ETV Bharat / sports

ಆರ್​ಸಿಬಿ ತಂಡದ ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆ - sanjay bangar oppointed rcb head coach

ಆರ್​ಸಿಬಿ ತಂಡಕ್ಕೆ ಮುಖ್ಯ ಕೋಚ್​ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆಯಾಗಿದ್ದಾರೆ. ಈ ಹಿಂದೆ ಬ್ಯಾಟಿಂಗ್​ ಕೋಚ್​ ಆಗಿ ಆಯ್ಕೆಯಾಗಿದ್ದ ಸಂಜಯ್​ ಬಂಗಾರ್​, ಕೋಚ್​ ಹುದ್ದೆ ನಿರ್ವಹಿಸುತ್ತಿದ್ದ ಮೈಕ್​ ಹಸ್ಸನ್​ ಅವರ ಸ್ಥಾನ ತುಂಬಲಿದ್ದಾರೆ.

sanjay bangar oppointed rcb head coach
ಆರ್​ಸಿಬಿ ತಂಡದ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆ
author img

By

Published : Nov 9, 2021, 1:39 PM IST

Updated : Nov 9, 2021, 2:00 PM IST

ಬೆಂಗಳೂರು: ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಮುಖ್ಯ ಕೋಚ್​ ಆಗಿ ಸಂಜಯ್​ ಬಂಗಾರ್​ ಆಯ್ಕೆಯಾಗಿದ್ದಾರೆ.

ತಂಡದ ಬ್ಯಾಟಿಂಗ್​ ಕೋಚ್​​ ಆಗಿದ್ದ ಸಂಜಯ್​ ಬಂಗಾರ್​ಗೆ ಆಡಳಿತ ಮಂಡಳಿ ಮುಖ್ಯ ಕೋಚ್​ ಹುದ್ದೆಗೆ ಪದೋನ್ನತಿ ನೀಡಿದೆ. ಮುಂದಿನ 2 ವರ್ಷದವರೆಗೆ ಕೋಚ್​ ಹುದ್ದೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಇದೇ ಫೆಬ್ರವರಿಯಲ್ಲಿ ಆರ್​ಸಿಬಿ ತಂಡದ ಬ್ಯಾಟಿಂಗ್​ ಕೋಚ್​ ಆಗಿ ಆಯ್ಕೆಯಾಗಿದ್ದ ಸಂಜಯ್​ ಬಂಗಾರ್​, ಕೋಚ್​ ಹುದ್ದೆ ನಿರ್ವಹಿಸುತ್ತಿದ್ದ ಮೈಕ್​ ಹಸ್ಸನ್​ ಅವರ ಸ್ಥಾನ ತುಂಬಲಿದ್ದಾರೆ.

ಆರ್​ಸಿಬಿ ತಂಡದ ಮುಖ್ಯ ಕೋಚ್​ ಆಗಿದ್ದ ಸೈಮನ್​ ಕಾಟಿಚ್​ ಅವರು ವೈಯಕ್ತಿಕ ಕಾರಣಕ್ಕಾಗಿ ದುಬೈನಲ್ಲಿ ನಡೆದ ಐಪಿಎಲ್​ನ 2ನೇ ಚರಣದಲ್ಲಿ ಕೋಚ್​ ಹುದ್ದೆಯಿಂದ ನಿರ್ಗಮಿಸಿದ್ದರು. ಈ ವೇಳೆ ಮೈಕ್​ ಹಸ್ಸನ್​ ಅವರು ಹಂಗಾಮಿ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು.

ಇದೀಗ ಸಂಜಯ್​ ಬಂಗಾರ್ ಅವರನ್ನು ಮುಂದಿನ 2 ವರ್ಷದವರೆಗೆ ತಂಡದ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ ಎಂದು ಮೈಕ್​ ಹಸ್ಸನ್​ ಅವರು ಆರ್​ಸಿಬಿ ಅಧಿಕೃತ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಸಂಜಯ್​ ಬಂಗಾರ್​ ಅವರು ಭಾರತ ತಂಡದ ಬ್ಯಾಟಿಂಗ್​ ಕೋಚ್​ ಆಗಿ 5 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

Last Updated : Nov 9, 2021, 2:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.