ETV Bharat / sports

IPL ಮುಗಿಸಿ ಮನೆಗೆ ತೆರಳಿದ ಕ್ರಿಕೆಟರ್ ಶಿಖರ್ ಧವನ್​ಗೆ ತಂದೆಯಿಂದ ಹಿಗ್ಗಾಮುಗ್ಗಾ ಥಳಿತ.. ಇದು ನಿಜಾ ಏನ್ರೀ..

author img

By

Published : May 27, 2022, 5:19 PM IST

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಪಂಜಾಬ್​ ಕಿಂಗ್ಸ್ ಪ್ಲೇ-ಪ್ರವೇಶ ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಇದರ ಬೆನ್ನಲ್ಲೇ ಮನೆಗೆ ಹೋಗಿರುವ ಎಡಗೈ ಬ್ಯಾಟರ್ ಶಿಖರ್ ಧವನ್ ಮೇಲೆ ತಂದೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೋ ಖುದ್ದಾಗಿ ಗಬ್ಬರ್ ಸಿಂಗ್ ಟ್ವೀಟ್ ಮಾಡಿದ್ದಾರೆ..

Shikhar Dhawan kicked
Shikhar Dhawan kicked

ಮುಂಬೈ : ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಪಂಜಾಬ್ ಕಿಂಗ್ಸ್​​ ಪ್ಲೇ-ಆಫ್​ ರೇಸ್​ನಿಂದ ಹೊರಬಿದ್ದ ಕಾರಣ ಎಲ್ಲ ಪ್ಲೇಯರ್ಸ್ ಈಗಾಗಲೇ ಮನೆ ತಲುಪಿದ್ದಾರೆ. ತಂಡದ ಆರಂಭಿಕ ಎಡಗೈ ಬ್ಯಾಟರ್ ಶಿಖರ್ ಧವನ್​ ಕೂಡ ತಮ್ಮ ನಿವಾಸಕ್ಕೆ ತೆರಳಿದ್ದು, ಈ ವೇಳೆ ತಂದೆಯಿಂದ ಹಿಗ್ಗಾಮುಗ್ಗಾ ಒದೆ ತಿಂದಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಮನೆಗೆ ತೆರಳಿರುವ ಶಿಖರ್ ಧವನ್​ಗೆ ಕಪಾಳಮೋಕ್ಷ ಮಾಡಿರುವ ತಂದೆ, ತದನಂತರ ನೆಲದ ಮೇಲೆ ಕೆಡವಿ ಕಾಲಿನಿಂದ ಒದ್ದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನ ಖುದ್ದಾಗಿ ಶಿಖರ್ ಧವನ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ. ಶಿಖರ್ ಧವನ್ ಮೇಲೆ ಅವರ ತಂದೆ ಹಲ್ಲೆ ಮಾಡುತ್ತಿರುವ ಸಂದರ್ಭದಲ್ಲಿ ಓರ್ವ ಪೊಲೀಸ್​ ಸೇರಿದಂತೆ ಅನೇಕರು ಉಪಸ್ಥಿತರಿದ್ದು, ಅವರನ್ನ ತಡೆಯುವ ಪ್ರಯತ್ನ ಮಾಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಎಲ್ಲವೂ ತಮಾಷೆಗಾಗಿ : ಇದೆಲ್ಲವೂ ನಡೆದಿರುವುದು ನಿಜವಾಗಿಲ್ಲ ಅಲ್ಲ. ಶಿಖರ್ ಧವನ್ ತಂದೆ ಇನ್​​ಸ್ಟಾ ರೀಲ್​ ವಿಡಿಯೋ ಮಾಡುವ ಸಲುವಾಗಿ ಈ ರೀತಿಯಾಗಿ ನಡೆದುಕೊಂಡಿದ್ದಾರೆ. ಇದರ ವಿಡಿಯೋ ಹಂಚಿಕೊಂಡಿರುವ ಶಿಖರ್ ಧವನ್​, ಐಪಿಎಲ್​ನಲ್ಲಿ ನಾಕೌಟ್​ ಹಂತಕ್ಕೆ ಅರ್ಹತೆ ಪಡೆದುಕೊಳ್ಳದ ಕಾರಣ ತಂದೆ ನನ್ನನ್ನ ಥಳಿಸಿದ್ದಾರೆಂದು ಗಬ್ಬರ್ ಸಿಂಗ್ ಹೇಳಿಕೊಂಡಿದ್ದಾರೆ.

ಇದಕ್ಕೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಮಾಜಿ ಕ್ರಿಕೆಟರ್ಸ್​​​ ಕಾಮೆಂಟ್ ಮಾಡಿದ್ದಾರೆ. ಪ್ರಮುಖವಾಗಿ ಮಾಜಿ ಕ್ರಿಕೆಟಿಗರಾದ ಹರ್ಭಜನ್‌ ಸಿಂಗ್‌, ಇರ್ಫಾನ್‌ ಪಠಾಣ್ ಮತ್ತು ಪಂಜಾಬ್‌ ಕಿಂಗ್ಸ್‌ ಆಲ್‌ರೌಂಡರ್‌ ಹರಪ್ರೀತ್‌ ಬ್ರಾರ್‌ ಕಾಮೆಂಟ್‌ ಮಾಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ವರದಿಯಾಗಿರುವ ಮಾಹಿತಿವೊಂದರ ಪ್ರಕಾರ ಶಿಖರ್ ಧವನ್​, ಬಾಲಿವುಡ್ ಚಿತ್ರವೊಂದರಲ್ಲಿ ನಟನೆ ಮಾಡುತ್ತಿದ್ದು, ಅದಕ್ಕಾಗಿ ಎಲ್ಲ ರೀತಿಯ ತಯಾರಿ ಸಿದ್ಧಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಆರ್​ಸಿಬಿ ಚೊಚ್ಚಲ ಪ್ರಶಸ್ತಿಗೆ ಇನ್ನೆರಡು ಹೆಜ್ಜೆ.. ಬೆಂಗಳೂರು ತಂಡಕ್ಕೆ ರಾಜಸ್ಥಾನ ಚಾಲೆಂಜ್​!

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಮಯಾಂಕ್ ಅಗರವಾಲ್​ ನೇತೃತ್ವದ ಪಂಜಾಬ್ ಕಿಂಗ್ಸ್ ಬಲಿಷ್ಠವಾಗಿದ್ದರೂ, ಅಸ್ಥಿರ ಪ್ರದರ್ಶನ ನೀಡಿದ್ದರಿಂದ 14 ಪಂದ್ಯಗಳ ಪೈಕಿ 7ರಲ್ಲಿ ಮಾತ್ರ ಜಯ ದಾಖಲು ಮಾಡಿತ್ತು. ಹೀಗಾಗಿ, 6ನೇ ಸ್ಥಾನದೊಂದಿಗೆ ಅಭಿಯಾನ ಅಂತ್ಯಗೊಳಿಸಿದೆ. ಐಪಿಎಲ್​ ನಂತರ ದಕ್ಷಿಣ ಆಫ್ರಿಕಾ ವಿರುದ್ಧ ಆಯೋಜನೆಗೊಂಡಿರುವ ಟಿ20 ಕ್ರಿಕೆಟ್​ನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಧವನ್ ವಿಫಲರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.