ETV Bharat / sports

ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಬೇಕು; ಹೊಸ ಉತ್ಸಾಹದಲ್ಲಿ ದೆಹಲಿ ಕ್ಯಾಪಿಟಲ್ಸ್

author img

By

Published : Apr 9, 2021, 7:24 PM IST

ಇಂದು ವಾಂಖೆಡೆ ಮೈದಾನದಲ್ಲಿ ಮೊದಲ ಅಭ್ಯಾಸ ಪಂದ್ಯವನ್ನು ಪೂರ್ಣಗೊಳಿಸಿದ ದೆಹಲಿ ಕ್ಯಾಪಿಟಲ್ಸ್​ ತಂಡ ಈ ಬಾರಿ ಪ್ರಶಸ್ತಿಯನ್ನು ಗೆಲ್ಲುವ ಎಲ್ಲ ತಯಾರಿಯನ್ನು ಮಾಡಿಕೊಂಡಿದೆ. ಕಳೆದ ಬಾರಿ ರನ್ನರ್​ ಅಪ್​ ಆಗಿದ್ದ ತಂಡ ಈ ಸಾರಿ ಒಂದು ಹೆಜ್ಜೆ ಮುಂದೆ ಸಾಗಲಿದೆ ಎಂದು ತರಬೇತುದಾರ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Smith, Stoinis join DC training camp
ದೆಹಲಿ ಕ್ಯಾಪಿಟಲ್ಸ್

ಮುಂಬೈ: ಕೊರೊನಾ ನಡುವೆಯೂ 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್ ಲೀಗ್ ಆರಂಭಗೊಳ್ಳುತ್ತಿದ್ದು, ತಮ್ಮ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಮತ್ತು ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಶುಕ್ರವಾರ ತಮ್ಮ ಮೊದಲ ಅಭ್ಯಾಸ ಪಂದ್ಯದಲ್ಲಿ ಕಾಣಿಸಿಕೊಂಡರು.

ದೆಹಲಿ ಕ್ಯಾಪಿಟಲ್ಸ್​ಗೆ ಬಿಡ್​ ಆಗಿರುವ ಸ್ಮಿತ್ ಮತ್ತು ಮಾರ್ಕಸ್ ಕಡ್ಡಾಯ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮೈದಾನದಲ್ಲಿಂದು ಬೆವರು ಹರಿಸಿದರು. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ರನ್ನರ್​​ ಅಪ್ ಸ್ಥಾನ ಪಡೆದ ಈ ಜೋಡಿ ಈ ಸಾರಿಯೂ ಹೊಸ ಉತ್ಸಾಹದಲ್ಲೇ ಕಣಕ್ಕಿಳಿಯಲಿದೆ.

ಇಂದು (ಏಪ್ರಿಲ್ 9) ವಾಂಖೆಡೆ ಮೈದಾನದಲ್ಲಿ ಮೊದಲ ಅಭ್ಯಾಸ ಪಂದ್ಯವನ್ನು ಪೂರ್ಣಗೊಳಿಸಿದ ದೆಹಲಿ ಕ್ಯಾಪಿಟಲ್ಸ್​ ತಂಡ, ಈ ಸಾರಿ ಪ್ರಶಸ್ತಿಯನ್ನು ಗೆಲ್ಲಲೇಬೇಕು ಎಂಬ ಅತ್ಯುತ್ಸಾಹದಲ್ಲಿದೆ ಎಂದು ಮುಖ್ಯ ತರಬೇತುದಾರ ರಿಕಿ ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಚತುರ ಆಟಗಾರ, ವಿಕೆಟ್ ಕೀಪರ್ ಕಂ ಬ್ಯಾಟ್ಸ್‌ಮನ್ ರಿಷಭ್ ಪಂತ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಆಟಗಾರರೆಲ್ಲರೂ ಫಿಟ್​ ಆಗಿದ್ದಾರೆ. ಎಲ್ಲ ರೀತಿಯ ತಯಾರಿ ಮಾಡಿಕೊಂಡಿದೆ. ಈ ಹಿಂದೆ ರನ್ನರ್​​ ಅಪ್ ಸ್ಥಾನ ಪಡೆದ ದೆಹಲಿ ಕ್ಯಾಪಿಟಲ್ಸ್ ತಂಡ ಈ ಸಾರಿ ಗೆಲ್ಲುವ ನಿರೀಕ್ಷೆಯಿದೆ ಎಂದು ಹೇಳಿದರು.

ಇಲ್ಲಿಯ ಆಟಗಾರರನ್ನು ನೋಡಿ ನಾನು ಚಕಿತನಾಗಿದ್ದೇನೆ. ದಾಖಲೆ ಮೇಲೆ ದಾಖಲೆ ಬರೆಯುವ ಆಟಗಾರರು ತಂಡಲ್ಲಿದ್ದಾರೆ. ಈ ಸೊಬಗನ್ನು ನಾನು ಕಣ್ತುಂಬಿಕೊಳ್ಳಬೇಕು. ಹಾಗಾಗಿಯೇ ನಾನು ನನ್ನ ಆಟಗಾರರೊಂದಿಗೆ ಆಗಮಿಸಿದ್ದೇನೆ. ಕಳೆದ ವರ್ಷಕ್ಕಿಂತ ಈ ವರ್ಷ ಒಂದು ಹೆಜ್ಜೆ ಮುಂದೆ ಹೋಗಬೇಕು. ಅದಕ್ಕಾಗಿ ಒಂದು ಚಾಟ್​ ಮಾಡಿಕೊಂಡಿದ್ದೇವೆ. ಈ ಸಾರಿ ಹೊಸ ಹುಡುಗರ ಪ್ರವೇಶವಾಗಿದೆ. ಇದು ತಂಡಕ್ಕೆ ಮತ್ತಷ್ಟು ಬಲ ತಂದಿದೆ. ನಮಗೆ ಇದೊಂದು ಪ್ಲಸ್​ ಆಗಬಹುದೇನೋ. ಹಾಗಾಗಿಯೇ ಗೆಲುವಿನ ಉತ್ಸಾಹ ಹೆಚ್ಚಾಗಿದೆ. ಆ ದಿನಕ್ಕಾಗಿ ನಾವು ಕಾತುರರಾಗಿದ್ದೇವೆ ಎಂದು ತಂಡ ಆಟಗಾರರ ಬಗ್ಗೆ ಹೊಗಳಿಕೆ ಮಾತುಗಳನ್ನಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.