ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಿನ್ನೆ(ಬುಧವಾರ) ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಣ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಪಂದ್ಯದ ಕೊನೆಯ ಎಸೆತದವರೆಗೂ ಕೋಟ್ಯಂತರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಅಂತಿಮವಾಗಿ ರಾಜಸ್ತಾನ ತಂಡ ಚೆನ್ನೈ ತಂಡವನ್ನು ಬಗ್ಗುಬಡಿಯಿತು. ಇದಕ್ಕೆ ಕಾರಣರಾದವರು ರಾಜಸ್ತಾನ್ ತಂಡದ ಬೌಲರ್ ಸಂದೀಪ್ ಶರ್ಮಾ.
- — Sandeep sharma (@sandeep25a) April 13, 2023 " class="align-text-top noRightClick twitterSection" data="
— Sandeep sharma (@sandeep25a) April 13, 2023
">— Sandeep sharma (@sandeep25a) April 13, 2023
ರಣರೋಚಕ ಪಂದ್ಯವನ್ನು ಸಂದೀಪ್ ಶರ್ಮಾ ಅವರ ಪತ್ನಿ ಮಗಳೊಂದಿಗೆ ವೀಕ್ಷಿಸಿ ಖುಷಿಪಟ್ಟಿದ್ದು, ಫೋಟೋ ಹಾಗು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂದೀಪ್ ಶರ್ಮಾ ಅವರ ಮಗಳು ತಾಯಿಯ ಮಡಿಲಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿರುವುದನ್ನು ವಿಡಿಯೋ ಕ್ಲಿಪ್‌ನಲ್ಲಿ ನೋಡಬಹುದು.
ಇದನ್ನೂ ಓದಿ: ಚೆನ್ನೈ ಗೆಲುವು ತಡೆದ ಸಂದೀಪ್ ಶರ್ಮಾ ಯಾರ್ಕರ್: ರಾಜಸ್ಥಾನ ರಾಯಲ್ಸ್ಗೆ 3 ರನ್ ಜಯ
ಚೆನ್ನೈ ವಿರುದ್ಧ ಗೆಲುವಿನ ನಗಾರಿ ಬಾರಿಸಿದ ರಾಯಲ್ಸ್: ಸಿಎಸ್ಕೆ ಫ್ಯಾನ್ಸ್ಗೆ ನಿರಾಸೆ
ಕೊನೆಯ ಓವರ್ನ ಕೊನೆಯ ಎಸೆತದವರೆಗೂ ನಡೆದ ಪಂದ್ಯ ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತು ನೋಡುವಂತೆ ಮಾಡಿತ್ತು. ಧೋನಿ ಬ್ಯಾಟ್ ಮಾಡುತ್ತಿದ್ದ ಸಂದರ್ಭದಲ್ಲಿ ಜಿಯೋಸಿನಿಮಾ ಆ್ಯಪ್ ಮೂಲಕ 2 ಕೋಟಿಗೂ ಅಧಿಕ ಜನರು ಪಂದ್ಯ ವೀಕ್ಷಿಸುತ್ತಿದ್ದರೆ. ಮ್ಯಾಚ್ ಫಿನಿಶರ್ ಖ್ಯಾತಿಯ ಧೋನಿ ನಿನ್ನೆಯ ಪಂದ್ಯದಲ್ಲಿ ಗೆಲುವಿನ ಸಿಕ್ಸರ್ ಬಾರಿಸುವಲ್ಲಿ ವಿಫಲರಾದರು. ಇದು ಚೆನ್ನೈ ಹಾಗು ಧೋನಿ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿತು.
ಇದನ್ನೂ ಓದಿ: ಜಡೇಜಾ, ಧೋನಿಗೆ ಖೆಡ್ಡಾ ತೋಡಿದ್ದು ಸಂದೀಪ್ ಶರ್ಮಾ ಅಲ್ಲ.. ಕೋಚ್ ನೀಡಿದ ಸಲಹೆಗೆ ಒಲಿದ ಜಯ!