any batter at a single venue! 🤯🏟️#PlayBold #ನಮ್ಮRCB #IPL2023 #RCBvKKR pic.twitter.com/lmiGNNm89C𝐕𝐢𝐫𝐚𝐭, 𝐰𝐞 𝐥𝐨𝐯𝐞 𝐲𝐨𝐮 𝟑𝟎𝟎𝟎 ❤️
— Royal Challengers Bangalore (@RCBTweets) April 26, 2023
Most T20 runs by any batter at a single venue! 🤯🏟️#PlayBold #ನಮ್ಮRCB #IPL2023 #RCBvKKR pic.twitter.com/lmiGNNm89C
ವಿರಾಟ್ ಕೊಹ್ಲಿ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಆವೃತ್ತಿಯಲ್ಲಿ ಐದನೇ ಅರ್ಧಶತಕವನ್ನು ಗಳಿಸಿದರು. ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅನ್ನು ಬುಧವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ವಿರುದ್ಧ ಸೋಲನುಭವಿಸಿತು. ವಿರಾಟ್ ಅರ್ಧಶತಕ ವ್ಯರ್ಥವಾಯಿತು.
ಕೋಲ್ಕತ್ತಾ ಆರ್ಸಿಬಿಗೆ 201 ರನ್ನ ಗುರಿ ನೀಡಿತು. ಈ ರನ್ ಚೇಸಿಂಗ್ ಮಾಡುವಾಗ ವಿರಾಟ್ ಕೊಹ್ಲಿ 37 ಎಸೆತಗಳಲ್ಲಿ 54 ರನ್ ಗಳಿಸಿದರು. ಅವರ ಜೊತೆ ತಂಡದಲ್ಲಿ ಮಹಿಪಾಲ್ ಲೊಮ್ರೋರ್ 18 ಎಸೆತಗಳಲ್ಲಿ 34 ರನ್ ಗಳಿಸಿದ ಚೇಸಿಂಗ್ನಲ್ಲಿ ನೆರವಾದರು. ಆದರೆ, ಬೇರಾವ ಬ್ಯಾಟರ್ಗಳು ರನ್ ಗಳಿಸದ ಕಾರಣ ತಂಡ 21 ರನ್ ಸೋಲು ಕಾಣಬೇಕಾಯಿತು.
ಈ ನಡುವೆ ವಿರಾಟ್ ಒಂದು ಹೊಸ ದಾಖಲೆ ಬರೆದಿದ್ದಾರೆ. ಕೊಹ್ಲಿ ಈಗ ಟಿ-20ಯಲ್ಲಿ ಒಂದೇ ಸ್ಥಳದಲ್ಲಿ 3,000 ಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟರ್ ಆಗಿದ್ದಾರೆ. ಇದುವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 92 ಇನ್ನಿಂಗ್ಸ್‌ಗಳಲ್ಲಿ 3,015 ರನ್ ಗಳಿಸಿದ್ದಾರೆ. ಅವರ ನಂತರ ಬಾಂಗ್ಲಾದೇಶದ ಮಾಜಿ ನಾಯಕರಾದ ಮುಶ್ಫಿಕರ್ ರಹೀಮ್ ಮತ್ತು ಮಹಮ್ಮದುಲ್ಲಾ ಪಟ್ಟಿಯಲ್ಲಿದ್ದಾರೆ. ಮೀರ್‌ಪುರದ ಶೇರ್-ಎ-ಬಾಂಗ್ಲಾ ಸ್ಟೇಡಿಯಂನಲ್ಲಿ ರಹೀಮ್ 121 ಇನ್ನಿಂಗ್ಸ್‌ಗಳಲ್ಲಿ 2,989 ರನ್ ಗಳಿಸಿದ್ದರೆ, ಮಹಮುದುಲ್ಲಾ 130 ಇನ್ನಿಂಗ್ಸ್‌ಗಳಲ್ಲಿ 2,813 ರನ್ ಗಳಿಸಿದ್ದಾರೆ.
ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ 90 ಟಿ20 ಇನ್ನಿಂಗ್ಸ್‌ಗಳಲ್ಲಿ 2,749 ರನ್ ಗಳಿಸಿರುವ ಇಂಗ್ಲೆಂಡ್‌ನ ಅಲೆಕ್ಸ್ ಹೇಲ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಬಾಂಗ್ಲಾದೇಶದ ಮತ್ತೊಬ್ಬ ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರು ಮೀರ್‌ಪುರದಲ್ಲಿ 2,706 ರನ್ ಗಳಿಸಿ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ.
ಪಂದ್ಯದ ನಂತರ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ,"ನಿಜ ಹೇಳಬೇಕೆಂದರೆ ನಾವು ಅವರಿಗೆ ಆಟವನ್ನು ಒಪ್ಪಿಸಿದೆವು. ನಾವು ಕಳೆದುಕೊಳ್ಳಲು ಅರ್ಹರಾಗಿದ್ದೇವೆ. ನಾವು ಅವರಿಗೆ ವಿಜಯವನ್ನು ಹಸ್ತಾಂತರಿಸಿದೆವು. ನಾವು ಖಂಡಿತವಾಗಿಯೂ ಗುಣಮಟ್ಟ ಪಂದ್ಯವನ್ನು ಇಂದು ಆಡಲಿಲ್ಲ. ನಾವು ನಮ್ಮ ಅವಕಾಶಗಳನ್ನು ಲಾಭ ಮಾಡಿಕೊಳ್ಳಲಿಲ್ಲ. ನಾವು ಕೆಲವು ಅವಕಾಶಗಳನ್ನು ಕೈಬಿಟ್ಟೆವು, ಇದರಿಂದ ನಮಗೆ 25-30 ರನ್‌ಗಳ ನಷ್ಟವಾಯಿತು" ಎಂದು ಹೇಳಿಕೊಂಡಿದ್ದಾರೆ.
ಆರ್ಸಿಬಿಗೆ ಕೇವಲ ಮೂರು ಬ್ಯಾಟರ್ಗಳು ಮಾತ್ರ ಬಲವಾಗಿದ್ದಾರೆ. ಇದು ತಂಡದ ಸೋಲಿಗೆ ಕಾರಣವಾಗುತ್ತಿದೆ. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್ ವೆಲ್ ಮಾತ್ರ ತಂಡದಲ್ಲಿ ಉತ್ತಮವಾಗಿ ರನ್ ಗಳಿಸುತ್ತಿದ್ದಾರೆ. ಇವರಲ್ಲಿ ಒಬ್ಬ ಬ್ಯಾಟರ್ ಪ್ರದರ್ಶನ ವೀಕ್ ಆದಲ್ಲಿ ತಂಡ ಸೋಲನುಭವಿಸುತ್ತಿದೆ. ಕೆಕೆಆರ್ ವಿರುದ್ಧ ಫಾಫ್ (17) ಮತ್ತು ಮ್ಯಾಕ್ಸ್ವೆಲ್ (5) ಹೆಚ್ಚು ಕೊಡುಗೆ ನೀಡುವಲ್ಲಿ ವಿಫಲರಾಗಿದ್ದು ಸೋಲಿಗೆ ಕಾರಣವಾಗಿತ್ತು.
ಇದನ್ನೂ ಓದಿ: ಚೆನ್ನೈ ವಿರುದ್ಧದ ಗೆಲುವಿಗೆ ಸಹಾಯಕ ಸಿಬ್ಬಂದಿ ಕಾರಣ: ಸಂಜು ಸ್ಯಾಮ್ಸನ್