ಜೈಪುರ (ರಾಜಸ್ಥಾನ): ಸನ್‌ರೈಸರ್ಸ್ ಹೈದರಾಬಾದ್ ಆಟಗಾರ ಅಬ್ದುಲ್ ಸಮದ್ ಬಗ್ಗೆ ಮಾಜಿ ಕೋಚ್ ಟಾಮ್ ಮೂಡಿ ಭವಿಷ್ಯ ನುಡಿದಿದ್ದಾರೆ. ತಂಡದ 215 ರನ್‌ಗಳ ಬೆನ್ನತ್ತಿದ್ದ ಸಂದರ್ಭದಲ್ಲಿ ಕೊನೆಯ ಓವರ್‌ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಅಬ್ದುಲ್ ಸಮದ್ ಪಂದ್ಯದ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ತಮ್ಮ ತಂಡ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಪ್ಲೇ-ಆಫ್‌ಗೆ ಕರೆದೊಯ್ಯುವ ಭರವಸೆಯನ್ನು ಜೀವಂತವಾಗಿರಿಸಿದರು. ಕೊನೆಯ ಎಸೆತದಲ್ಲಿ ಹೊಡೆದ ಸಿಕ್ಸರ್ ಅವರ ವೃತ್ತಿಜೀವನದ 'ಟರ್ನಿಂಗ್ ಪಾಯಿಂಟ್' ಎಂದೇ ಹೇಳಬಹುದು.
21ರ ಹರೆಯದ ಯುವ ಆಟಗಾರ ಅಬ್ದುಲ್ ಸಮದ್ ಅವರಿಗೆ ಇದು ನಾಲ್ಕನೇ ಐಪಿಎಲ್ ಸೀಸನ್ ಆಗಿದೆ. ಈ ವರ್ಷ ಅವರು ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದಾರೆ. ಇದುವರೆಗೆ ಆಡಿರುವ 30 ಪಂದ್ಯಗಳಲ್ಲಿ ಸ್ಮರಣೀಯ ಪ್ರದರ್ಶನ ನೀಡಲು ಸಾಧ್ಯವಾಗದೇ ಇರಬಹುದು. ಆದರೆ 31ನೇ ಪಂದ್ಯವನ್ನು ಅವರು ಎಂದಿಗೂ ಮರೆಯುವುದಿಲ್ಲ. ಐಪಿಎಲ್‌ನಲ್ಲಿ ಈವರೆಗೆ ಆಡಿದ 31 ಪಂದ್ಯದಲ್ಲಿ ಅವರು ಕೇವಲ 18.63 ಬ್ಯಾಟಿಂಗ್ ಸರಾಸರಿಯನ್ನು ಹೊಂದಿದ್ದು, 136.67 ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಸಮದ್ ಈವರೆಗೆ ಒಟ್ಟು 20 ಬೌಂಡರಿ ಹಾಗೂ 21 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.
-
Jaipur witnessed an epic finish to the chase after Abdul Samad smacked a maximum on the final ball 🧡
— IndianPremierLeague (@IPL) May 8, 2023 " class="align-text-top noRightClick twitterSection" data="
Hear from the man of the moment who decodes that dramatic final over with Umran Malik 👌🏻
Full Interview 🎥🔽 #TATAIPL | #RRvSRH https://t.co/GBMlglVtEf pic.twitter.com/icWJcMpVyH
">Jaipur witnessed an epic finish to the chase after Abdul Samad smacked a maximum on the final ball 🧡
— IndianPremierLeague (@IPL) May 8, 2023
Hear from the man of the moment who decodes that dramatic final over with Umran Malik 👌🏻
Full Interview 🎥🔽 #TATAIPL | #RRvSRH https://t.co/GBMlglVtEf pic.twitter.com/icWJcMpVyHJaipur witnessed an epic finish to the chase after Abdul Samad smacked a maximum on the final ball 🧡
— IndianPremierLeague (@IPL) May 8, 2023
Hear from the man of the moment who decodes that dramatic final over with Umran Malik 👌🏻
Full Interview 🎥🔽 #TATAIPL | #RRvSRH https://t.co/GBMlglVtEf pic.twitter.com/icWJcMpVyH
2021 ಮತ್ತು 2022 ರಲ್ಲಿ ಸಮದ್ ಅವರೊಂದಿಗೆ ತರಬೇತುದಾರರಾಗಿ ಕೆಲಸ ಮಾಡಿದ ಆಸ್ಟ್ರೇಲಿಯಾದ ಅನುಭವಿ ಟಾಮ್ ಮೂಡಿ ಅವರು ಕ್ರಿಕ್ ಇನ್ಫೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಮತ್ತು ಉದಯೋನ್ಮುಖ ಆಟಗಾರರಾಗಿರುವ ಅಬ್ದುಲ್ ಸಮದ್ ಅವರು ಯೂಸುಫ್ ಪಠಾಣ್ ಅವರಂತಹ ಆಟಗಾರನಾಗುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೇಳಿದರು. ಒತ್ತಡದ ಸಮಯದಲ್ಲಿ ಸರಿಯಾದ ನಿರ್ಧಾರದಲ್ಲಿ ಬ್ಯಾಟಿಂಗ್ ಮಾಡಿ ಅಗತ್ಯ ರನ್ ಕಲೆಹಾಕುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಸ್ವಂತ ಬಲದ ಮೇಲೆ ಉತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಮದ್ ಅವರ ಇನ್ನಿಂಗ್ಸ್ ಅವರ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಲಿದೆ ಎಂದು ಟಾಮ್ ಮೂಡಿ ಹೇಳಿದರು.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸಮದ್ ತನ್ನ ತಂಡವನ್ನು ಸನ್‌ರೈಸರ್ಸ್ ವಿರುದ್ಧ ಗೆಲ್ಲಿಸಲು ವಿಫಲರಾಗಿದ್ದರು. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ 18 ಎಸೆತಗಳಲ್ಲಿ 21 ರನ್ ಗಳಿಸಿ ಔಟಾದರು. 4 ಬಾಲ್ಗೆ 7 ರನ್ ಅಗತ್ಯ ಇದ್ದಾಗ ಅವರ ವಿಕೆಟ್ ಉರುಳಿತ್ತು. ಇಲ್ಲವಾದಲ್ಲಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸುತ್ತಿತ್ತು. ಪಂದ್ಯದ ನಂತರ, ಸನ್‌ರೈಸರ್ಸ್ ಬ್ಯಾಟಿಂಗ್ ಕೋಚ್ ಹೇಮಂಗ್ ಬದಾನಿ ಅವರೊಂದಿಗೆ ಮಾತನಾಡುವಾಗ, ಸಮದ್ 5 ರನ್‌ಗಳ ಸೋಲಿನ ಜವಾಬ್ದಾರಿಯನ್ನು ಹೊತ್ತುಕೊಂಡರು.
ಅದರಂತೆ ಸಮದ್ ರಾಜಸ್ಥಾನ ರಾಯಲ್ಸ್ ವಿರುದ್ಧ ತಮ್ಮ ಜವಾಬ್ದಾರಿಯನ್ನು ತೋರಿದರು. ಕೋಚ್ಗೆ ಕೊಟ್ಟ ಮಾತನ್ನು ಉಳಿಸಿಕೊಂಡರು. ಇಷ್ಟು ದೊಡ್ಡ ಗೆಲುವಿಗೆ ಕಾರಣರಾದರೂ ಅವರು ಸಭ್ಯ ನಡವಳಿಕೆಯಿಂದ ಇನ್ನಷ್ಟು ಮೆಚ್ಚುಗೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: IPLನಲ್ಲಿ ಇಂದು: ಪ್ಲೇ ಆಫ್ ಉಳಿವಿಗಾಗಿ ಪಂಜಾಬ್-ಕೋಲ್ಕತ್ತಾ ಕದನ