ನವದೆಹಲಿ: ವಾರ್ನರ್ ಮತ್ತು ಅಕ್ಷರ್ ಪಟೇಲ್ ಅವರ ಅರ್ಧಶತಕದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ಮುಂಬೈ ಇಂಡಿಯನ್ಸ್ಗೆ 173 ರನ್ನ ಸ್ಪರ್ಧಾತ್ಮಕ ಗುರಿ ನೀಡಿದೆ. ಅನುಭವಿ ಸ್ಪಿನ್ನರ್ ಪಿಯೂಶ್ ಚಾವ್ಲಾ ಡೆಲ್ಲಿಯ ಪ್ರಮುಖ ಮೂರು ವಿಕೆಟ್ಗಳನ್ನು ಕಿತ್ತು ಬೃಹತ್ ರನ್ಗೆ ಕಡಿವಾಣ ಹಾಕಿದರು. ವಾರ್ನರ್ 51 ಮತ್ತು ಅಕ್ಷರ್ ಪಟೇಲ್ 54 ರನ್‌ಗಳ ಸಹಾಯದಿಂದ ಡೆಲ್ಲಿ ಕ್ಯಾಪಿಟಲ್ಸ್ 10 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು.
ಟಾಸ್ ಸೋತು ಬ್ಯಾಟಿಂಗ್ಗಿಳಿದ ಡೆಲ್ಲಿ ಮತ್ತೆ ಬೃಹತ್ ಜೊತೆಯಾಟದ ಕೊರತೆ ಎದುರಿಸಿತು. ಆರಂಭಿಕ ಡೇವಿಡ್ ವಾರ್ನರ್ ಕಳೆದ ಪಂದ್ಯಗಳ ರೀತಿಯಲ್ಲೇ ಕ್ರೀಸ್ ಕಚ್ಚಿ ನಿಂತರೆ ಇನ್ನೊಂದು ಬದಿಯಲ್ಲಿ ವಿಕೆಟ್ಗಳು ಉರುಳುತ್ತಿದ್ದವು. ಆರಂಭಿಕ ಪೃಥ್ವಿ ಶಾ 15 ರನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮನೀಷ್ ಪಾಂಡೆ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ 26 ರನ್ ಪೇರಿಸಿದರು. ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಯಶ್ ದುಳ್ 2 ರನ್ಗೆ ಔಟ್ ಆದರು. ಅವರ ಬೆನ್ನಲ್ಲೇ ರೋವ್‌ಮನ್ ಪೊವೆಲ್ (4), ಲಲಿತ್ ಯಾದವ್(2) ವಿಕೆಟ್ ಒಪ್ಪಿಸಿದರು.
-
🚨 Toss Update 🚨@mipaltan win the toss and elect to field first against @DelhiCapitals.
— IndianPremierLeague (@IPL) April 11, 2023 " class="align-text-top noRightClick twitterSection" data="
Follow the match ▶️ https://t.co/6PWNXA2Lk6 #TATAIPL | #DCvMI pic.twitter.com/ow1NTZ2Gsx
">🚨 Toss Update 🚨@mipaltan win the toss and elect to field first against @DelhiCapitals.
— IndianPremierLeague (@IPL) April 11, 2023
Follow the match ▶️ https://t.co/6PWNXA2Lk6 #TATAIPL | #DCvMI pic.twitter.com/ow1NTZ2Gsx🚨 Toss Update 🚨@mipaltan win the toss and elect to field first against @DelhiCapitals.
— IndianPremierLeague (@IPL) April 11, 2023
Follow the match ▶️ https://t.co/6PWNXA2Lk6 #TATAIPL | #DCvMI pic.twitter.com/ow1NTZ2Gsx
ಅಕ್ಷರ್ ಐಪಿಎಲ್ ಚೊಚ್ಚಲ ಅರ್ಧಶತಕ: ಆಲ್ ರೌಂಡರ್ ಅಕ್ಷರ್ ಪಟೇಲ್ ಅಬ್ಬರದ ಬ್ಯಾಟಿಂಗ್ ಮಾಡಿ ಐಪಿಎಲ್ನ ಚೊಚ್ಚಲ ಅರ್ಧಶತಕ ದಾಖಲಿಸಿದರು. 25 ಬಾಲ್ ಎದುರಿಸಿದ ಅವರು 5 ಸಿಕ್ಸ್ ಮತ್ತು 4 ಬೌಂಡರಿಯಿಂದ 54 ರನ್ ಗಳಿಸಿದರು. ಇವರು ನಾಯಕ ವಾರ್ನರ್ ಜೊತೆ ಸೇರಿ 50 ರನ್ ಜೊತೆಯಾಟ ನೀಡಿದರು.
ಡೇವಿಡ್ ವಾರ್ನರ್ ಏಕಾಂಗಿ ಆಟ: ನಾಲ್ಕನೇ ಪಂದ್ಯದಲ್ಲೂ ಡೇವಿಡ್ ವಾರ್ನರ್ ಏಕಾಂಗಿ ಆಟ ಆಡಿದರು. ಇಂದು ಅವರು ಐಪಿಎಲ್ನ 58ನೇ ಅರ್ಧಶತಕ ಪೂರೈಸಿದರು. 47 ಬಾಲ್ ಎದುರಿಸಿದ ಅವರು 6 ಬೌಂಡರಿ ಸಹಿತ 51 ರನ್ ಗಳಿಸಿದರು. ಅಭಿಷೇಕ್ ಪೊರೆಲ್ (1), ಕುಲದೀಪ್ ಯಾದವ್ (0), ಅನ್ರಿಚ್ ನಾರ್ಟ್ಜೆ (5), ಮುಸ್ತಾಫಿಜುರ್ ರೆಹಮಾನ್ (1*) ಬೇಗ ವಿಕೆಟ್ ಕೊಟ್ಟರು. ಇದರಿಂದ ಡೆಲ್ಲಿ 172 ಕ್ಕೆ ಆಲ್ ಔಟ್ ಆಯಿತು.
ಮುಂಬೈ ಪರ ಜೇಸನ್ ಬೆಹ್ರೆಂಡಾರ್ಫ್ ಮತ್ತು ಪಿಯೂಷ್ ಚಾವ್ಲಾ ತಲಾ 3 ವಿಕೆಟ್, ರಿಲೆ ಮೆರೆಡಿತ್ 2 ಮತ್ತು ಹೃತಿಕ್ ಶೋಕೀನ್ 1 ವಿಕೆಟ್ ಪಡೆದರು.
ತಂಡಗಳು ಇಂತಿವೆ..: ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್ (ನಾಯಕ), ಮನೀಶ್ ಪಾಂಡೆ, ಯಶ್ ಧುಲ್, ರೋವ್‌ಮನ್ ಪೊವೆಲ್, ಲಲಿತ್ ಯಾದವ್, ಅಕ್ಷರ್ ಪಟೇಲ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಮುಸ್ತಾಫಿಜುರ್ ರೆಹಮಾನ್
ಮುಂಬೈ ಇಂಡಿಯನ್ಸ್: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಕ್ಯಾಮರೂನ್ ಗ್ರೀನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಧೇರಾ, ಹೃತಿಕ್ ಶೋಕೀನ್, ಅರ್ಷದ್ ಖಾನ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್, ರಿಲೆ ಮೆರೆಡಿತ್
ಇದನ್ನೂ ಓದಿ: IPL 2023: ಮೊದಲ ಗೆಲುವಿಗಾಗಿ ಡೆಲ್ಲಿ - ಮುಂಬೈ ಫೈಟ್