ಅಹಮದಾಬಾದ್ (ಗುಜರಾತ್): ಅದ್ಭುತ್ ಫಾರ್ಮ್ನಲ್ಲಿರುವ ಭಾರತದ ಯುವ ಬ್ಯಾಟರ್ ಶುಭಮನ್ ಗಿಲ್ ತಮ್ಮ ಐಪಿಎಲ್ ವೃತ್ತಿ ಜೀವನದ 2000 ರನ್ ಗಡಿ ದಾಟಿದ್ದಾರೆ. ಅತಿ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಆಟಗಾರ ಎಂಬ ಖ್ಯಾತಿಗೂ ಅವರು ಪಾತ್ರರಾದರು. ಇಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಗಿಲ್ ವಿಶೇಷ ದಾಖಲೆ ಬರೆದಿದ್ದಾರೆ.
23ನೇ ವಯಸ್ಸಿಗೇ ಗಿಲ್ ಐಪಿಎಲ್ನಲ್ಲಿ 2000 ರನ್ ಗಡಿ ತಲುಪಿದ್ದಾರೆ. ಇದರೊಂದಿಗೆ ಐಪಿಎಲ್ನ ಅತ್ಯಂತ ಯಶಸ್ವಿ ಯುವ ಬ್ಯಾಟರ್ ಆಗಿ ಹೊರಹೊಮ್ಮಿದರು. ಪಾಕಿಸ್ತಾನ ಮಾಜಿ ಆಟಗಾರ ರಮೀಜ್ ರಾಜಾ ಅಂತಾರಾಷ್ಟ್ರಿಯ ಕ್ರಿಕೆಟ್ನಲ್ಲಿ ಗಿಲ್ ಅವರ ಆಟದ ಸೊಬಗು ಕಂಡು "ಜೂನಿಯರ್ ರೋಹಿತ್ ಶರ್ಮಾ" ಎಂದು ಮೆಚ್ಚಿಕೊಂಡಿದ್ದರು. ಇಂದಿನ ಪಂದ್ಯದಲ್ಲಿ 23 ರನ್ ಗಳಿಸುತ್ತಿದ್ದಂತೆ ಗಿಲ್ ಈ ದಾಖಲೆ ಮಾಡಿದ್ದಾರೆ. ಜಿಟಿ(GT) ಪರವಾಗಿ ಆರಂಭಿಕರಾಗಿ ಕಣಕ್ಕಿಳಿದ ಇವರು 39 ರನ್ ಕಲೆ ಹಾಕಿ ಆಡುತ್ತಿದ್ದಾಗ ಕೆಕೆಆರ್ ವಿರುದ್ಧ ವಿಕೆಟ್ ಒಪ್ಪಿಸಿದರು.
-
𝐌𝐢𝐥𝐞𝐬𝐭𝐨𝐧𝐞 𝐀𝐥𝐞𝐫𝐭! @ShubmanGill completes 2,000 #TATAIPL runs! 💪
— Gujarat Titans (@gujarat_titans) April 9, 2023 " class="align-text-top noRightClick twitterSection" data="
𝙎𝙤 𝙛𝙖𝙧, 𝙎𝙤 𝙎𝙝𝙪𝙗! 💙 #GT - 62/1 (7 overs)#AavaDe | #TATAIPL 2023 | #GTvKKR pic.twitter.com/ldIawVTKRv
">𝐌𝐢𝐥𝐞𝐬𝐭𝐨𝐧𝐞 𝐀𝐥𝐞𝐫𝐭! @ShubmanGill completes 2,000 #TATAIPL runs! 💪
— Gujarat Titans (@gujarat_titans) April 9, 2023
𝙎𝙤 𝙛𝙖𝙧, 𝙎𝙤 𝙎𝙝𝙪𝙗! 💙 #GT - 62/1 (7 overs)#AavaDe | #TATAIPL 2023 | #GTvKKR pic.twitter.com/ldIawVTKRv𝐌𝐢𝐥𝐞𝐬𝐭𝐨𝐧𝐞 𝐀𝐥𝐞𝐫𝐭! @ShubmanGill completes 2,000 #TATAIPL runs! 💪
— Gujarat Titans (@gujarat_titans) April 9, 2023
𝙎𝙤 𝙛𝙖𝙧, 𝙎𝙤 𝙎𝙝𝙪𝙗! 💙 #GT - 62/1 (7 overs)#AavaDe | #TATAIPL 2023 | #GTvKKR pic.twitter.com/ldIawVTKRv
2,000 ರನ್ ತಲುಪಿದ 2ನೇ ಕಿರಿಯ ಕ್ರಿಕೆಟಿಗ: ದ್ವಿ ಸಹಸ್ರ ರನ್ ಮೊತ್ತವನ್ನು ಐಪಿಎಲ್ನಲ್ಲಿ ಗಿಲ್ ಅವರಿಗಿಂತ ಕಡಿಮೆ ವಯಸ್ಸಿನಲ್ಲಿ ರಿಷಭ್ ಪಂತ್ ಸಾಧಿಸಿದ್ದರು. ಪಂತ್ ತಮ್ಮ 23 ವರ್ಷ 27 ದಿನಗಳಲ್ಲಿ ಈ ಸಾಧನೆ ಮಾಡಿದರೆ, ಗಿಲ್ 23 ವರ್ಷ 214 ದಿನದಲ್ಲಿ ಎರಡು ಸಾವಿರ ರನ್ ಪೂರೈಸಿದರು. ರಿಷಭ್ ಪಂತ್ 187 ದಿನ ಮೊದಲು ದಾಖಲೆ ಮಾಡಿದ್ದು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಮೂರನೇ ಸ್ಥಾನದಲ್ಲಿ (24 ವರ್ಷ 140 ದಿನದಲ್ಲಿ) ಸಂಜು ಸ್ಯಾಮ್ಸನ್ ಇದ್ದರೆ, 24 ವರ್ಷ 175 ದಿನದಲ್ಲಿ ವಿರಾಟ್ ಕೊಹ್ಲಿ ಹಾಗೂ 25 ವರ್ಷ 155 ದಿನದಲ್ಲಿ ಸುರೇಶ್ ರೈನಾ ಐಪಿಎಲ್ನಲ್ಲಿ 2000 ರನ್ ಗಳಿಸಿದ್ದರು. ಇವರು ಪಟ್ಟಿಯಲ್ಲಿ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
ಐಪಿಎಲ್ನಲ್ಲಿ ಗಿಲ್ ಪಯಣ: 2018ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಐಪಿಎಲ್ಗೆ ಶುಭಮನ್ ಗಿಲ್ ಪಾದಾರ್ಪಣೆ ಮಾಡಿದರು. ಈವರೆಗೆ 77 ಪಂದ್ಯಗಳಲ್ಲಿ 74 ಇನ್ನಿಂಗ್ಸ್ ಆಡಿರುವ ಇವರು 126.24ರ ಸ್ಟ್ರೈಕ್ ರೇಟ್ನಲ್ಲಿ 32.5 ರ ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದು 2,016 ರನ್ ಸಂಪಾದಿಸಿದ್ದಾರೆ. ಇಲ್ಲಿಯವರೆಗೆ ಐಪಿಎಲ್ನಲ್ಲಿ 15 ಅರ್ಧಶತಕ ಗಳಿಸಿದ್ದು 202 ಬೌಂಡರಿ ಹಾಗೂ 50 ಸಿಕ್ಸರ್ಗಳನ್ನು ಹೊಡೆದಿದ್ದಾರೆ. ಉತ್ತಮ ರನ್ 96 ಆಗಿದೆ.
ರಾಷ್ಟ್ರೀಯ ತಂಡದಲ್ಲೂ ಉತ್ತಮ ಪ್ರದರ್ಶನ: ಪ್ರಸಕ್ತ ವರ್ಷ ಅಂತಾರಾಷ್ಟ್ರೀಯ ಟಿ20 ತಂಡಕ್ಕೆ ಗಿಲ್ ಸೇರಿಕೊಂಡರು. 2020 ರಲ್ಲಿ ಭಾರತದ ಆಸ್ಟ್ರೇಲಿಯಾ ಪ್ರವಾಸದ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದರು. 2019ರಲ್ಲಿ ನ್ಯೂಜಿಲೆಂಡ್ನಲ್ಲಿ ಏಕದಿನ ಕ್ರಿಕೆಟ್ಗೆ ಗಿಲ್ ಪಾದಾರ್ಪಣೆ ಮಾಡಿದ್ದಾರೆ.
ಇದನ್ನೂ ಓದಿ: GT vs KKR: ಕೋಲ್ಕತ್ತಾ ಎದುರು ಗುಜರಾತ್ ಬ್ಯಾಟಿಂಗ್; ಹಾರ್ದಿಕ್ ಅಸ್ವಸ್ಥ, ರಶೀದ್‌ಗೆ ನಾಯಕತ್ವ