ETV Bharat / sports

ಸಂಜು ಸ್ಯಾಮ್ಸನ್​ಗೆ ಟೀಂ ಇಂಡಿಯಾದಲ್ಲಿ ಸ್ಥಿರವಾಗಿ ಅವಕಾಶ ಸಿಗಬೇಕು: ಹರ್ಭಜನ್ ಸಿಂಗ್ - ETV Bharath Kannada news

ಗುಜರಾತ್​ ವಿರುದ್ಧದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್​ ಅವರ 60 ರನ್‌ಗಳ​ ಜವಾಬ್ದಾರಿಯುತ ಆಟಕ್ಕೆ ಮಾಜಿ ಆಟಗಾರರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Harbhajan Singh on Sanju Samson
ಸಂಜು ಸ್ಯಾಮ್ಸನ್​ಗೆ ಟೀ ಇಂಡಿಯಾದಲ್ಲಿ ಸ್ಥಿರವಾಗಿ ಅವಕಾಶ ಸಿಗಬೇಕು: ಹರ್ಭಜನ್ ಸಿಂಗ್
author img

By

Published : Apr 17, 2023, 6:00 PM IST

ಅಹಮದಾಬಾದ್​: ಗುಜರಾತ್ ಜೈಂಟ್ಸ್ ವಿರುದ್ಧ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಜಸ್ಥಾನ್ ರಾಯಲ್ಸ್ ನಾಯಕ ಸಂಜುಗೆ, ಟೀಂ ಇಂಡಿಯಾದಲ್ಲಿ ಸ್ಥಿರವಾದ ಅವಕಾಶ ಸಿಗಬೇಕು ಎಂದು ಹೇಳಿದ್ದಾರೆ.

178 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ 12 ಓವರ್‌ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 66 ರನ್​ ಗಳಿಸಿತ್ತು. ಸ್ಯಾಮ್ಸನ್ ಅವರು ರಶೀದ್‌ ಖಾನ್ ಓವರ್‌ನಲ್ಲಿ 20 ರನ್ ಗಳಿಸಿದ್ದು, ಪಂದ್ಯಕ್ಕೆ ತಿರುವು ನೀಡಿತ್ತು. ಸಂಜು ಸ್ಯಾಮ್ಸನ್​ 32 ಬಾಲ್​ನಲ್ಲಿ 60 ರನ್ ಗಳಿಸಿ ಔಟಾದರು. ಶಿಮ್ರಾನ್ ಹೆಟ್ಮೆಯರ್ ಕೇವಲ 26 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿ ಅಸಾಧ್ಯವಾದುದನ್ನೂ ಸಾಧ್ಯವಾಗಿಸಿದರು. ಸ್ಯಾಮ್ಸನ್ ಮತ್ತು ಹೆಟ್ಮೆಯರ್ 27 ಎಸೆತಗಳಲ್ಲಿ 59 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಧ್ರುವ್ ಜುರೆಲ್ ಅವರೊಂದಿಗೆ 20 ಎಸೆತಗಳಲ್ಲಿ 47 ರನ್‌ಗಳನ್ನು ಸೇರಿಸಿದರು.

"ನಾಯಕನ ಅಮೋಘ ಆಟ. ಸಂಜು ಅವರಂಥ ಆಟಗಾರರು ಇತರ ಆಟಗಾರರಿಗಿಂತ ಹೆಚ್ಚು ಧೈರ್ಯ ಹೊಂದಿದ್ದಾರೆ. ಅವರೊಬ್ಬ ವಿಶೇಷ ಆಟಗಾರ. ಸಂಜು ಸ್ಯಾಮ್ಸನ್ ಅವರು​ ಹೆಟ್ಮೆಯರ್‌ಗಿಂತ ಹೆಚ್ಚಿನ ಪ್ರಭಾವವನ್ನು ತಂಡದ ಮೇಲೆ ಬೀರಿದರು. ಏಕೆಂದರೆ ಗೆಲುವಿನ ಮುನ್ಸೂಚನೆಯನ್ನು ಅವರ ಆಟ​ ನೀಡಿತ್ತು. ಶಿಮ್ರಾನ್ ಹೆಟ್ಮೆಯರ್ ಅದನ್ನು ಪೂರ್ಣಗೊಳಿಸಿದರು" ಎಂದು ಹರ್ಭಜನ್ ಪಂದ್ಯದ ನಂತರದ ಶೋನಲ್ಲಿ ಹೇಳಿದರು.

ಇದನ್ನೂ ಓದಿ: ಐಪಿಎಲ್​ಗೆ ಕಾಲಿಟ್ಟ ಪುತ್ರನಿಗೆ ಸಚಿನ್​ ಭಾವನಾತ್ಮಕ ಸಂದೇಶ: ಕ್ರಿಕೆಟಿಗರಿಂದ ಮರಿ ತೆಂಡೂಲ್ಕರ್​ಗೆ ಆಲ್​ ದಿ ಬೆಸ್ಟ್​

"ಎಂ.ಎಸ್.ಧೋನಿ ಆಟವನ್ನು ಕೊನೆಯ ಕ್ಷಣದವರೆಗೂ ತೆಗೆದುಕೊಳ್ಳುತ್ತಿದ್ದರು. ಏಕೆಂದರೆ ಅವರಿಗೆ ತಮ್ಮ ಸಾಮರ್ಥ್ಯದ ಮೇಲೆ ಯಾವುದೇ ಅನುಮಾನವಿರುವುದಿಲ್ಲ" ಎಂದು ಧೋನಿ ನಾಯಕತ್ವ ಸ್ಮರಿಸಿದರು. "ಬ್ಯಾಟರ್ ಸ್ಯಾಮ್ಸನ್ ಸ್ಪಿನ್ನರ್‌ ಮತ್ತು ವೇಗದ ಬೌಲರ್‌ಗಳನ್ನು ಉತ್ತಮವಾಗಿ ಎದುರಿಸುತ್ತಾರೆ. ಅವರಿಗೆ ಟೀಂ ಇಂಡಿಯಾದಲ್ಲಿಯೂ ಸ್ಥಿರವಾದ ಅವಕಾಶಗಳು ಸಿಗಬೇಕು. ನಾನು ಅವರ ಅಭಿಮಾನಿ. ಇಂದಿನಿಂದ ಅಲ್ಲ, ಹಲವು ವರ್ಷಗಳಿಂದಲೂ. ದೊಡ್ಡ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಅವರಿಗಿದೆ" ಎಂದು ಹರ್ಭಜನ್ ಸಿಂಗ್ ವಿಶ್ಲೇಷಣೆ ಮಾಡಿದರು.

ಇದನ್ನೂ ಓದಿ: ಬೆಂಗಳೂರಿಗನಾಗಿ ಆರ್​ಸಿಬಿಗೆ ಆಡುವುದು ನನ್ನ ಕನಸು, ಸಿರಾಜ್​ ಸಲಹೆ ನೆರವಾಯ್ತು: ವೈಶಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.