ಬೆಂಗಳೂರು: ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ 7 ರನ್ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋಲೊಪ್ಪಿಕೊಂಡಿದೆ. 20 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಲಷ್ಟೇ ಆರ್ಆರ್ ಬ್ಯಾಟರ್ಗಳಿಗೆ ಸಾಧ್ಯವಾಯಿತು. ಆರ್ಸಿಬಿಯ ನಿಯಂತ್ರಿತ ಬೌಲಿಂಗ್ನಿಂದ ಗ್ರೀನ್ ಜರ್ಸಿಯಲ್ಲಿ ಮತ್ತೊಂದು ಗೆಲುವು ದಾಖಲಾಗಿದೆ.
ಆರ್ಸಿಬಿ ಕೊಟ್ಟಿದ್ದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ್ದ ರಾಯಲ್ಸ್ಗೆ ಉತ್ತಮ ಲಯದಲ್ಲಿರುವ ಬಟ್ಲರ್ ವಿಕೆಟನ್ನು ಉರುಳಿಸುವ ಮೂಲಕ ಸಿರಾಜ್ ಆರಂಭಿಕ ಆಘಾತ ನೀಡಿದರು. ಆದರೆ ನಂತರ ಬಂದ ಆರ್ಸಿಬಿ ಎಕ್ಸ್ ಆಟಗಾರ ದೇವದತ್ ಪಡಿಕ್ಕಲ್ ಮತ್ತೋರ್ವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಜೊತೆ ಸೇರಿ ಉತ್ತಮ ರನ್ ಕಲೆಹಾಕಿದರು.
ಈ ಜೋಡಿ 89 ರನ್ನ ಜೊತೆಯಾಟ ಆಡಿತು. 34 ಬಾಲ್ನಲ್ಲಿ 7 ಬೌಂಡರಿ ಮತ್ತು 1 ಸಿಕ್ಸ್ನಿಂದ ಪಡಿಕ್ಕಲ್ 52 ರನ್ ಗಳಿಸಿದರು. ಯಶಸ್ವಿ ಜೈಸ್ವಾಲ್ 37 ಎಸೆತದಲ್ಲಿ 47 ರನ್ ಗಳಸಿ 3 ರನ್ನಿಂದ ಅರ್ಧಶತಕದಿಂದ ವಂಚಿತರಾದರು. ನಂತರ ಬಂದ ನಾಯಕ ಸಂಜು ಸ್ಯಾಮ್ಸನ್ ಅಬ್ಬರಿಸುವ ಮುನ್ಸೂಚನೆ ನೀಡಿದರು. ಆದರೆ, 22 ರನ್ ಗಳಿಸಿ ಔಟ್ ಆದರು. ಶಿಮ್ರಾನ್ ಹೆಟ್ಮೆಯರ್ 3 ರನ್ ಗಳಿಸಿದಾಗ ರನ್ ಔಟ್ಗೆ ಬಲಿಯಾದರು.
-
The Go Green Game did not disappoint! 💚
— Royal Challengers Bangalore (@RCBTweets) April 23, 2023 " class="align-text-top noRightClick twitterSection" data="
Our bowlers take us home in a thrilling contest, and we pick up back-to-back wins! 🙌#PlayBold #ನಮ್ಮRCB #IPL2023 #GoGreen #RCBvRR pic.twitter.com/N9Mz4fHQOC
">The Go Green Game did not disappoint! 💚
— Royal Challengers Bangalore (@RCBTweets) April 23, 2023
Our bowlers take us home in a thrilling contest, and we pick up back-to-back wins! 🙌#PlayBold #ನಮ್ಮRCB #IPL2023 #GoGreen #RCBvRR pic.twitter.com/N9Mz4fHQOCThe Go Green Game did not disappoint! 💚
— Royal Challengers Bangalore (@RCBTweets) April 23, 2023
Our bowlers take us home in a thrilling contest, and we pick up back-to-back wins! 🙌#PlayBold #ನಮ್ಮRCB #IPL2023 #GoGreen #RCBvRR pic.twitter.com/N9Mz4fHQOC
ಕೊನೆಯಲ್ಲಿ ಧ್ರುವ ಜುರೆಲ್ ಮತ್ತು ರವಿಚಂದ್ರನ್ ಅಶ್ವಿನ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯದರು. ಆದರೆ 12 ರನ್ ಗಳಸಿದ ಅಶ್ವಿನ್ ಹರ್ಷಲ್ಗೆ ವಿಕೆಟ್ ಕೊಟ್ಟರು. ಧ್ರುವ ಜುರೆಲ್ ಅಜೇಯರಾಗಿ 34 ರನ್ ಗಳಿಸಿದರಾದರೂ, ಗೆಲುವಿನ ರನ್ ಕದಿಯುವಲ್ಲಿ ವಿಫಲರಾದರು. ಇದರಿಂದ ರಾಜಸ್ಥಾನ ರಾಯಲ್ಸ್ 7 ರನ್ನ ಸೋಲನುಭವಿಸಿತು.
ಆರ್ಸಿಬಿ ಪರ ಹರ್ಷಲ್ ಪಟೇಲ್ 3 ಮತ್ತು ಸಿರಾಜ್, ಡೇವಿಡ್ ವಿಲ್ಲಿ ತಲಾ ಒಂದು ವಿಕೆಟ್ ಪಡೆದರು. 77 ರನ್ ಗಳಿಸಿ ತಂಡಕ್ಕೆ ಉತ್ತಮ ಕೊಡುಗೆ ನೀಡಿದ ಮ್ಯಾಕ್ಸ್ವೆಲ್ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಯಿತು.
ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಶೂನ್ಯ ಪತನದ ನಂತರ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ ಓವರ್ ಅಂತ್ಯಕ್ಕೆ 9 ವಿಕೆಟ್ ನಷ್ಟದಿಂದ 189 ರನ್ ಗಳಿಸಿದೆ. ಇಬ್ಬರ ಬೃಹತ್ ಜೊತೆಯಾಟ ಬ್ರೇಕ್ ಆದ ನಂತರ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ ಎದುರಿಸಿದ ಆರ್ಸಿಬಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ 190 ರನ್ ಸಾಧಾರಣ ಗುರಿಯನ್ನು ನೀಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆರ್ಸಿಬಿಗೆ ಟ್ರೆಂಟ್ ಬೌಲ್ಟ್ ಆಘಾತ ನೀಡಿದರು. ಫಾಫ್ ಗಾಯದ ಕಾರಣ ಸ್ಟ್ಯಾಂಡ್ ಇನ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮೊದಲ ಬಾಲ್ನಲ್ಲೇ ಎಲ್ಬಿಡ್ಲ್ಯೂಗೆ ಬಲಿಯಾದರು. ಇದರಿಂದ ಆರ್ಸಿಬಿ 0 ರನ್ಗೆ ಒಂದು ವಿಕೆಟ್ ಕಳೆದುಕೊಂಡಿತು. ವಿರಾಟ್ ನಂತರ ಶಹಬಾಜ್ ಅಹ್ಮದ್ ಬಡ್ತಿ ನೀಡಿ ಮೂರನೇ ವಿಕೆಟ್ ಆಗಿ ಕಣಕ್ಕಿಳಿಸಲಾಯಿತು. ಆದರೆ ಶಹಬಾಜ್ ಅಹ್ಮದ್ ಪರಿಣಾಮಕಾರಿಯಾಗಿ ಬ್ಯಾಟಿಂಗ್ ಮಾಡಲಿಲ್ಲ. ನಾಲ್ಕು ಬಾಲ್ ಎದುರಿಸಿದ ಅವರು 2 ರನ್ಗೆ ವಿಕೆಟ್ ಒಪ್ಪಿಸಿದರು.
ಫಾಫ್-ಮ್ಯಾಕ್ಸಿ ಶತಕದ ಜೊತೆಯಾಟ: ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಆರಂಭಿಕರಾಗಿ ಕಣಕ್ಕಿಳಿದ ಫಾಫ್ ಜೊತೆಗೂಡಿ ರನ್ ತಂದರು. 12 ರನ್ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಇಬ್ಬರು ವಿದೇಶಿಗರು ಆಸರೆಯಾದರು. ಅಲ್ಲದೇ ರನ್ಗೆ ವೇಗ ಹೆಚ್ಚಿಸಿದ ಬ್ಯಾಟರ್ಗಳು ಶತಕದ ಜೊತೆಯಾಟ ಮಾಡಿದರು. ಮ್ಯಾಕ್ಸ್‌ವೆಲ್ ಆರ್ಸಿಬಿಗೆ ಸಹಸ್ರ ರನ್ ಗಳಿಸಿದ ಬ್ಯಾಟರ್ ಆದರು.
39 ಬಾಲ್ನಲ್ಲಿ 8 ಫೋರ್ ಮತ್ತು 2 ಸಿಕ್ಸ್ನಿಂದ 62 ರನ್ ಗಳಿಸಿದ್ದ ಫಾಫ್ ಯಶಸ್ವಿ ಜೈಸ್ವಾಲ್ ಅವರ ರನ್ ಔಟ್ಗೆ ಬಲಿಯಾದರು. ಅವರ ಬೆನ್ನಲ್ಲೆ 44 ಬಾಲ್ ಫೇಸ್ ಮಾಡಿ ಆರು ಬೌಂಡರಿ ಮತ್ತು 4 ಸಿಕ್ಸ್ನಿಂದ 77 ರನ್ ಗಳಿಸಿದ್ದ ಮ್ಯಾಕ್ಸ್‌ವೆಲ್ ಕೂಡ ಪೆವಿಲಿಯನ್ಗೆ ಮರಳಿದರು. ಈ ಇಬ್ಬರು ಔಟ್ ಆದ ನಂತರ ಮಿಕ್ಕ ಆರ್ಸಿಬಿ ಬ್ಯಾಟರ್ಗಳ ಪೆವಿಲಿಯನ್ ಪರೇಡ್ ನಡೆಯಿತು.
ಮಹಿಪಾಲ್ ಲೊಮ್ರೋರ್ (8), ದಿನೇಶ್ ಕಾರ್ತಿಕ್ (16), ಸುಯಶ್ ಪ್ರಭುದೇಸಾಯಿ (0), ವನಿಂದು ಹಸರಂಗ (6) ಮತ್ತು ವಿಜಯಕುಮಾರ್ ವೈಶಾಕ್ (0) ಔಟ್ ಆದರೆ ಮೊಹಮ್ಮದ್ ಸಿರಾಜ್ (1) ಮತ್ತು ಡೇವಿಡ್ ವಿಲ್ಲಿ (4) ಅಜೇಯರಾಗಿ ಉಳಿದು ಆಲ್ಔಟ್ ತಪ್ಪಿಸಿದರು. ಕೊನೆಯ ಐದು ಓವರ್ನಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 33 ರನ್ ಮಾತ್ರ ತಂಡ ಗಳಿಸಿತು.
ರಾಜಸ್ಥಾನ ಪರ ಬೋಲ್ಟ್ ಮತ್ತು ಶರ್ಮಾ ತಲಾ ಎರಡು ವಿಕೆಟ್ ಪಡೆದರೆ, ಅಶ್ವಿನ್ ಮತ್ತು ಚಹಾಲ್ ತಲಾ ಒಂದು ವಿಕೆಟ್ ಕಿತ್ತರು. ಆರ್ಸಿಬಿಯ ಮೂವರು ಬ್ಯಾಟರ್ಗಳು ರನ್ ಔಟ್ಗೆ ಬಲಿಯಾದರು.
ಇದನ್ನೂ ಓದಿ: ಚಿನ್ನಸ್ವಾಮಿಯಲ್ಲಿ ಇಂದು ಆರ್ಸಿಬಿ Vs ಆರ್ಆರ್ ಪಂದ್ಯಕ್ಕೆ ಮಳೆ ಭೀತಿ: ಹಸಿರು ಜರ್ಸಿಯಲ್ಲಿ ಮಿಂಚಲಿದೆ ಡು ಪ್ಲೆಸಿಸ್ ಟೀಂ