ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯ 18 ಪಂದ್ಯಗಳು ಈವರೆಗೆ ನಡೆದಿದ್ದು ಮೂವರು ನಾಯಕರಿಗೆ ಪಂದ್ಯ ತಡವಾಗಿದ್ದಕ್ಕೆ ದಂಡ ವಿಧಿಸಲಾಗಿದೆ. ನಿನ್ನೆ ಪಂಜಾಬ್ ಕಿಂಗ್ಸ್ ವಿರುದ್ಧ ನಿಧಾನಗತಿ ಬೌಲಿಂಗ್‌ಗಾಗಿ ಹಾರ್ದಿಕ್ ಪಾಂಡ್ಯಗೆ ದಂಡ ಹಾಕಲಾಗಿದೆ ಎಂದು ಬಿಸಿಸಿಐ ಹೇಳಿಕೆ ತಿಳಿಸಿದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ಗೆ ದಂಡ ವಿಧಿಸಲಾಗಿತ್ತು.
2023 ರ ಏಪ್ರಿಲ್ 13 ರಂದು ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್ ಐಎಸ್ ಬಿಂದ್ರಾ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಗುಜರಾತ್‌ನ ಹಾರ್ದಿಕ್ ಪಾಂಡ್ಯ ಅವರಿಗೆ ದಂಡ ಹಾಕಲಾಗಿದೆ ಎಂದು ಪ್ರಕಟಣೆಯಲ್ಲಿ ಬಿಸಿಸಿಐ ತಿಳಿಸಿದೆ. ಗುರುವಾರ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ನಿಧಾನಗತಿಯಲ್ಲಿ ಮೊದಲ ಇನ್ನಿಂಗ್ಸ್ ಮುಗಿಸಲಾಗಿತ್ತು.
ಇದೇ ಮೊದಲ ಬಾರಿಗೆ ಸಮಯ ಮೀರಿದ್ದಕ್ಕಾಗಿ 12 ಲಕ್ಷ ರೂ ದಂಡದ ಬರೆ ಬಿದ್ದಿದೆ. ಎರಡನೇ ಬಾರಿಗೆ ಮತ್ತೆ ನಿಯಮ ಮೀರಿದಲ್ಲಿ 24 ಲಕ್ಷ ರೂ ವಿಧಿಸಲಾಗುತ್ತದೆ. ಅದರ ಜೊತೆಗೆ 10 ಆಟಗಾರರ ಆರು ಲಕ್ಷ ಅಥವಾ ಪಂದ್ಯ ಶುಲ್ಕದ 25 ರಷ್ಟನ್ನು ದಂಡವಾಗಿ ಕಟ್ಟಬೇಕಾಗುತ್ತದೆ. ಐಪಿಎಲ್ ಪಂದ್ಯವನ್ನು ಮುಕ್ತಾಯಗೊಳಿಸಲು ನಿಗದಿತ ಸಮಯವು 3 ಗಂಟೆ 20 ನಿಮಿಷಗಳು. ಈ ಋತುವಿನ ಹಲವಾರು ಪಂದ್ಯಗಳು 4 ಗಂಟೆಗಳ ಗಡಿ ಮೀರಿವೆ. ಲಕ್ನೋ ವಿರುದ್ಧ ಆರ್ಸಿಬಿ ಸಮಯ ಮೀರಿತ್ತು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಿಧಾನಗತಿ ಬೌಲಿಂಗ್‌ಗಾಗಿ ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್ಗೆ ದಂಡ ಹಾಕಲಾಗಿತ್ತು.
ಅಶ್ವಿನ್ಗೆ ಪಂದ್ಯ ಶುಲ್ಕದ ಶೇ25 ರಷ್ಟು ದಂಡ: ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆರ್. ಅಶ್ವಿನ್ ಅಂಪೈರ್ ನಿರ್ಧಾರ ವಿರುದ್ಧ ಮಾತನಾಡಿದ್ದಕ್ಕೆ ದಂಡ ವಿಧಿಸಲಾಗಿದೆ. ಇದಕ್ಕಾಗಿ ಪಂದ್ಯದ ಸಂಭಾವನೆಯ ಶೇ 25ರಷ್ಟನ್ನು ದಂಡದ ಬರೆ ಹಾಕಲಾಗಿದೆ. ಸಿಎಸ್ಕೆ ವಿರುದ್ಧ ಬುಧವಾರ ನಡೆದ ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಅಂಪೈರ್ ನಿರ್ಧಾರದ ವಿರುದ್ಧ ಮಾತನಾಡಿದ್ದರು. ಇನ್ನಿಂಗ್ಸ್ ನಡುವೆ ಇಬ್ಬನಿಯಿಂದಾಗಿ ಒದ್ದೆಯಾಗಿದ್ದ ಚೆಂಡನ್ನು ಅಂಪೈರ್ಗಳು ಬದಲಿಸಿದ್ದರು. ಈ ನಿರ್ಧಾರಕ್ಕೆ ಅಶ್ವಿನ್ ಆಕ್ರೋಶ ಹೊರಹಾಕಿದ್ದರು.
ಮಾಧ್ಯಮಗಳ ಮುಂದೆ, ನಾವು ಬಾಲ್ ಬದಲಾಯಿಸುವಂತೆ ಅಂಪೈರ್ ಅವರಲ್ಲಿ ಮನವಿ ಮಾಡಿರಲಿಲ್ಲ. ಆದರೂ ಅವರೇ ನಿರ್ಧಾರ ಮಾಡಿ ಬದಲಾಯಿಸಿದ್ದರು. ಕೇಳಿದ್ದಕ್ಕೆ ನಾವು ಬದಲಾಯಿಸಬಹುದು ಎಂದರು. ಈ ಸೀಸನ್ನ ಅಂಪೈರ್ಗಳ ಕೆಲ ನಿರ್ಣಯಗಳು ನನಗೆ ಅಚ್ಚರಿ ತಂದಿವೆ ಎಂದಿದ್ದರು.
ಆವೇಶ್ ಖಾನ್‌ಗೆ ವಾರ್ನಿಂಗ್: ಆರ್ಸಿಬಿ ವಿರುದ್ಧ ಗುಜರಾತ್ ಟೈಟಾನ್ಸ್ ಒಂದು ವಿಕೆಟ್ನ ರೋಚಕ ಜಯ ಸಾಧಿಸಿತ್ತು. ಈ ವೇಳೆ ಆವೇಶ್ ಖಾನ್ ಸಂಭ್ರಮಿಸುವ ಭರದಲ್ಲಿ ತಮ್ಮ ಹೆಲ್ಮೆಟ್ ಅನ್ನು ರಭಸವಾಗಿ ನೆಲಕ್ಕೆ ಎಸೆದಿದ್ದರು. ಈ ರೀತಿ ಮಾಡಿದ್ದಕ್ಕೆ ಮ್ಯಾಚ್ ರೆಫ್ರಿ ನಿಯಮ ಉಲ್ಲಂಘನೆ ಆಗಿದೆ ಎಂದು ವಾಗ್ದಂಡನೆ ಹಾಕಿದ್ದರು.
ಇದನ್ನೂ ಓದಿ: ಆರ್ಸಿಬಿ ಹಸಿರು ಅಭಿಯಾನ: ರಾಜಸ್ಥಾನ್ ರಾಯಲ್ಸ್ ವಿರುದ್ಧ ಗ್ರೀನ್ ಜರ್ಸಿ ಮ್ಯಾಚ್