ETV Bharat / sports

15 ವರ್ಷಗಳ ಹಿಂದೆ ಆಟವಾಡಿದಂತೆ ಈಗ ಧೋನಿಗೆ ಆಡಲು ಸಾಧ್ಯವಿಲ್ಲ: ಸಿಎಸ್‌ಕೆ ಕೋಚ್

author img

By

Published : Apr 1, 2023, 2:36 PM IST

ಮಹೇಂದ್ರ ಸಿಂಗ್​ ಧೋನಿ ಒಬ್ಬ ಶ್ರೇಷ್ಠ ನಾಯಕ. ಆದ್ರೆ ಧೋನಿ 15 ವರ್ಷಗಳ ಹಿಂದೆ ಆಟವಾಡಿದ ರೀತಿ ಈಗ ಆಡಲು ಸಾಧ್ಯವಿಲ್ಲ ಎಂದು ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ಧಾರೆ.

stephen fleming on csk  stephen fleming on csk skipper ms dhoni fitness  Indian Premier League 2023  Gujarat Titans vs Chennai Super Kings  ಈಗ ಧೋನಿಗೆ ಆಡಲು ಸಾಧ್ಯವಿಲ್ಲ  ಸಿಎಸ್‌ಕೆ ಕೋಚ್  ಧೋನಿ ಒಬ್ಬ ಶ್ರೇಷ್ಠ ನಾಯಕ  ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್  ಇಂಡಿಯನ್ ಪ್ರೀಮಿಯರ್ ಲೀಗ್  ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ  ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಧೋನಿ
ಸಿಎಸ್‌ಕೆ ಕೋಚ್

ಅಹ್ಮದಾಬಾದ್​, ಗುಜರಾತ್​: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2023) 16 ನೇ ಸೀಸನ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರು 41 ವರ್ಷ ಮತ್ತು 267 ದಿನಗಳಲ್ಲಿ ನಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹಿಂದೆ ಶೇನ್ ವಾರ್ನ್ 41 ವರ್ಷ 249 ದಿನಗಳಲ್ಲಿ ರಾಜಸ್ಥಾನ ತಂಡದ ನಾಯಕರಾಗಿದ್ದರು. ಅಲ್ಲದೆ, 15 ವರ್ಷಗಳ ಹಿಂದೆ ಮೊದಲ ಐಪಿಎಲ್ ಟೂರ್ನಿಯ ವೇಳೆ ನಡೆದ ಫೋಟೋ ಶೂಟ್‌ನಲ್ಲಿದ್ದ ಧೋನಿ, ಇತ್ತೀಚಿನ 16 ನೇ ಸೀಸನ್‌ನಲ್ಲಿಯೂ ಇದ್ದಾರೆ.

ನಿನ್ನೆ ರಾತ್ರಿ ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ವಿರುದ್ಧ ಧೋನಿ ಏಳು ಎಸೆತಗಳಲ್ಲಿ 14 ರನ್ ಗಳಿಸಿದ್ದು ಗೊತ್ತೇ ಇದೆ. ತಮ್ಮ ಹಳೆಯ ಶೈಲಿಯ ಬ್ಯಾಟಿಂಗ್​ನಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯಲು ಪ್ರಯತ್ನಿಸಿ ಯಶಸ್ವಿಯಾದರು. ಆದರೆ, ಕೀಪಿಂಗ್​ನಲ್ಲಿ ಅವರು ಆಕ್ರಮಣಕಾರಿಯಾಗಿಲ್ಲ ಎಂಬುದು ಅಲ್ಲಗಳೆಯಲಾಗದ ಸತ್ಯ. ಗುಜರಾತ್ ಇನ್ನಿಂಗ್ಸ್‌ನ ದೀಪಕ್ ಚಹಾರ್ ಎಸೆದ 19 ನೇ ಓವರ್‌ನಲ್ಲಿ ತೆವಾಟಿಯಾ ಅವರ ಪ್ಯಾಡ್‌ಗಳಿಗೆ ಬಡಿದ ಚೆಂಡು ಮತ್ತು ಲೆಗ್ ಸೈಡ್‌ಗೆ ಹೋಗುವುದನ್ನು ತಡೆಯಲು ಧೋನಿ ವಿಫಲರಾದರು. ಈ ವೇಳೆ ಅವರು ಸ್ನಾಯು ಸೆಳೆತಕ್ಕೆ ಒಳಗಾದರು. ಇದು ಅಭಿಮಾನಿಗಳಲ್ಲಿ ಕೊಂಚ ಆತಂಕ ಮೂಡಿಸಿತು. ಸ್ವಲ್ಪ ಸಮಯದ ನಂತರ ಧೋನಿ ಮತ್ತೆ ಕೀಪಿಂಗ್ ಜವಾಬ್ದಾರಿಯನ್ನು ಪೂರ್ಣಗೊಳಿಸಿದರು. ಈ ಅನುಕ್ರಮದಲ್ಲಿ ಧೋನಿಗೆ ಹಿಂದಿನ ವೇಗದ ಕೊರತೆಯಿದೆ ಎಂಬ ಕಾಮೆಂಟ್‌ಗಳು ಕೇಳಿಬಂದಿವೆ. ಇದಕ್ಕೆ ಸಿಎಸ್ ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಪ್ರತಿಕ್ರಿಯಿಸಿದ್ದಾರೆ. 15 ವರ್ಷಗಳ ಹಿಂದಿನ ಆಟ ಈಗ ಹೇಗಿರುತ್ತದೆ ಎಂದು ಪ್ರಶ್ನಿಸಿದರು.

ಧೋನಿ ನಿರಂತರವಾಗಿ ಆಡುತ್ತಿದ್ದಾರೆ. ಆದರೆ, ಅವರಿಗೆ ವೇಗದ ಕೊರತೆ ಎಂಬ ಸುದ್ದಿ ಎಲ್ಲಿಂದ ಬರುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ. ಈ ಋತುವಿನ ಆರಂಭಕ್ಕೂ ಮುನ್ನ ಅವರು ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಆದರೆ, ಈ ಪಂದ್ಯದಲ್ಲಿ ಕಾಲಿನ ಸೆಳೆತ ಹೆಚ್ಚಾಯಿತು. ಮೊಣಕಾಲು ನೋವು ಇಲ್ಲ. ಅವರು 15 ವರ್ಷಗಳ ಹಿಂದೆ ಇದ್ದಷ್ಟು ಈಗ ಅಷ್ಟು ವೇಗವಿಲ್ಲ. ಆದರೆ, ಧೋನಿ ಇನ್ನೂ ಶ್ರೇಷ್ಠ ನಾಯಕ. ಬ್ಯಾಟಿಂಗ್‌ನಲ್ಲೂ ತಮ್ಮ ಆಕ್ರಮಣಶೀಲತೆಯನ್ನು ತೋರಿದ್ದಾರೆ. ಆತನಿಗೆ ತನ್ನ ಪರಿಸ್ಥಿತಿಯ ಸಂಪೂರ್ಣ ಅರಿವಿದೆ. ಮೈದಾನದಲ್ಲಿ ಬಹಳ ಪ್ರಮುಖ ಆಟಗಾರ. ಅವರೊಬ್ಬ ಲೆಜೆಂಡರಿ ಕ್ರಿಕೆಟಿಗ ಎಂದು ಫ್ಲೆಮಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಹಂಗರ್ಗೇಕರ್ ಆಟ ಸೂಪರ್: ಯುವ ಬೌಲರ್ ರಾಜವರ್ಥನ್ ಹಂಗರ್ಗೇಕರ್ ಅವರ ಪ್ರದರ್ಶನವನ್ನು ಫ್ಲೆಮಿಂಗ್ ಶ್ಲಾಘಿಸಿದರು. ಐಪಿಎಲ್ ಚೊಚ್ಚಲ ಪಂದ್ಯದಲ್ಲೇ ಅವರ ಅದ್ಭುತ ಪ್ರದರ್ಶನಕ್ಕಾಗಿ ಅವರನ್ನು ಹೊಗಳಿದರು. ಅವರು ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್ ಮತ್ತು ವಿಜಯ್ ಶಂಕರ್ ಅವರ ನಿರ್ಣಾಯಕ ವಿಕೆಟ್ ಪಡೆದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇದೀಗ ಐಪಿಎಲ್‌ನ ಮೊದಲ ಪಂದ್ಯದಲ್ಲೂ ಪರಿಣಿತಿ ಜತೆ ಬೌಲಿಂಗ್ ಮಾಡಿದ್ದಾರೆ. ಹಂಗರ್ಗೇಕರ್​ಗೆ ಕೆಲವು ಕ್ಷೇತ್ರಗಳಲ್ಲಿ ಇನ್ನೂ ಸುಧಾರಣೆಗೆ ಅವಕಾಶವಿದೆ. ಅಭಿಮಾನಿಗಳ ದೊಡ್ಡ ಗುಂಪಿನ ಮುಂದೆ ಮೊದಲ ಪಂದ್ಯವನ್ನು ಆಡುವುದು ಒತ್ತಡಕ್ಕೆ ಕಾರಣವಾಗಬಹುದು. ಆದರೆ, ಹಂಗರ್ಗೇಕರ್ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಓದಿ: ಇನ್ನೊಂದು 20 ರನ್ ಗಳಿಸಿದ್ರೆ ಫಲಿತಾಂಶವೇ ಬೇರೆಯಾಗುತ್ತಿತ್ತು: ಸೋಲಿನ ರಹಸ್ಯ ಬಿಚ್ಚಿಟ್ಟ ಧೋನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.