ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಸಹನೆ ಕಳೆದುಕೊಂಡು ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದರು.
ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅಪರಾಧ 2.2 ಅನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಯ ವಿಚಾರದಲ್ಲಿ ಪಂದ್ಯದ ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿದೆ.
ಬುಧವಾರ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 29 ಎಸೆತಗಳಲ್ಲಿ 33 ರನ್‌ಗಳಿಸಿ ಉತ್ತಮವಾಗಿ ಆಡುತ್ತಿದ್ದಾಗ ಔಟಾದ ನಂತರ ಕೊಹ್ಲಿ ನಂತರ ಅಸಮಾಧಾನಗೊಂಡರು. ಈ ವೇಳೆ ಆರ್‌ಸಿಬಿ ಡಗ್ಔಟ್ನಲ್ಲಿದ್ದ ಕುರ್ಚಿಯನ್ನು ಬ್ಯಾಟ್‌ನಿಂದ ತಳ್ಳಿ ಕೋಪ ಹೊರಹಾಕಿದರು.
-
Think @imVkohli is a bit cross #IPL2021 pic.twitter.com/nzEtxry6ic
— simon hughes (@theanalyst) April 14, 2021 " class="align-text-top noRightClick twitterSection" data="
">Think @imVkohli is a bit cross #IPL2021 pic.twitter.com/nzEtxry6ic
— simon hughes (@theanalyst) April 14, 2021Think @imVkohli is a bit cross #IPL2021 pic.twitter.com/nzEtxry6ic
— simon hughes (@theanalyst) April 14, 2021
ಪಂದ್ಯದಲ್ಲಿ ಅರ್ಧಶತಕ ಪೂರೈಸುವಲ್ಲಿ ಸತತ 2ನೇ ಬಾರಿ ಕೊಹ್ಲಿ ವಿಫಲರಾದರು. ಮುಂಬೈ ಇಂಡಿಯನ್ಸ್ ವಿರುದ್ಧದ ಮ್ಯಾಚ್‌ನಲ್ಲಿ ಅವರು 33 ರನ್ ಗಳಿಸಿದ್ದರು.