ETV Bharat / sports

ಆರ್​ಸಿಬಿಗೆ ಆಘಾತ.. ಐಪಿಎಲ್ ಪುನಾರಂಭಕ್ಕೂ ಮುನ್ನ ಮುಖ್ಯ ಕೋಚ್​ ಸ್ಥಾನ ತ್ಯಜಿಸಿದ ಕ್ಯಾಟಿಚ್.. - ಐಪಿಎಲ್ 2021

ಆಸ್ಟ್ರೇಲಿಯಾದ ಆ್ಯಡಂ ಜಂಪಾ ಬದಲಿಗೆ ಶ್ರೀಲಂಕಾದ ಸ್ಪಿನ್ ಆಲ್​ರೌಂಡರ್​ ವನಿಂದು ಹಸರಂಗ, ಆರಂಭಿಕ ಬ್ಯಾಟ್ಸ್​ಮನ್ ಆಗಿರುವ ಕಿವೀಸ್​ನ ಫಿನ್ ಅಲೆನ್​ ಬದಲಿಗೆ ಸಿಂಗಾಪುರ್ ತಂಡದ ಟಿಮ್ ಡೇವಿಡ್​ ಮತ್ತು ಆಲ್​ರೌಂಡರ್​ ಡೇನಿಯಲ್ ಸ್ಯಾಮ್ಸ್​ ಬದಲಿಗೆ ಶ್ರೀಲಂಕಾದ ದುಷ್ಮಂತ ಚಮೀರರನ್ನು ಆರ್​ಸಿಬಿ ಬದಲಿ ಆಟಗಾರರನ್ನಾಗಿ ನೇಮಿಸಿಕೊಂಡಿದೆ..

Simon Katich steps down as RCB coach
ಸೈಮನ್ ಕ್ಯಾಟಿಚ್​ ರಾಜೀನಾಮೆ
author img

By

Published : Aug 21, 2021, 6:03 PM IST

ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಖ್ಯ ಕೋಚ್​ ಆಗಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸೈಮನ್ ಕ್ಯಾಟಿಚ್​ ಐಪಿಎಲ್​ ಪುನಾರಂಭಕ್ಕೆ ಕೆಲವೇ ದಿನಗಳಿರುವಾಗ ತಮ್ಮ ಮುಖ್ಯ ಕೋಚ್​ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರ ಬದಲಿಗೆ ಕ್ರಿಕೆಟ್​ ಕಾರ್ಯಾಚಾರಣೆಗಳ ನಿರ್ದೇಶಕರಾಗಿದ್ದ ಮೈಕ್​ ಹೆಸನ್​ರನ್ನೇ ತಂಡದ ಮುಖ್ಯ ಕೋಚ್​ ಆಗಿ ಆರ್​ಸಿಬಿ ಘೋಷಿಸಿದೆ.

ಸೆಪ್ಟೆಂಬರ್​ 19ರಿಂದ ಐಪಿಎಲ್ ದ್ವಿತೀಯಾರ್ಧ ಆರಂಭಗೊಳ್ಳಲಿದೆ. ಆದರೆ, ವೈಯಕ್ತಿಕ ಕಾರಣ ನೀಡಿ ಸೈಮನ್ ಕ್ಯಾಟಿಚ್​ ಆರ್​ಸಿಬಿ ಹೆಡ್​ ಕೋಚ್​ ಸ್ಥಾನ ತೊರೆದಿದ್ದಾರೆ. ಹಾಗಾಗಿ, ಮೈಕ್​ ಹೆಸನ್​ 2021ರ ಐಪಿಎಲ್​ನಲ್ಲಿ ಆರ್​ಸಿಬಿ ನಿರ್ದೇಶಕನ ಜವಾಬ್ದಾರಿ ಜೊತೆಗೆ ಮುಖ್ಯ ಕೋಚ್​ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಆರ್​ಸಿಬಿ ಹೇಳಿಕೆ ಬಿಡುಗಡೆ ಮಾಡಿದೆ.

  • Bold Diaries: Player Replacements & Travel plans

    While Mike Hesson takes up a dual role as Head Coach & Director of Cricket Operations, RCB have made some key signings ahead of #IPL2021 in UAE.

    Mike Hesson & Rajesh Menon, VP & Head of RCB, announce the team’s plans.#PlayBold pic.twitter.com/FMz2AwFGWZ

    — Royal Challengers Bangalore (@RCBTweets) August 21, 2021 " class="align-text-top noRightClick twitterSection" data=" ">

ಕಳೆದ ಐಪಿಎಲ್​ನಲ್ಲಿ ಕ್ಯಾಟಿಚ್​ ಐಪಿಎಲ್​ ಫ್ರಾಂಚೈಸಿಯ ಕೋಚ್​ ಸ್ಥಾನಕ್ಕೇರಿದ್ದರು. ತಮ್ಮ ಮೊದಲನೇ ಆವೃತ್ತಿಯಲ್ಲೇ ಆರ್​ಸಿಬಿ ಪ್ಲೇ ಆಫ್​ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. 2016ರಲ್ಲಿ ಕೊನೆಯ ಬಾರಿ ಪ್ಲೇ ಆಫ್​ ತಲುಪಿತ್ತು.

ಪ್ರಸ್ತುತ ಲೀಗ್​ನಲ್ಲಿ ಆರ್​ಸಿಬಿ 7 ಪಂದ್ಯಗಳನ್ನಾಡಿದ್ದು, 5 ಗೆಲುವು ಮತ್ತು 2 ಸೋಲಿನೊಂದಿಗೆ 10 ಅಂಕ ಪಡೆದು 3ನೇ ಸ್ಥಾನದಲ್ಲಿದೆ. ಕೋಚ್​ ಬದಲಾವಣೆಯಲ್ಲದೆ, ತಂಡದಲ್ಲಿಯೂ ಕೂಡ ಮೂರು ಬದಲಾವಣೆ ಮಾಡಿಕೊಂಡಿದೆ.

ಆಸ್ಟ್ರೇಲಿಯಾದ ಆ್ಯಡಂ ಜಂಪಾ ಬದಲಿಗೆ ಶ್ರೀಲಂಕಾದ ಸ್ಪಿನ್ ಆಲ್​ರೌಂಡರ್​ ವನಿಂದು ಹಸರಂಗ, ಆರಂಭಿಕ ಬ್ಯಾಟ್ಸ್​ಮನ್ ಆಗಿರುವ ಕಿವೀಸ್​ನ ಫಿನ್ ಅಲೆನ್​ ಬದಲಿಗೆ ಸಿಂಗಾಪುರ್ ತಂಡದ ಟಿಮ್ ಡೇವಿಡ್​ ಮತ್ತು ಆಲ್​ರೌಂಡರ್​ ಡೇನಿಯಲ್ ಸ್ಯಾಮ್ಸ್​ ಬದಲಿಗೆ ಶ್ರೀಲಂಕಾದ ದುಷ್ಮಂತ ಚಮೀರರನ್ನು ಆರ್​ಸಿಬಿ ಬದಲಿ ಆಟಗಾರರನ್ನಾಗಿ ನೇಮಿಸಿಕೊಂಡಿದೆ.

ಇದನ್ನು ಓದಿ:ಆರ್​ಸಿಬಿಗೆ ಆನೆಬಲ.. ಹಸರಂಗ ಸೇರಿದಂತೆ ಬೆಂಗಳೂರು ತಂಡಕ್ಕೆ ಮೂವರ ಸೇರ್ಪಡೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.