ETV Bharat / sports

IPL 2023: 178 ರನ್​ಗೆ ಹೈದರಾಬಾದ್‌ ಸರ್ವಪತನ: ಮುಂಬೈಗೆ 14 ರನ್​ನಿಂದ ಗೆಲುವು

ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ಸನ್​ ರೈಸರ್ಸ್​ ತಂಡವು ಮುಂಬೈ ಇಂಡಿಯನ್ಸ್​ ತಂಡ ವಿರುದ್ಧ ಸೋಲು ಕಂಡಿದೆ.

IPL 2023
IPL 2023
author img

By

Published : Apr 18, 2023, 7:16 PM IST

Updated : Apr 19, 2023, 11:35 AM IST

ಹೈದರಾಬಾದ್ (ತೆಲಂಗಾಣ): ಐಪಿಎಲ್​ನ 25ನೇ ಪಂದದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ 14 ರನ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ರೋಹಿತ್​ ಶರ್ಮಾ ಪಡೆ ತಾನು ಆಡಿದ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳನ್ನು ಗೆದ್ದು ಪಾಯಿಂಟ್ಸ್​ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಜಿಗಿದಿದೆ.

ಇಲ್ಲಿನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಐದು ವಿಕೆಟ್​ ನಷ್ಟಕ್ಕೆ ​192 ರನ್​ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಹೈದರಾಬಾದ್​ ಉತ್ತಮ ಆರಂಭ ಪಡೆಯಲಿಲ್ಲ. ಹ್ಯಾರಿ ಬ್ರೂಕ್ (9) ಮತ್ತು ರಾಹುಲ್​ ತ್ರಿಪಾಠಿ (7) ಬೇಗ ವಿಕೆಟ್​ ಒಪ್ಪಿಸಿದರು.

ನಂತರದಲ್ಲಿ ಮಯಾಂಕ್ ಅಗರ್ವಾಲ್ ಜೊತೆಗೂಡಿದ ನಾಯಕ ಐಡೆನ್ ಮಾರ್ಕ್ರಾಮ್ 22 ರನ್ ಬಾರಿಸಿ ಔಟಾದರು. ಅಭಿಷೇಕ್ ಶರ್ಮಾ 1 ರನ್​ಗೆ ಪೆವಿಲಿಯನ್​ ಸೇರಿದರು. ಬಳಿಕ ಬಂದ ಹೆನ್ರಿಚ್ ಕ್ಲಾಸೆನ್ 36 ರನ್​ ಸಿಡಿಸಿ ಮಯಾಂಕ್​ ಅವರೊಂದಿಗೆ 55 ರನ್​ಗಳ ಜೊತೆಯಾಟ ನೀಡಿದರು. ಇದಾದ ಸ್ವಲ್ಪ ಹೊತ್ತಿನಲ್ಲೇ 48 ರನ್​ ಗಳಿಸಿದ್ದ ಮಯಾಂಕ್​ ಕೂಡ ಔಟಾದರು. ಆದರೆ, ನಂತರ ಯಾವ ಬ್ಯಾಟರ್​ನಿಂದ ನಿರೀಕ್ಷಿತ ರನ್​ ಬರಲಿಲ್ಲ. ಮಾರ್ಕೊ ಜಾನ್ಸೆನ್ (13), ವಾಷಿಂಗ್ಟನ್ ಸುಂದರ್ (10), ಅಬ್ದುಲ್​ ಸಮದ್​ (9), ಭುವನೇಶ್ವರ್ ಕುಮಾರ್ (2) ಮತ್ತು ಮಯಾಂಕ್ ಮಾರ್ಕಂಡೆ 2* ರನ್​ ಬಾರಿಸಿದರು. ಈ ಮೂಲಕ ಇನ್ನಿಂಗ್​ನ ಒಂದು ಬಾಲ್​ ಬಾಕಿ ಇರುವಾಗಲೇ ಹೈದರಾಬಾದ್​ 178 ರನ್​ಗೆ ಸರ್ವಪತನವಾಯಿತು.

ಮುಂಬೈ ಪರ ಜೇಸನ್ ಬೆಹ್ರೆನ್‌ಡಾರ್ಫ್, ರಿಲೆ ಮೆರೆಡಿತ್ ಮತ್ತು ಪಿಯೂಷ್ ಚಾವ್ಲಾ ತಲಾ ಎರಡು ವಿಕೆಟ್​ ಹಾಗೂ ಅರ್ಜುನ್ ತೆಂಡೂಲ್ಕರ್, ಕ್ಯಾಮೆರಾನ್ ಗ್ರೀನ್ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಕ್ಯಾಮರಾನ್ ಗ್ರೀನ್ ಅವರ ಅತ್ಯಮೂಲ್ಯ ಅರ್ಧಶತಕದ ನೆರವಿನಿಂದ ಮುಂಬೈ ತಂಡ 5 ವಿಕೆಟ್​ ನಷ್ಟಕ್ಕೆ 192 ರನ್​ ಕಲೆ ಹಾಕಿತ್ತು. ನಾಯಕ ರೋಹಿತ್​ ಶರ್ಮಾ 18 ಬಾಲ್​ನಲ್ಲಿ 28 ರನ್​ ಗಳಿಸಿ ಔಟಾದರು. ಇದೇ ವೇಳೆ, 14 ರನ್ ಗಳಿಸುತ್ತಿದ್ದಂತೆ ಹಿಟ್​ ಮ್ಯಾನ್​ ರೋಹಿತ್​ ಶರ್ಮಾ ಐಪಿಎಲ್​ನಲ್ಲಿ ಆರು ಸಾವಿರ ರನ್​ ಗಡಿ ಮುಟ್ಟಿದ ನಾಲ್ಕನೇ ಆಟಗಾರ ಎಂಬ ಖ್ಯಾತಿಗೆ ಒಳಗಾದರು.

ನಂತರ ಕ್ಯಾಮರಾನ್ ಗ್ರೀನ್, ಇಶಾನ್ ಕಿಶನ್ ಜೊತೆಗೂಡಿ ಉತ್ತಮ ಇನ್ನಿಂಗ್ಸ್​ ಕಟ್ಟಿದರು. ಕಿಶನ್​ ನಿಧಾನಗತಿಯಲ್ಲಿ ಬ್ಯಾಟ್​ ಬೀಸಿದರೂ ಎರಡು ಸಿಕ್ಸರ್​​ ಮತ್ತು ಮೂರು ಬೌಂಡರಿಯೊಂದಿಗೆ 38 ರನ್​ ಗಳಿಸಿದರು. ಇಶಾನ್​ ನಂತರ ಬಂದ ಸೂರ್ಯ ಕುಮಾರ್​ ಯಾದವ್ (7)​ ಬೃಹತ್​ ಇನ್ನಿಂಗ್ಸ್​ ಕಟ್ಟುವಲ್ಲಿ ಎಡವಿದರು.

ಮೊದಲ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್​ ಆಡಿದ್ದ ತಿಲಕ್​ ವರ್ಮಾ ಅಬ್ಬರಿಸುವ ಮುನ್ಸೂಚನೆ ನೀಡಿದರು. ಆದರೆ ಅವರಿಗೆ ಇನ್ನೊಂದು ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಸಾಧ್ಯವಾಗಲಿಲ್ಲ. 17 ಬಾಲ್​ನಲ್ಲಿ 4 ಸಿಕ್ಸ್​ ಮತ್ತು 2 ಬೌಂಡರಿ 37 ರನ್​ ಗಳಿಸಿದರು. ಕೊನೆಯ ಓವರ್​ಗಳಲ್ಲಿ ಟಿಮ್ ಡೇವಿಡ್ ಅವರು ಕ್ಯಾಮೆರಾನ್ ಗ್ರೀನ್​ರನ್ನು ಸೇರಿಕೊಂಡರು. ಕೊನೆಯ 3.3 ಓವರ್​ನಲ್ಲಿ ಈ ಜೋಡಿ 41 ರನ್​ ಸೇರಿಸಿತು. ಗ್ರೀನ್ 40 ಬಾಲ್ ಎದುರಿಸಿ 6 ಬೌಂಡರಿ ಮತ್ತು 2 ಸಿಕ್ಸರ್​​ ಸಹಿತ ಅಜೇಯ 64 ರನ್​ ಗಳಿಸಿದರು. ಅವರಿಗೆ ಸಾಥ್​ ನೀಡಿದ ಟಿಮ್​ 16 ರನ್​ ಗಳಿಸಿ ಕೊನೆಯ ಬಾಲ್​ನಲ್ಲಿ ರನೌಟ್​ ಆದರು. ಸನ್​ ರೈಸರ್ಸ್​ ಪರ ಮಾರ್ಕೊ ಜಾನ್ಸೆನ್ 2, ಭುವನೇಶ್ವರ್​ ಮತ್ತು ನಟರಾಜನ್​ ತಲಾ 1 ವಿಕೆಟ್​ ಪಡೆದರು.

ಇದನ್ನೂ ಓದಿ: ಹೊಸ ದಾಖಲೆಯ ಹೊಸ್ತಿಲಲ್ಲಿ ರೋಹಿತ್​: 6,000 ರನ್‌ ಗಡಿಯತ್ತ ಹಿಟ್​ ಮ್ಯಾನ್ ಚಿತ್ತ!

Last Updated : Apr 19, 2023, 11:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.