ETV Bharat / sports

ಟೂರ್ನಿ ಮುಗಿಯುವ ಮುನ್ನವೇ ಐಪಿಎಲ್ ಬಿಟ್ಟು ಹೋಗಲಿರುವ ಶಕಿಬ್ - ಮುಸ್ತಫಿಜುರ್​! - ಬಾಂಗ್ಲಾದೇಶ ಆರೋಗ್ಯ ಸಚಿವಾಲಯ

ಶ್ರೀಲಂಕಾದಲ್ಲಿ ಬಯೋಬಬಲ್​ನಲ್ಲಿ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಂಡಿದ್ದ ಬಾಂಗ್ಲಾದೇಶ ರಾಷ್ಟ್ರೀಯ ತಂಡ 14 ದಿನಗಳ ಕ್ವಾರಂಟೈನ್​ ಅನುಸರಿಸುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.

ಮುಸ್ತಫಿಜುರ್ ರೆಹಮಾನ್
ಮುಸ್ತಫಿಜುರ್ ರೆಹಮಾನ್
author img

By

Published : May 3, 2021, 10:46 PM IST

ಮುಂಬೈ: ಆಲ್​ರೌಂಡರ್​ ಶಕಿಬ್ ಅಲ್ ಹಸನ್ ಮತ್ತು ಮುಸ್ತಫಿಜುರ್ ರೆಹಮಾನ್ ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಿಂದ ಯೋಜನೆಯಾಗಿರುವ ಸಮಯಕ್ಕಿಂತಲೂ ಮುಂಚೆಯೇ ತವರಿಗೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಮೇ 1 ರಿಂದ ಬಾಂಗ್ಲಾದೇಶ ಸರ್ಕಾರ ಭಾರತ ಮತ್ತು ದಕ್ಷಿಣ ಆಫ್ರಿಕಾದಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸಿದೆ. ಇದಕ್ಕೂ ಮೊದಲು, ಬಿಸಿಬಿ ತಮ್ಮ ವಿದೇಶಿ ಕೋಚಿಂಗ್ ಸಿಬ್ಬಂದಿ ಮತ್ತು ಕ್ರಿಕೆಟಿಗರಿಗೆ ಕ್ವಾರಂಟೈನ್ ​ಅನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿತು. ಆದರೆ, ಎರಡನೇ ತರಂಗದ ಕೊರೊನಾವೈರಸ್‌ನ ತೀವ್ರತೆಯಿಂದಾಗಿ, ಭಾರತ ಅಥವಾ ದಕ್ಷಿಣ ಆಫ್ರಿಕಾದಿಂದ ಬರುವ ಜನರಿಗೆ 14 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗಿದೆ.

ಶ್ರೀಲಂಕಾದಲ್ಲಿ ಬಯೋಬಬಲ್​ನಲ್ಲಿ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಂಡಿದ್ದ ಬಾಂಗ್ಲಾದೇಶ ರಾಷ್ಟ್ರೀಯ ತಂಡ 14 ದಿನಗಳ ಕ್ವಾರಂಟೈನ್​ ಅನುಸರಿಸುವ ಸಾಧ್ಯತೆಯಿಲ್ಲ ಎಂದು ತಿಳಿದು ಬಂದಿದೆ.

ಆದರೆ, ಐಪಿಎಲ್​ನಲ್ಲಿ ಆಡುತ್ತಿರುವ ಶಕಿಬ್ ಅಲ್ ಹಸನ್ ಮತ್ತು ಮುಸ್ತಫಿಜುರ್ ರೆಹಮಾನ್​ ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಸೀಮಿತ ಓವರ್​ಗಳ ಸರಣಿಯಲ್ಲಿ ಪಾಲ್ಗೊಳ್ಳಲು ತವರಿಗೆ ಮರಳಲು ಮೇ 19ನ್ನು ನಿಗದಿ ಮಾಡಲಾಗಿದೆ. ಆದರೆ ,ಭಾರತದಲ್ಲಿ 2ನೇ ಅಲೆಯ ಕೋವಿಡ್​ 19 ಊಹೆಗೂ ಮೀರಿರುವುದರಿಂದ ತವರಿಗೆ ಮರಳಿದ ನಂತರ 14 ದಿನಗಳ ಕ್ವಾರಂಟೈನ್ ಮಾಡಲೇಬೇಕು ಎಂದರೆ ಶೀಘ್ರದಲ್ಲೇ ಇವರಿಬ್ಬರು ಐಪಿಎಲ್ ಬಿಟ್ಟು ತೆರಳಬೇಕಿದೆ.

ನಾವು ಅವರಿಬ್ಬರ ಜೊತೆ ಮಾತನಾಡಿದ್ದು, ಮುಂದಿನ 15 ದಿನಗಳಲ್ಲಿ ನಿಮ್ಮ ಯೋಜನೆ ಏನೆಂದು ಕೇಳಿದ್ದೇವೆ. ನಾವೂ ಕೂಡಾ ಆರೋಗ್ಯ ಸಚಿವಾಲಯಕ್ಕೆ ಶಕಿಬ್ ಮತ್ತು ರೆಹಮಾನ್ ಯಾವ ರೀತಿಯ ಕ್ವಾರಂಟೈನ್ ಪ್ರೋಟೋಕಾಲ್​ ಅನುಸರಿಸಬೇಕೆಂದು ಕೇಳಿದ್ದೇವೆ ಎಂದು ಬಿಸಿಬಿ ಸಿಇಒ ನಿಜಾಮುದ್ದೀನ್ ಚೌದರಿ ತಿಳಿಸಿದ್ದಾರೆ.

ಒಂದು ವೇಳೆ ಆರೋಗ್ಯ ಸಚಿವರು 7 ಅಥವಾ 14 ದಿನಗಳ ಕ್ವಾರಂಟೈನ್ ಮಾಡಬೇಕೆಂದು ಸೂಚಿಸಿದರೆ ಅವರಿಬ್ಬರು ಐಪಿಎಲ್​ಗಾಗಿ ನಿಗಧಿ ಮಾಡಿರುವ ದಿನಾಂಕಕ್ಕಿಂತಲೂ ಮುನ್ನವೇ ಮರಳಬೇಕಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನು ಓದಿ:ಹೈದರಾಬಾದ್ ತಂಡದೊಂದಗಿನ ವಾರ್ನರ್​ ಸಂಬಂಧ ಈ ವರ್ಷವೇ ಕೊನೆ: ಭವಿಷ್ಯ ನುಡಿದ ಸ್ಟಾರ್ ವೇಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.