ETV Bharat / sports

ಮಂಜ್ರೇಕರ್ ಪ್ರಕಾರ ಮುಂದಿನ ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಆಟಗಾರ ಇವರೇ.. - ವೆಂಕಟೇಶ್ ಅಯ್ಯರ್

ನನ್ನ ಪ್ರಕಾರ ಈತ 12-14 ಕೋಟಿಗೆ ಹರಾಜಾಗುತ್ತಾನೆ ಎಂದುಕೊಂಡಿದ್ದೇನೆ. ನಾನು ಅವರ ಈ ಟೂರ್ನಿಯ ಪ್ರದರ್ಶನವನ್ನಷ್ಟೆ ನೋಡಿ ಹೇಳುತ್ತಿಲ್ಲ. ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್​​ನಲ್ಲಿನ ಅಂಕಿ-ಅಂಶಗಳನ್ನು ಗಮನಿಸಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 47 ಸರಾಸರಿ ಹೊಂದಿದ್ದು, 92 ಸ್ಟ್ರೈಕ್​​ರೇಟ್​ನಲ್ಲಿ ರನ್​ ​ಗಳಿಸಿದ್ದಾರೆ..

ಸಂಜಯ್ ಮಂಜ್ರೇಕರ್
ಸಂಜಯ್ ಮಂಜ್ರೇಕರ್
author img

By

Published : Oct 4, 2021, 4:37 PM IST

ಹೈದರಾಬಾದ್ : ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಮೊದಲ ಹಂತದಲ್ಲಿ ಅಂಕಗಳ ಪಟ್ಟಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) 7ನೇ ಸ್ಥಾನದಲ್ಲಿತ್ತು. ದ್ವಿತೀಯಾರ್ಧದಲ್ಲಿ ಟೂರ್ನಿ ಆರಂಭವಾದ ಮೇಲೆ ಭರ್ಜರಿ ಕಮ್​ಬ್ಯಾಕ್​ ಮಾಡಿರುವ ಕೆಕೆಆರ್​ ಪ್ಲೇಆಫ್‌ಗೆ ಲಗ್ಗೆಯಿಡುವ ಸನಿಹದಲ್ಲಿದೆ.

ಈಗಾಗಲೇ ಬ್ಯಾಕ್​​ ಟು ಬ್ಯಾಕ್​​ ಗೆಲುವು ಸಾಧಿಸಿರುವ ಕೆಕೆಆರ್​ ತಂಡ ಪ್ಲೇ ಆಫ್‌ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ತಂಡ ಈ ಮಟ್ಟಕ್ಕೆ ಕಮ್​ಬ್ಯಾಕ್​ ಮಾಡಲು ಮೂಲ ಕಾರಣ ಆಲ್‌ರೌಂಡರ್​ ವೆಂಕಟೇಶ್ ಅಯ್ಯರ್ ಎಂದು ಮಾಜಿ ಆಟಗಾರ, ವಿಶ್ಲೇಷಕ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ವೆಂಕಟೇಶ್ ಅಯ್ಯರ್ ಆರಂಭಿಕನಾಗಿಯೂ ಯಶಸ್ಸು ಕಂಡಿದ್ದಾರೆ. ಹಾಗೆಯೇ ಮಧ್ಯಮ ಓವರ್‌ಗಳಲ್ಲಿ ಬೌಲಿಂಗ್​ನಲ್ಲಿಯೂ ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಇವರ ಈ ಪ್ರದರ್ಶನ ನೋಡುತ್ತಿದ್ದರೆ ಮುಂದಿನ ಐಪಿಎಲ್​​ ಹರಾಜಿನಲ್ಲಿ ಈತ "ಅತಿ ಹೆಚ್ಚು ಬೆಲೆ" ಗಳಿಸಬಹುದು ಎಂದು ಮಂಜ್ರೇಕರ್​ ಹೇಳಿದ್ದಾರೆ.

"ನನ್ನ ಪ್ರಕಾರ ಈತ 12-14 ಕೋಟಿಗೆ ಹರಾಜಾಗುತ್ತಾನೆ ಎಂದುಕೊಂಡಿದ್ದೇನೆ. ನಾನು ಅವರ ಈ ಟೂರ್ನಿಯ ಪ್ರದರ್ಶನವನ್ನಷ್ಟೆ ನೋಡಿ ಹೇಳುತ್ತಿಲ್ಲ. ಪ್ರಥಮ ದರ್ಜೆ ಹಾಗೂ ರಣಜಿ ಕ್ರಿಕೆಟ್​​ನಲ್ಲಿನ ಅಂಕಿ-ಅಂಶಗಳನ್ನು ಗಮನಿಸಿದ್ದೇನೆ. ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ 47 ಸರಾಸರಿ ಹೊಂದಿದ್ದು, 92 ಸ್ಟ್ರೈಕ್​​ರೇಟ್​ನಲ್ಲಿ ರನ್​ ​ಗಳಿಸಿದ್ದಾರೆ.

ಹಾಗೆಯೇ ಟಿ-20 ಕ್ರಿಕೆಟ್​ನಲ್ಲೂ 37ರ ಸರಾಸರಿಯಲ್ಲಿ ಬ್ಯಾಟ್​ ಮಾಡಿದ್ದಾರೆ. ಬೌಲಿಂಗ್​ ಕೂಡ ಉತ್ತಮವಾಗಿದೆ. ಕಠಿಣ ಓವರ್‌ಗಳನ್ನು ಬೌಲ್ ಮಾಡಬಲ್ಲರು ಎಂದು ಕೊನೆಯ ಪಂದ್ಯದಲ್ಲಿ ಅವರು ತೋರಿಸಿದ್ದಾರೆ. ಆದುದರಿಂದ ಅವರು ತುಂಬಾ ಹೆಚ್ಚಿನ ಬೆಲೆ ಪಡೆಯಲಿದ್ದಾರೆ" ಎಂದು ಮಂಜ್ರೇಕರ್ ತಿಳಿಸಿದರು.

ಮಧ್ಯಪ್ರದೇಶದ 26 ವರ್ಷದ ಬ್ಯಾಟರ್ ವೆಂಕಟೇಶ್ ಅಯ್ಯರ್, ಈ ಋತುವಿನ ದ್ವಿತೀಯಾರ್ಧದಲ್ಲಿ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅಯ್ಯರ್​​ ಆರು ಪಂದ್ಯಗಳಲ್ಲಿ 200ಕ್ಕೂ ಹೆಚ್ಚು ರನ್ ಗಳಿಸಿದ್ದು, ಬೌಲಿಂಗ್​​ನಲ್ಲಿ 3 ವಿಕೆಟ್​ ಕೂಡ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.