ETV Bharat / sports

SRH vs PBKS: ಶಿಖರ್​ ಏಕಾಂಗಿ ಹೋರಾಟ ವ್ಯರ್ಥ... ಮಾರ್ಕಂಡೆ, ತ್ರಿಪಾಠಿ ನೆರವಿನಿಂದ ಗೆಲುವಿನ ಖಾತೆ ತೆರೆದ ಹೈದರಾಬಾದ್​ - ETV Bharath Kannada news

ಹೈದರಾಬಾದ್​ನಲ್ಲಿ ಸನ್​ರೈಸರ್ಸ್​ ವಿರುದ್ಧ ಪಂಜಾಬ್​ ನಾಯಕ ಶಿಖರ್ ಧವನ್​ ನಡೆಸಿದ ಏಕಾಂಗಿ ಹೋರಾಟ ವ್ಯರ್ಥವಾಗಿದೆ. ಮಯಾಂಕ್ ಮಾರ್ಕಂಡೆ ಮತ್ತು ರಾಹುಲ್​ ತ್ರಿಪಾಠಿ ನೆರವಿನಿಂದ ಹೈದರಾಬಾದ್​ ತಂಡ ಗೆಲುವಿನ ಖಾತೆ ತೆರೆದಿದೆ.

Sunrisers Hyderabad vs Punjab Kings Match Score update
SRH vs PBKS : ಟಾಸ್​ ಗೆದ್ದು ಬೌಲಿಂಗ್​ ಆಯ್ಕೆ ಮಾಡಿದ ಸನ್​ ರೈಸರ್ಸ್​
author img

By

Published : Apr 9, 2023, 7:24 PM IST

Updated : Apr 9, 2023, 11:57 PM IST

ಹೈದರಾಬಾದ್​ (ತೆಲಂಗಾಣ): ಸತತ ಎರಡು ಸೋಲಿಗಳಿಂದ ಕಂಗೆಟ್ಟಿದ್ದ ಸನ್​ರೈಸರ್ಸ್ ಹೈದರಾಬಾದ್​​ ತಂಡ ಇಂದು ತವರಿನಲ್ಲಿ ನಡೆದ ಪಂಜಾಬ್ ಕಿಂಗ್ಸ್​​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಬಿಗಿ ಬೌಲಿಂಗ್ ಮತ್ತು ಬ್ಯಾಟಿಂಗ್​ ಮೂಲಕ ಹೈದರಾಬಾದ್​ ಎಂಟು ವಿಕೆಟ್​ಗಳಿಂದ ಜಯ ಸಾಧಿಸಿದೆ. ಪಾದಾರ್ಪಣೆ ಪಂದ್ಯದಲ್ಲೇ 4 ವಿಕೆಟ್​ ಉರುಳಿಸಿದ ಮಯಾಂಕ್ ಮಾರ್ಕಂಡೆ ಮತ್ತು ಅಜೇಯ 74 ರನ್​ ಸಿಡಿಸಿದ ರಾಹುಲ್​ ತ್ರಿಪಾಠಿ ತಂಡದ ಗೆಲುವಿನ ರೂವಾರಿಗಳಾದರು.

ಇಲ್ಲಿನ ರಾಜೀವ್​ ಗಾಂಧಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್​ ಮೊದಲ ಬೌಲಿಂಗ್ ಮಾಡಿಕೊಂಡಿತ್ತು. ಇದರಿಂದ ಬ್ಯಾಟಿಂಗ್​ಗೆ ಇಳಿದ ಪಂಜಾಬ್​ ತಂಡವು ನಾಯಕ ಶಿಖರ್​ ಧವನ್ ಅವರ 99 ರನ್​ಗಳ ಅಜೇಯ ಆಟದ ನಡುವೆಯೂ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 143 ರನ್​ಗಳನ್ನು ಕಲೆಹಾಕಿತು. ಈ ಸಾಧಾರಣ ಗುರಿಯನ್ನು ಹೈದರಾಬಾದ್ ಕೇವಲ 2 ವಿಕೆಟ್ ನಷ್ಟಕ್ಕೆ​ 17.1 ಓವರ್​ಗಳಲ್ಲಿ ತಲುಪಿತು. ​

ಸನ್​ರೈಸರ್ಸ್​ ಪರ ಆರಂಭಿಕ ಆಟಗಾರರಾದ ಹ್ಯಾರಿ ಬ್ರೂಕ್ 13 ಮತ್ತು ಮಯಾಂಕ್ ಅಗರ್ವಾಲ್ 21 ರನ್​ ಬಾರಿಸಿ ವಿಕೆಟ್​ ಒಪ್ಪಿಸಿದರು. ನಂತರದಲ್ಲಿ ರಾಹುಲ್ ತ್ರಿಪಾಠಿ ಹಾಗೂ ನಾಯಕ ಏಡೆನ್ ಮಾರ್ಕ್ರಾಮ್ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದರು. ಅದರಲ್ಲೂ ತ್ರಿಪಾಠಿ 48 ಎಸೆತಗಳಲ್ಲಿ 10 ಬೌಂಡರಿ ಮತ್ತು ಮೂರು ಸಿಕ್ಸರ್​ಗಳೊಂದಿಗೆ 74 ರನ್​ ಸಿಡಿಸಿ ಅಜೇಯರಾಗಿ ಉಳಿದರು. ನಾಯಕ ಮಾರ್ಕ್ರಾಮ್​ 21 ಬಾಲ್​​ಗಳಲ್ಲಿ 6 ಬೌಂಡರಿಗಳ ನೆರವಿನೊಂದಿಗೆ ಅಜೇಯ 37 ರನ್​ ಬಾರಿಸಿ ತಂಡದ ಗೆಲುವಿಗೆ ಕಾಣಿಕೆ ನೀಡಿದರು. ಪಂಜಾಬ್​ ಪರ ಆರ್ಷದೀಪ್​ ಸಿಂಗ್​ ಮತ್ತು ರಾಹುಲ್ ಚಹಾರ್​ ತಲಾ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲೇ 4 ವಿಕೆಟ್​ ಉರುಳಿಸಿದ ಮಯಾಂಕ್ ಮಾರ್ಕಂಡೆ ಪಂಜಾಬ್​ ತಂಡವನ್ನು 143 ರನ್​ಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಒಂದೆಡೆ ವಿಕೆಟ್‌ಗಳು ಉರುಳುತ್ತಿದ್ದಂತೆ ಪಂಜಾಬ್​ ನಾಯಕ ಶಿಖರ್​ ಧವನ್​ ಜವಾಬ್ದಾರಿಯುತವಾಗಿ ಕ್ರೀಸ್ ಕಚ್ಚಿ ನಿಂತು ಆಕರ್ಷಕ 99 ರನ್ ಕಲೆ ಹಾಕಿದರು.

ಪಂಜಾಬ್​ ಕಿಂಗ್ಸ್​ಗೆ ಆರಂಭಿಕ ಆಘಾತ ನೀಡಿದ ಭುವನೇಶ್ವರ್​ ಕುಮಾರ್​ ಮೊದಲ ಓವರ್​ನ ಮೊದಲ ಎಸೆತದಲ್ಲಿ ಪ್ರಭ್‌ಸಿಮ್ರಾನ್ ಸಿಂಗ್ ಎಲ್​ಬಿಡಬ್ಲ್ಯೂಗೆ ಬಲಿಯಾದರು. ನಂತರ ಬಂದ ಮ್ಯಾಥ್ಯೂ ಶಾರ್ಟ್ (1) ಮತ್ತು ಜಿತೇಶ್ ಶರ್ಮಾ (4​) ಬೇಗನೇ ಪೆವಿಲಿಯನ್​ಗೆ ಸೇರಿದರು. ಈ ನಡುವೆ ಸ್ಯಾಮ್ ಕರ್ರಾನ್, ನಾಯಕ ಶಿಖರ್​ ಧವನ್​ ಜೊತೆ ಸೇರಿ 40 ರನ್ ಜೊತೆಯಾಟ ನೀಡಿದರು. 15 ಎಸೆತಗಳಲ್ಲಿ 22 ರನ್​ ಗಳಿಸಿ ಆಡುತ್ತಿದ್ದ ಸ್ಯಾಮ್ ಅವರನ್ನು ಮಯಾಂಕ್ ಮಾರ್ಕಂಡೆ ಔಟ್ ಮಾಡಿದರು. ಸತತ ವಿಕೆಟ್​ ಪತನದಿಂದ ಕಂಗೆಟ್ಟ ಪಂಜಾಬ್​ ತಂಡ ಸಿಕಂದರ್​ ರಾಜಾ ಅವರನ್ನು ಪ್ರಭಾವಿ ಆಟಗಾರನಾಗಿ ತಂಡಕ್ಕೆ ಸೇರಿಸಿತು. ಆದರೆ, ಸಿಕಂದರ್​ ಕೇವಲ 5 ರನ್​ಗೆ ವಿಕೆಟ್​ ಒಪ್ಪಿಸಿ ಹೊರ ನಡೆದರು.

ಕೆಳ ಕ್ರಮಾಂಕದ ಶಾರುಖ್ ಖಾನ್ (4), ಹರ್‌ಪ್ರೀತ್ ಬ್ರಾರ್(1), ರಾಹುಲ್ ಚಾಹರ್(0), ನಾಥನ್ ಎಲ್ಲಿಸ್ (0) ಪೆವಿಲಿಯನ್​ ಪರೇಡ್​ ನಡೆಸಿದರು. 14ನೇ ಓವರ್​ಗೆ 9 ವಿಕೆಟ್‌ಗಳನ್ನು ಪಂಜಾಬ್​ ಕಳೆದುಕೊಂಡಿತ್ತು. ಹತ್ತನೇ ವಿಕೆಟ್​ ಆಗಿ ಬಂದ ಮೋಹಿತ್ ರಥಿ (1) ನಾಯಕನ ಜೊತೆ 50 ರನ್​ ಜೊತೆಯಾಟ ಕೊಟ್ಟರು. ಅಂತಿಮವಾಗಿ ಪಂಜಾಬ್​ 9 ವಿಕೆಟ್​ ನಷ್ಟಕ್ಕೆ 143 ರನ್​ ಗಳಿಸಿತ್ತು. ಸನ್​ ರೈಸರ್ಸ್​ ಪರ ಮಯಾಂಕ್ ಮಾರ್ಕಂಡೆ 4, ಉಮ್ರಾನ್ ಮಲಿಕ್ ಮತ್ತು ಮಾರ್ಕೊ ಜಾನ್ಸೆನ್ ತಲಾ 2 ಹಾಗೂ ಭುವನೇಶ್ವರ್ ಕುಮಾರ್ ಒಂದು ವಿಕೆಟ್​ ಕಬಳಿಸಿದರು.

Last Updated : Apr 9, 2023, 11:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.