ಮುಂಬೈ: ಇಲ್ಲಿನ ಬ್ರಬೌರ್ನೆ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ 7 ವಿಕೆಟ್ಗಳ ಭಜರ್ರಿ ಜಯ ಸಾಧಿಸಿದೆ. ರಾಹುಲ್ ತ್ರಿಪಾಠಿ ಹಾಗೂ ಐಡೆನ್ ಮಾರ್ಕ್ರಮ್ರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ಈ ಋತುವಿನಲ್ಲಿ ಮೂರನೇ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಕೆಕೆಆರ್ ಪರವಾಗಿ ನಿತೀಶ್ ರಾಣಾ 54, ಆ್ಯಂಡ್ರೆ ರಸೆಲ್ 49, ನಾಯಕ ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು. ಸನ್ರೈಸರ್ಸ್ ಹೈದ್ರಾಬಾದ್ ಪರವಾಗಿ ಟಿ. ನಟರಾಜನ್ 3, ಉಮ್ರಾನ್ ಮಲಿಕ್ 2, ಮಾರ್ಕೊ ಜಾನ್ಸೆನ್ 1 ವಿಕೆಟ್ ಪಡೆದರು.
-
A hat-trick of wins! 👏 👏
— IndianPremierLeague (@IPL) April 15, 2022 " class="align-text-top noRightClick twitterSection" data="
The Kane Williamson-led @SunRisers continue their fine run of form & bag 2⃣ more points as they beat #KKR by 7⃣ wickets. 👍 👍
Scorecard ▶️ https://t.co/HbO7UhlWeq#TATAIPL | #SRHvKKR pic.twitter.com/gRteb5nOAJ
">A hat-trick of wins! 👏 👏
— IndianPremierLeague (@IPL) April 15, 2022
The Kane Williamson-led @SunRisers continue their fine run of form & bag 2⃣ more points as they beat #KKR by 7⃣ wickets. 👍 👍
Scorecard ▶️ https://t.co/HbO7UhlWeq#TATAIPL | #SRHvKKR pic.twitter.com/gRteb5nOAJA hat-trick of wins! 👏 👏
— IndianPremierLeague (@IPL) April 15, 2022
The Kane Williamson-led @SunRisers continue their fine run of form & bag 2⃣ more points as they beat #KKR by 7⃣ wickets. 👍 👍
Scorecard ▶️ https://t.co/HbO7UhlWeq#TATAIPL | #SRHvKKR pic.twitter.com/gRteb5nOAJ
ಕೆಕೆಆರ್ ನೀಡಿದ್ದ 175 ರನ್ಗಳ ಸವಾಲಿನ ಗುರಿ ಬೆನ್ನತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ಆರಂಭಿಕ ಹಿನ್ನಡೆ ಅನುಭವಿತು. ನಾಯಕ ಕೇನ್ ವಿಲಿಯಮ್ಸನ್ 17 ರನ್ ಗಳಿ ಔಟಾಗಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಅಲ್ಲದೇ, ಅಭಿಷೇಕ್ ಶರ್ಮಾ ಕೂಡ 3 ರನ್ ಗಳಿಸಿ ವೈಫಲ್ಯ ಅನುಭವಿಸಿದರು.
ಬಳಿಕ ಕ್ರೀಸ್ಗಿಳಿದ ರಾಹುಲ್ ತ್ರಿಪಾಠಿ ಅಬ್ಬರದ ಬ್ಯಾಟಿಂಗ್ ಮಾಡಿದರು. 71 ರನ್ ಗಳಿಸಿದ ತ್ರಿಪಾಠಿ 6 ಸಿಕ್ಸರ್, 4 ಬೌಂಡರಿ ಗಳಿಸಿದರು. ಇನ್ನೊಂದು ತುದಿಯಲ್ಲಿ ಐಡೆನ್ ಮಾರ್ಕ್ರಮ್ ಕೂಡ ಅದ್ಭುತ ಬ್ಯಾಟಿಂಗ್ ಮಾಡಿದರು. ಅವರು 6 ಬೌಂಡರಿ, 4 ಸಿಕ್ಸರ್ ಸಮೇತ ಔಟಾಗದೇ 68 ರನ್ ಗಳಿಸಿ ಗೆಲುವಿನ ದಡ ಮುಟ್ಟಿಸಿದರು.
ಕೆಕೆಆರ್ ಪರವಾಗಿ ಬ್ಯಾಟಿಂಗ್ನಲ್ಲಿ ಮಿಂಚಿದ್ದ ಆ್ಯಂಡ್ರೆ ರಸೆಲ್ 2 ವಿಕೆಟ್, ಪ್ಯಾಟ್ ಕಮ್ಮಿನ್ಸ್ 1 ವಿಕೆಟ್ ಪಡೆದರು. 71 ರನ್ ಸಿಡಿಸಿದ ರಾಹುಲ್ ತ್ರಿಪಾಠಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.
ಓದಿ: ಐಪಿಎಲ್ನ 10ರ ಪೈಕಿ 9 ತಂಡಗಳಲ್ಲಿ ಆಡಿದ ಆ್ಯರನ್ ಫಿಂಚ್: ಸಿಎಸ್ಕೆ ಒಂದೇ ಬಾಕಿ!