ಅಹಮದಾಬಾದ್ (ಗುಜರಾತ್): ಶುಭಮನ್ ಗಿಲ್, ರಶೀದ್ ಖಾನ್, ಹಾರ್ದಿಕ್ ಪಾಂಡ್ಯರ ಚುರುಕಿನ ಆಟ, ಕ್ರಿಕೆಟ್ನ ಮಾಸ್ಟರ್ ಮೈಂಡ್ ಎಮ್ಎಸ್ ಧೋನಿ ಅವರ ಚಾಣಾಕ್ಷ ನಡೆಯ ಪಂದ್ಯವನ್ನು ನೋಡಲು ನಿನ್ನೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂಗೆ ಬಂದಿದ್ದ ಅಭಿಮಾನಿಗಳಿಗೆ ವರುಣ ಬೇಸರ ಉಂಟುಮಾಡಿದ್ದ. ಆದರೆ, ಪಂದ್ಯವನ್ನು ಸೋಮವಾರ (ಇಂದು)ದ ಮೀಸಲು ದಿನಕ್ಕೆ ಮುಂದೂಡಲಾಯಿತು. ಹಾಗಾದರೆ ಇಂದಿನ ಹವಾಮಾನ ವರದಿ ಏನಿದೆ..?
-
🚨 NEWS 🚨#TATAIPL 2023 Final rescheduled To Monday, May 29th at 7:30PM IST.
— IndianPremierLeague (@IPL) May 28, 2023 " class="align-text-top noRightClick twitterSection" data="
Details 🔽 #Final | #CSKvGT https://t.co/yoiO1s94TH pic.twitter.com/L57Zj4rQrF
">🚨 NEWS 🚨#TATAIPL 2023 Final rescheduled To Monday, May 29th at 7:30PM IST.
— IndianPremierLeague (@IPL) May 28, 2023
Details 🔽 #Final | #CSKvGT https://t.co/yoiO1s94TH pic.twitter.com/L57Zj4rQrF🚨 NEWS 🚨#TATAIPL 2023 Final rescheduled To Monday, May 29th at 7:30PM IST.
— IndianPremierLeague (@IPL) May 28, 2023
Details 🔽 #Final | #CSKvGT https://t.co/yoiO1s94TH pic.twitter.com/L57Zj4rQrF
ಗುಜರಾತ್ನಲ್ಲಿ ಅಕಾಲಿಕ ಮಳೆ ಅನಾಹುತ ಸೃಷ್ಟಿಸುತ್ತಿದೆ. ಚಂಡಮಾರುತದ ಚಲನೆಯಿಂದಾಗಿ, ಕಳೆದ ಕೆಲವು ದಿನಗಳಿಂದ ಸುಡುವ ಶಾಖದ ನಡುವೆ ಗುಜರಾತ್ ಮೋಡ ಕವಿದ ವಾತಾವರಣ ಇತ್ತು. ನಿನ್ನೆ ಅದು ನೀರಾಗಿದ್ದು, ಐಪಿಎಲ್ ಪಂದ್ಯವನ್ನು ತೊಯ್ದಿದೆ. ಗುಜರಾತ್ನ ಹವಮಾನ ವರದಿಯ ಪ್ರಕಾರ ಇಂದು ನಾಳೆ ಮಳೆಯಾಗುವ ಸಂಭವ ಇದೆ. ಫೈನಲ್ ನೋಡಲು ಬರುವ ಅಭಿಮಾನಿಗಳಿಗೆ ಇಂದು ಬೇಸರ ಉಂಟುಮಾಡ್ತಾನಾ ವರುಣಾ ಇಲ್ಲ, ಫಲಿತಾಂಶಕ್ಕಾಗಿ ಚುಟುಕು ಪಂದ್ಯಕ್ಕಾದರೂ ಬಿಡುವು ಕೊಡುತ್ತಾನಾ ಕಾದುನೋಡಬೇಕಿದೆ.
"ಮುಂದಿನ ಎರಡು ದಿನಗಳಲ್ಲಿ ಅಹಮದಾಬಾದ್ ನಗರದಲ್ಲಿ ಸಂಜೆ ಗಾಳಿಯೊಂದಿಗೆ ಮಳೆಯಾಗುವ ನಿರೀಕ್ಷೆಯಿದೆ. ಅಕಾಲಿಕ ಮಾನ್ಸೂನ್ ರೂಪುಗೊಂಡಿದೆ, ಇದರ ಪರಿಣಾಮ ಇನ್ನೂ ಎರಡು ದಿನಗಳವರೆಗೆ ಮಳೆ ಇರುತ್ತದೆ. ಈ ಎರಡು ದಿನಗಳಲ್ಲಿ ಗಾಳಿಯ ವೇಗ ಗಂಟೆಗೆ 40-50 ಕಿಮೀ ಇದ್ದು, ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಫೈನಲ್ ಪಂದ್ಯಕ್ಕೆ ಅಡ್ಡಿಯಾಗಬಹುದು ಎಂದು ಹವಾಮಾನ ಇಲಾಖೆ ನಿರ್ದೇಶಕ ವಿಜಿನ್ ಲಾಲ್ ತಿಳಿಸಿದ್ದಾರೆ.
ಕಚ್ ಜೊತೆಗೆ ಉತ್ತರ ಗುಜರಾತ್ ಮತ್ತು ಸೌರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 30 ರಿಂದ 40 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ. ಅಮ್ರೇಲಿ, ಭಾವನಗರ, ಕಚ್, ಬನಸ್ಕಾಂತ, ಪಟಾನ್, ಮೆಹ್ಸಾನಾ, ಸಬರ್ಕಾಂತದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಮೇ 30 ರಂದು ಕಚ್ ಮತ್ತು ಬನಸ್ಕಾಂತ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದೆ.
ನಿನ್ನೆ ಸಂಜೆ ಸರಿಯಾಗಿ ಪಂದ್ಯದ ಟಾಸ್ಗೆ ಅರ್ಧ ಗಂಟೆಗೂ ಮುನ್ನ ಮಳೆ ಸುರಿಯಲಾರಂಭಿಸಿತು. ನಡುವೆ ಒಮ್ಮೆ ಕೊಂಚ ಸಮಯ ಬಿಡುವು ಕೊಟ್ಟಿತಾದರೂ, ಮೈದಾನದ ನೀರು ಆರುವ ಮುನ್ನ ಮತ್ತೆ ಗುಡುಗು, ಗಾಳಿ ಸಹಿತ ರಾತ್ರಿ 12ರ ಸುರಿದಿತ್ತು. ಇಂದು ಸಹ ಮೋಡ ಕವಿದ ವಾತಾವರಣದ ಮುನ್ಸೂಚನೆ ಇದ್ದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ವರದಿ ಹೇಳೀದೆ. 5 ಓವರ್ನ ಪಂದ್ಯಕ್ಕಾದರೂ ಅವಕಾಶ ಸಿಕ್ಕರೆ ಮಿಲಿಯನ್ ಡಾಲರ್ ಲೀಗ್ನ ಫೈನಲ್ಗೆ ಒಂದು ಅರ್ಧ ಕಲ್ಪಿಸಿದಂತಾಗಲಿದೆ.
ಇಂದೂ ಉಭಯ ತಂಡಗಳು ಅಹಮದಾಬಾದ್ನಲ್ಲೇ ಫೈನಲ್ ಆಡಲಿವೆ. ಮಳೆಯಿಂದಾಗಿ ಮೀಸಲು ದಿನವೂ ಪಂದ್ಯ ಆಡಲಾಗದಿದ್ದರೆ, ಲೀಗ್ ಹಂತದ ನಂತರ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡ ವಿಜಯಶಾಲಿಯಾಗಲಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ಗೆ ಎರಡನೇ ಬಾರಿಗೆ ಐಪಿಎಲ್ ಚಾಂಪಿಯನ್ ಎಂದು ಘೋಷಿಸಲಾಗುತ್ತದೆ.
ಇದನ್ನೂ ಓದಿ: ರೈಲ್ವೆ ನಿಲ್ದಾಣದ ನೆಲಹಾಸಿನಲ್ಲೇ ರಾತ್ರಿ ಕಳೆದ ಸಿಎಸ್ಕೆ ಫ್ಯಾನ್ಸ್: ವಿಡಿಯೋ