ಬೆಂಗಳೂರು: ಸರಿಯಾಗಿ 12 ವರ್ಷಗಳ ಹಿಂದೆ ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸಿಕ್ಸರ್ ಬಾರಿಸುವ ಮೂಲಕ ಎಂ.ಎಸ್.ಧೋನಿ ಪಂದ್ಯ ಗೆಲ್ಲಿಸಿ ಕೊಟ್ಟಿದ್ದರು. ಮಾಹಿ ಅವರ ಆ ಸಿಕ್ಸ್ ಸ್ಮರಣೀಯವಾಗಿತ್ತು. ಇದೀಗ ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸಹ ಅದೇ ರೀತಿಯಲ್ಲಿ ಸಿಕ್ಸ್ ಬಾರಿಸುವ ಮೂಲಕ ಆರ್‌ಬಿಸಿ ತಂಡವನ್ನು ಗೆಲ್ಲಿಸಿಕೊಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
-
"𝑻𝒉𝒂𝒕 𝒊𝒔 𝒂 𝒔𝒉𝒐𝒕 𝒐𝒇 𝒂𝒏 𝑬𝑴𝑷𝑬𝑹𝑶𝑹" 🤌#KingKohli takes #RCB over the line with a sublime 6️⃣👊#TATAIPL #IPLonJioCinema | @RCBTweets @imVkohli pic.twitter.com/DUpY55ZfLM
— JioCinema (@JioCinema) April 2, 2023 " class="align-text-top noRightClick twitterSection" data="
">"𝑻𝒉𝒂𝒕 𝒊𝒔 𝒂 𝒔𝒉𝒐𝒕 𝒐𝒇 𝒂𝒏 𝑬𝑴𝑷𝑬𝑹𝑶𝑹" 🤌#KingKohli takes #RCB over the line with a sublime 6️⃣👊#TATAIPL #IPLonJioCinema | @RCBTweets @imVkohli pic.twitter.com/DUpY55ZfLM
— JioCinema (@JioCinema) April 2, 2023"𝑻𝒉𝒂𝒕 𝒊𝒔 𝒂 𝒔𝒉𝒐𝒕 𝒐𝒇 𝒂𝒏 𝑬𝑴𝑷𝑬𝑹𝑶𝑹" 🤌#KingKohli takes #RCB over the line with a sublime 6️⃣👊#TATAIPL #IPLonJioCinema | @RCBTweets @imVkohli pic.twitter.com/DUpY55ZfLM
— JioCinema (@JioCinema) April 2, 2023
ಮುಂಬೈ ವಿರುದ್ಧ ಆರ್ಸಿಬಿಗೆ ಜಯ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ನಾಯಕ ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನಾಗಿ ಪ್ಲೆಸಿಸ್ ತೆಗೆದುಕೊಂಡ ನಿರ್ಧಾರ ಉತ್ತಮವಾಗಿಯೇ ಇತ್ತು. ಮುಂಬೈ ತಂಡವು 50 ರನ್ಗಳು ಕಲೆ ಹಾಕುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದರಿಂದ ರೋಹಿತ್ ಶರ್ಮಾ ಪಡೆ ನೀರಸ ಓಪನಿಂಗ್ ಪಡೆಯಿತು. ಆದರೆ, ತಿಲಕ್ ವರ್ಮಾ ಅಜೇಯ 84 ರನ್ಗಳ ನೆರವಿನಿಂದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 171 ರನ್ ಕಲೆ ಹಾಕಿ ಆರ್ಸಿಬಿಗೆ ಸ್ಪರ್ಧಾತ್ಮಕ ಮೊತ್ತದ ಗುರಿ ನೀಡಿತು.
ರೋಹಿತ್ ಬಳಗ ನೀಡಿದ್ದ 172 ರನ್ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿಗೆ ಭರ್ಜರಿ ಓಪನಿಂಗ್ ದೊರೆಯಿತು. ಆರಂಭಿಕ ಬ್ಯಾಟರ್ಗಳಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್ ಮೊದಲ ವಿಕೆಟ್ಗೆ ಅಮೋಘ ಪ್ರದರ್ಶನ ನೀಡಿದರು. ವಿರಾಟ್, ಡು ಪ್ಲೆಸಿಸ್ ಅಬ್ಬರದ ಬ್ಯಾಟಿಂಗ್ನೊಂದಿಗೆ ಆಕರ್ಷಕ ಅರ್ಧಶತಕ ಗಳಿಸಿದರು. ಮೊದಲ ವಿಕೆಟ್ಗೆ 148 ರನ್ಗಳ ಜೊತೆಯಾಟ ಆಡುವ ಮೂಲಕ ಮುಂಬೈ ವಿರುದ್ಧ ಅಪರೂಪದ ದಾಖಲೆ ಬರೆಯಿತು ಈ ಜೋಡಿ. ಇಬ್ಬರು ಆಟಗಾರರು ತಂಡವನ್ನು ಗೆಲ್ಲಿಸಿಕೊಂಡು ಬರುವ ಮುನ್ಸೂಚನೆ ನೀಡಿದ್ದರು. ಆದರೆ 73 ರನ್ ಬಾರಿಸಿದ್ದ ಡು ಪ್ಲೆಸಿಸ್ ವಿಕೆಟ್ ಪಡೆಯುವ ಮೂಲಕ ಜೊತೆಯಾಟವನ್ನು ಅರ್ಷದ್ ಖಾನ್ ಮುರಿದರು. ಈ ಮೂಲಕ ಅರ್ಷದ್ ಖಾನ್ ಪದಾರ್ಪಣೆ ಪಂದ್ಯದಲ್ಲಿ ಮೊದಲ ವಿಕೆಟ್ ಸಾಧನೆ ತೋರಿದರು.
ಡು ಪ್ಲೆಸಿಸ್ ವಿಕೆಟ್ ಬಳಿಕ ಕ್ರೀಸಿಗೆ ಬಂದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಖಾತೆ ತೆರೆಯದೇ ಪೆವಿಲಿಯನ್ ಹಾದಿ ಹಿಡಿದರು. ಕಾರ್ತಿಕ್ ಔಟಾದ ನಂತರ ಮ್ಯಾಕ್ಸ್ವೆಲ್ ಕಣಕ್ಕಿಳಿದರು. ಕೇವಲ 3 ಎಸೆತಗಳಲ್ಲಿ ಎರಡು ಸಿಕ್ಸರ್ ಸಿಡಿಸುವ ಮೂಲಕ 12 ರನ್ಗಳನ್ನು ಕಲೆ ಹಾಕಿ ಅಜೇಯರಾಗಿ ಉಳಿದರು. ವಿರಾಟ್ ಕೊಹ್ಲಿ ಪಂದ್ಯದ ಕೊನೆಯಲ್ಲಿ ಸಿಕ್ಸ್ ಬಾರಿಸುವ ಮೂಲಕ ತಂಡಕ್ಕೆ ಗೆಲುವಿನ ಉಡುಗೊರೆ ನೀಡಿದರು. ಪಂದ್ಯದಲ್ಲಿ ಕೊಹ್ಲಿ ಬಾರಿಸಿದ ಕೊನೆಯ ಸಿಕ್ಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದ್ದು, 12 ವರ್ಷಗಳ ಹಿಂದೆ ವಿಶ್ವಕಪ್ನಲ್ಲಿ ಧೋನಿ ಬಾರಿಸಿದ್ದ ಸಿಕ್ಸ್ ನೆನಪಿಸುತ್ತಿದೆ ಎನ್ನುತ್ತಾರೆ ನೆಟ್ಟಿಗರು.
ಇದನ್ನೂ ಓದಿ: IPLನಲ್ಲಿ 50ನೇ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಕ್ರಿಕೆಟಿಗ ಕೊಹ್ಲಿ!