ETV Bharat / sports

ಪೃಥ್ವಿ ಶಾ ಬಳಿ ಕೌಶಲ್ಯವಿದೆ, ಇನ್ನಷ್ಟು ಅವಕಾಶ ಕೊಡುತ್ತೇವೆ: ಶೇನ್​ ವ್ಯಾಟ್ಸನ್

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಆರಂಭಿಕ ಆಟಗಾರ ಪೃಥ್ವಿ ಶಾ ರನ್​ ಗಳಿಸಲು ಪರದಾಡುತ್ತಿದ್ದಾರೆ. ಆದರೆ ಸಹಾಯಕ ಕೋಚ್​ ಶೇನ್​ ವ್ಯಾಟ್ಸನ್, ಶಾ ಬ್ಯಾಟಿಂಗ್​ ಬಗ್ಗೆ ಭರವಸೆ ವ್ಯಕ್ತಪಡಿಸಿದರು.

Shane Watson  on Prithvi Shaw batting
ಶಾ ಬಳಿ ಕೌಶಲ್ಯ ಇದೆ, ಇನ್ನಷ್ಟೂ ಅವಕಾಶ ಕೊಡುತ್ತೇವೆ: ಶೇನ್​ ವ್ಯಾಟ್ಸನ್
author img

By

Published : Apr 16, 2023, 6:30 PM IST

ನವದೆಹಲಿ: ಪೃಥ್ವಿ ಶಾ ಭಾರತದ ಇತರ ಯುವ ಬ್ಯಾಟರ್​ಗಳಿಗೇನೂ ಕಮ್ಮಿ ಇಲ್ಲ. ಅವರಿಗೆ ಇನ್ನಷ್ಟು ಅವಕಾಶ ಕೊಡುವ ಅಗತ್ಯವಿದೆ ಎಂದು ಆಸ್ಟ್ರೇಲಿಯಾದ ಲೆಜೆಂಡರಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್ ಹೇಳಿದರು. ದೇಶೀಯ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪೃಥ್ವಿ ಶಾ, ಐಪಿಎಲ್​ನಲ್ಲಿ ರನ್​ ಗಳಿಸಲು ಕಷ್ಟಪಡುತ್ತಿದ್ದಾರೆ. ಆದರೆ ಅವರಲ್ಲಿ ಕೌಶಲ್ಯವಿದೆ ಎಂದು ವ್ಯಾಟ್ಸನ್ ಹೇಳುತ್ತಾರೆ.

ನಿನ್ನೆ (ಶನಿವಾರ) ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಂದ್ಯದಲ್ಲಿ ಪೃಥ್ವಿ ಶಾ ಅವರನ್ನು ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್‌ಗೆ ಇಳಿಸಲಾಗಿತ್ತು. ಡಿಸಿ ಮೊದಲು ಬೌಲಿಂಗ್​ ಮಾಡಿದಾಗ ಶಾ ಮೈದಾನದಿಂದ ಹೊರಗಿದ್ದರು. ಬ್ಯಾಟಿಂಗ್​ಗೆ ಬಂದಾಗ ಡಕ್​ಗೆ ರನೌಟ್​ಗೆ ಪೆವಿಲಿಯನ್​ ಸೇರಿದ್ದರು.

ಪೃಥ್ವಿ ಶಾ ಐಪಿಎಲ್‌ನ ಈವರೆಗೆ ಐದು ಇನ್ನಿಂಗ್ಸ್‌ ಆಡಿದ್ದು ಕೇವಲ 34 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಬಾರಿ ಎರಡಂಕಿಯ ರನ್​ ಗಳಿಸಿದ್ದಾರೆ. ಜುಲೈ 25, 2021 ರಂದು ಶ್ರೀಲಂಕಾ ವಿರುದ್ಧದ ಟಿ20 ಯಲ್ಲಿ ಕೊನೆಯ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಭಾರತ ತಂಡ ಪ್ರತಿನಿಧಿಸಿದ್ದರು. ಆರಂಭಿಕ ಸ್ಥಾನಕ್ಕೆ ಪೈಪೋಟಿ ಹೆಚ್ಚು ಇರುವುದರಿಂದ ಬ್ಯಾಟಿಂಗ್​ ವೈಫಲ್ಯ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಮರಳಲು ತೊಡಕಾಗುವ ಸಾಧ್ಯತೆ ಇದೆ ಎಂದು ವಿಮರ್ಶಿಸಲಾಗುತ್ತದೆ.

"ಪೃಥ್ವಿ ಶಾ ಅವರ ಕೌಶಲ್ಯದ ಮೇಲೆ ನಂಬಿಕೆ ಇದೆ. ಅವರು ಮೈದಾನಕ್ಕೆ ಹೋಗಿ ಸ್ವತಂತ್ರವಾಗಿ ಆಡಬೇಕಿದೆ ಅಷ್ಟೇ. ಶಾ ಬ್ಯಾಟಿಂಗ್​ನಲ್ಲಿ ಪರಿಣತರು. ತಮ್ಮ ಕೌಶಲ್ಯವನ್ನು ಸಂಪೂರ್ಣವಾಗಿ ಬಳಸಿಕೊಂಡು ಭಯದಿಂದ ಹೊರಬರಬೇಕು. ಇನ್ನಷ್ಟು ಅವಕಾಶ ಕೊಡುವ ಅಗತ್ಯ ಇದೆ" ಎಂದು ವ್ಯಾಟ್ಸನ್ ಹೇಳಿದ್ದಾರೆ.

ಪೃಥ್ವಿ 2018 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಚೊಚ್ಚಲ ಪಂದ್ಯದಲ್ಲೇ ಶತಕ ದಾಖಲಿಸಿದ್ದರು. ಅದೇ ವರ್ಷದಲ್ಲಿ 19 ವರ್ಷದೊಳಗಿವರ ವಿಶ್ವಕಪ್ ಗೆಲುವಿಗೆ ಕಾರಣರಾದರು. ಆ ನಂತರ ಭಾರತದ ಅಂತಾರಾಷ್ಟ್ರೀಯ ತಂಡದ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಆಡಲು ಪ್ರಾರಂಭಿಸಿದರು. ಇದುವರೆಗೆ ಐದು ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, ಒಂಬತ್ತು ಇನ್ನಿಂಗ್ಸ್‌ಗಳಲ್ಲಿ 42ರ ಸರಾಸರಿಯಲ್ಲಿ 339 ರನ್ ಗಳಿಸಿದ್ದಾರೆ. ಒಂದು ಶತಕ ಮತ್ತು ಎರಡು ಅರ್ಧಶತಕಗಳು ಸೇರಿವೆ. ಆರು ಏಕದಿನ ಪಂದ್ಯ ಆಡಿದ್ದು, 31.50 ಸರಾಸರಿಯಲ್ಲಿ 189 ರನ್ ಗಳಿಸಿದ್ದಾರೆ. ಒಂದು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ್ದು, ಡಕೌಟ್​ ಆಗಿದ್ದರು. ಡೆಲ್ಲಿ ಕ್ಯಾಪಿಟಲ್ಸ್​ ಬ್ಯಾಟಿಂಗ್​ ವೈಫಲ್ಯ ಎದುರಿಸುತ್ತಿದ್ದು, ಈ ಆವೃತ್ತಿಯ ಸತತ ಐದು ಪಂದ್ಯಗಳಲ್ಲಿ ಸೋಲು ಕಂಡು ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: ಐಪಿಎಲ್‌ನಲ್ಲಿ ವೆಂಕಟೇಶ್​​ ಅಯ್ಯರ್​ ಚೊಚ್ಚಲ ಶತಕ; ಮುಂಬೈಗೆ 186 ರನ್‌ ಗುರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.