ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದಲ್ಲಿ ಹಲವಾರು ದಾಖಲೆಗಳು ನಿರ್ಮಾಣ ಆದರು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ಭುವನೇಶ್ವರ್ ಪಡೆಗೆ 204 ರನ್ ಬೃಹತ್ ಗುರಿ ನೀಡಿತು. 16ನೇ ಆವೃತ್ತಿಯಲ್ಲಿ 200+ ರನ್ ದಾಟಿದ ಮೊದಲ ಪಂದ್ಯ ಇದಾಗಿದೆ.
ಸಲೀಂ ದುರಾನಿಗೆ ಗೌರವ: ಭಾರತದ ಮಾಜಿ ಕ್ರಿಕೆಟಿಗ ಸಲೀಂ ದುರಾನಿ ಅವರ ನಿಧನದ ಹಿನ್ನೆಲೆ ಪಂದ್ಯಾರಂಭಕ್ಕೂ ಮುನ್ನ ಮೌನಾಚರಣೆ ಮಾಡಲಾಯಿತು. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ ರಾಯಲ್ಸ್ ಆಟಗಾರರು ಮತ್ತು ತರಬೇತುದಾರರು, ಪಂದ್ಯದ ಅಧಿಕಾರಿಗಳು, ಅನುಭವಿ ಆಲ್‌ರೌಂಡರ್‌ಗೆ ಗೌರವ ಸಲ್ಲಿಸಲು ಪಂದ್ಯದ ಮೊದಲು ಒಂದು ನಿಮಿಷ ಮೌನ ಆಚರಿಸಿದರು. ದಿವಂಗತ ಭಾರತೀಯ ಕ್ರಿಕೆಟಿಗನಿಗೆ ಗೌರವ ಸೂಚಕವಾಗಿ ಎಲ್ಲಾ ಆಟಗಾರರು ತೋಳಿಗೆ ಕಪ್ಪು ಪಟ್ಟಿಗಳನ್ನು ಧರಿಸಿ ಕಣಕ್ಕಿಳಿದರು.
ದಾಖಲೆಯ ಪವರ್-ಪ್ಲೇ ರನ್: ರಾಜಸ್ಥಾನ ರಾಯಲ್ಸ್ ತಂಡ ಈ ಪಂದ್ಯದಲ್ಲಿ ಆರು ಓವರ್ ಮುಕ್ತಾಯದ ವೇಳೆಗೆ ಒಂದು ವಿಕೆಟ್ ನಷ್ಟದಿಂದ 85 ರನ್ ಗಳಿಸಿತ್ತು. ಇದು ಪವರ್-ಪ್ಲೇ ಸಮಯದ ರಾಜಸ್ಥಾನ ರಾಯಲ್ಸ್ನ ಅತಿ ಹೆಚ್ಚಿನ ರನ್ ಆಗಿದೆ. ಈ ಹಿಂದೆ ದುಬೈನಲ್ಲಿ ಚೆನ್ನೈ ವಿರುದ್ಧ 81 ರನ್ ಗಳಿಸಿತ್ತು. ಆದರೆ ಒಟ್ಟಾರೆ ಐಪಿಎಲ್ನಲ್ಲಿ ಪವರ್-ಪ್ಲೇ ವೇಳೆ ಅತಿ ಹೆಚ್ಚು ರನ್ ಗಳಿಸಿದ ತಂಡ ಕೆಕೆಆರ್ ಆಗಿದೆ. 2017ರಲ್ಲಿ ಆರ್ಸಿಬಿ ವಿರುದ್ಧ ವಿಕೆಟ್ ನಷ್ಟವಿಲ್ಲದೇ 105 ರನ್ ಗಳಿಸಿತ್ತು.
-
.@SunRisers & @rajasthanroyals and the match officials observe silence to pay respects to the late Salim Durani. pic.twitter.com/alTAAhauoK
— IndianPremierLeague (@IPL) April 2, 2023 " class="align-text-top noRightClick twitterSection" data="
">.@SunRisers & @rajasthanroyals and the match officials observe silence to pay respects to the late Salim Durani. pic.twitter.com/alTAAhauoK
— IndianPremierLeague (@IPL) April 2, 2023.@SunRisers & @rajasthanroyals and the match officials observe silence to pay respects to the late Salim Durani. pic.twitter.com/alTAAhauoK
— IndianPremierLeague (@IPL) April 2, 2023
ಪವರ್ ಪ್ಲೇಯಲ್ಲಿ 3 ಅರ್ಧಶತಕ ದಾಖಲಿಸಿದ ಬಟ್ಲರ್: ಜೋಸ್ ಬಟ್ಲರ್ ಐಪಿಎಲ್ನ ಪವರ್ ಪ್ಲೇ ಒಳಗೆ 3 ಬಾರಿ ಅರ್ಧಶತಕ ದಾಖಲಿಸಿದ ದಾಖಲೆ ಇಂದಿನ 50 ರನ್ ಪೂರೈಕೆ ಇಂದ ಆಗಿದೆ. ಈ ಮೂಲಕ ಕ್ರಿಸ್ ಗೇಲ್ ದಾಖಲೆ ಸರಿಗಟ್ಟಿದ್ದಾರೆ. ಗೇಲ್ ಮತ್ತು ಬಟ್ಲರ್ ಈ ದಾಖಲೆಯ ಎರಡನೇ ಸ್ಥಾನವನ್ನು ಹಂಚಿಕೊಂಡರೆ, 6 ಅರ್ಧಶತಕ ಗಳಿಸಿದ ಡೇವಿಡ್ ವಾರ್ನರ್ ಮೊದಲ ಸ್ಥಾನದಲ್ಲಿದ್ದಾರೆ.
ನಾಲ್ಕು ಆವೃತ್ತಿಯ ಐಪಿಎಲ್ನಲ್ಲಿ ಸಂಜು ಭರ್ಜರಿ ಆರಂಭ: ಇಂದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ 55 ರನ್ ಗಳಿಸಿ ಔಟ್ ಆದರು. ಸಂಜು ಕಳೆದ ನಾಲ್ಕು ಆವೃತ್ತಿಯ ಮೊದಲ ಪಂದ್ಯದಲ್ಲಿ 1 ಶತಕ ಹಾಗೂ 3 ಅರ್ಧಶತಕ ಗಳಿಸಿದ್ದಾರೆ. 2020 ರಲ್ಲಿ ಚೆನ್ನೈ ವಿರುದ್ಧ 32 ಬಾಲ್ನಲ್ಲಿ 74, 2021 ರಲ್ಲಿ ಪಂಜಾಬ್ ವಿರುದ್ಧ 63 ಬಾಲ್ನಲ್ಲಿ 119 ಮತ್ತು 2022ರಲ್ಲಿ ಹೈದರಾಬಾದ್ ವಿರುದ್ಧ 55 ರನ್ ಗಳಿಸಿದ್ದಾರೆ. ಕಾಕತಾಳೀಯ ಎಂದರೆ ಈ ಪಂದ್ಯದಲ್ಲೂ 55ಕ್ಕೆ ಔಟ್ ಆಗಿದ್ದಾರೆ.
ಮೂವರ ಅರ್ಧಶತಕ: ಇಂದಿನ ಪಂದ್ಯದಲ್ಲಿ ಜೈಸ್ವಾಲ್ 54, ಜೋಸ್ ಬಟ್ಲರ್ 54 ಮತ್ತು ಸಂಜು ಸ್ಯಾಮ್ಸನ್ 55 ರನ್ ಗಳಿಸಿದರು. ಈ ಮೂಲಕ ಮೊಲದ ಮೂರು ಬ್ಯಾಟರ್ಗಳು ಅರ್ಧಶತಕ ದಾಖಲು ಮಾಡಿದ ರೆಕಾರ್ಡ್ ಬರೆದರು. ಈ ರೀತಿ ಒಂದು ಇನ್ನಿಂಗ್ಸ್ನಲ್ಲಿ 3 ಅರ್ಧಶತಕ ದಾಖಲಾದ ನಾಲ್ಕನೇ ಐಪಿಎಲ್ ಪಂದ್ಯ ಇದಾಗಿದೆ.
ಇದನ್ನೂ ಓದಿ: TATA IPL 2023: ಜೈಸ್ವಾಲ್, ಬಟ್ಲರ್, ಸಂಜು ಅರ್ಧಶತಕ.. ರೈಸರ್ಸ್ಗೆ 204 ರನ್ ಗುರಿ