ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ದೆಹಲಿ ಕ್ಯಾಪಿಟಲ್ಸ್ ತಂಡಕ್ಕೆ ಹೊಸ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಆಯ್ಕೆಯಾಗಿದ್ದು, ಇವರು ಮಾಂತ್ರಿಕ ನಾಯಕರಾಗಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಭುಜದ ಗಾಯಕ್ಕೆ ತುತ್ತಾಗಿದ್ದರು. ನಂತರ ಏಕದಿನ ಸರಣಿಯಿಂದಲೂ ಹೊರಬಿದ್ದಿದ್ದ ಅವರಿಗೆ ಸುಮಾರು 5 ರಿಂದ 6 ತಿಂಗಳ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹಾಗಾಗಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ದೆಹಲಿ ತಂಡದ ಸಾರಥ್ಯ ರಿಷಭ್ ಪಂತ್ ಹೆಗಲೇರಿದೆ.
-
Heartiest congratulations to @RishabhPant17 on being named the captain of @DelhiCapitals for this season. I am sure he will be a talismanic leader and will be donning this new cap with pride.🙌
— Suresh Raina🇮🇳 (@ImRaina) March 30, 2021 " class="align-text-top noRightClick twitterSection" data="
">Heartiest congratulations to @RishabhPant17 on being named the captain of @DelhiCapitals for this season. I am sure he will be a talismanic leader and will be donning this new cap with pride.🙌
— Suresh Raina🇮🇳 (@ImRaina) March 30, 2021Heartiest congratulations to @RishabhPant17 on being named the captain of @DelhiCapitals for this season. I am sure he will be a talismanic leader and will be donning this new cap with pride.🙌
— Suresh Raina🇮🇳 (@ImRaina) March 30, 2021
"ಈ ಋತುವಿನಲ್ಲಿ "ದೆಹಲಿ ಕಾಪಿಟಲ್ಸ್"ನ ನಾಯಕನಾಗಿ ಆಯ್ಕೆಯಾದ @ ರಿಷಭಪಂತ್ 17 ಗೆ ಹೃತ್ಪೂರ್ವಕ ಅಭಿನಂದನೆಗಳು. ಅವರು ಮಾಂತ್ರಿಕ (ತಾಲಿಸ್ಮಾನಿಕ್ ) ನಾಯಕರಾಗುತ್ತಾರೆ ಮತ್ತು ಈ ಹೊಸ ಕ್ಯಾಪ್ ಅನ್ನು ಹೆಮ್ಮೆಯಿಂದ ಧರಿಸುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ರೈನಾ ಟ್ವೀಟ್ ಮಾಡಿದ್ದಾರೆ.
ಓದಿ : ಶ್ರೇಯಸ್ ಅಯ್ಯರ್ ಬಗ್ಗೆ ಭಾವನಾತ್ಮಕ ಟ್ವೀಟ್ ಮಾಡಿದ ದೆಹಲಿ ಕ್ಯಾಪಿಟಲ್ಸ್
ದೆಹಲಿ ಕ್ಯಾಪಿಟಲ್ಸ್ ಮೊದಲ ಪಂದ್ಯವನ್ನ ಸಿಎಸ್ಕೆ ವಿರುದ್ಧ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಏಪ್ರಿಲ್ 10 ರಂದು ನಡೆಯಲಿದೆ.