ETV Bharat / sports

TATA IPL 2023: ವಿರಾಟ್​, ಡು ಪ್ಲೆಸಿಸ್​​ ಅರ್ಧಶತಕ.. ಪ್ರಥಮ ಪಂದ್ಯದಲ್ಲಿ ಆರ್​ಸಿಬಿಗೆ ಜಯ

IPL 2023: 5 ಬಾರಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ವಿರುದ್ಧ ಆರ್​ಸಿಬಿ ತಂಡ ಇಂದು ತವರು ನೆಲದಲ್ಲಿ ನಡೆದ ಮೊದಲ ಪಂದ್ಯದಲ್ಲೇ 8 ವಿಕೆಟ್​ಗಳ ಜಯಭೇರಿ ಬಾರಿಸಿದೆ.

Royal Challengers Bangalore vs Mumbai Indians Match Score update
TATA IPL 2023: ಟಾಸ್​ ಗೆದ್ದ ಆರ್​ಸಿಬಿ ಬೌಲಿಂಗ್​ ಆಯ್ಕೆ.. ಇಬ್ಬನಿ ಲಾಭ ಪಡೆಯುವ ಚಿಂತನೆ
author img

By

Published : Apr 2, 2023, 7:17 PM IST

Updated : Apr 3, 2023, 12:07 AM IST

ಬೆಂಗಳೂರು: ಐಪಿಎಲ್​ 16ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಶುಭಾರಂಭ ಮಾಡಿದೆ. ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ ವಿರಾಟ್ ಕೊಹ್ಲಿ (82 ಅಜೇಯ) ಮತ್ತು ಫಾಫ್​ ಡು ಪ್ಲೆಸಿಸ್​(73) ಅಬ್ಬರದ ಬ್ಯಾಟಿಂಗ್​ ಮೂಲಕ ಆರ್​ಸಿಬಿ ಮೊದಲ ಪಂದ್ಯದಲ್ಲೇ ಜಯ ದಾಖಲಿಸಿದೆ. ರೋಹಿತ್​ ಶರ್ಮಾ ಪಡೆ ನೀಡಿದ್ದ ಸವಾಲಿನ 172 ರನ್​ಗಳ ಗುರಿಯನ್ನು ಆರ್​ಸಿಬಿ ಕೇವಲ 2 ವಿಕೆಟ್​ ಕಳೆದುಕೊಂಡು 3.4 ಓವರ್​ಗಳು ಬಾಕಿ ಇರುವಾಗಲೇ ಪೂರೈಸಿತು.

ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ನಾಯಕ ಡು ಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನಾಗಿ ಡು ಪ್ಲೆಸಿಸ್​ ಈ ನಿರ್ಧಾರ ಉತ್ತಮವಾಗಿಯೇ ಇತ್ತು. ಮುಂಬೈ ತಂಡವು 50 ರನ್​ಗಳು ಕಲೆ ಹಾಕುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್​ಗಳನ್ನು ಆರ್​ಸಿಬಿ ಬೌಲರ್​ಗಳು ಉರುಳಿಸಿದರು. ಇದರಿಂದ ರೋಹಿತ್ ಶರ್ಮಾ ಪಡೆ ನೀರಸ ಓಪನಿಂಗ್​ ಪಡೆಯಿತು. ಆದರೆ, ತಿಲಕ್ ಮಾರ್ಮ ಅಜೇಯ 84 ರನ್​ಗಳ ನೆರವಿನಿಂದ ಮುಂಬೈ 20 ಓವರ್​​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 171 ರನ್​ ಕಲೆ ಹಾಕಲು ಸಾಧ್ಯವಾಯಿತು.

ಕೊಹ್ಲಿ - ಡು ಪ್ಲೆಸಿಸ್ ಅಬ್ಬರ: ರೋಹಿತ್ ಪಡೆದ ನೀಡಿದ್ದ 172 ರನ್​ಗಳ ಗುರಿ ಬೆನ್ನಟ್ಟಿದ್ದ ಆರ್​ಸಿಬಿ ಭರ್ಜರಿ ಓಪನಿಂಗ್​ ಪಡೆಯಿತು. ಆರಂಭಿಕ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ ಮತ್ತು ನಾಯಕ ಡು ಪ್ಲೆಸಿಸ್​ ಮೊದಲ ವಿಕೆಟ್​ಗೆ ಅಮೋಘ ಪ್ರದರ್ಶನ ನೀಡಿದರು. ಮುಂಬೈ ಬೌಲರ್​ಗಳನ್ನು ದಂಡಿಸಿದ ಇಬ್ಬರು ಬ್ಯಾಟರ್​ಗಳು ಆರ್​ಸಿಬಿ ಅಭಿಮಾನಿಗಳಿಗೆ ರಸದೌತಣ ನೀಡಿದರು.

ವಿರಾಟ್​ ಮತ್ತು ಡು ಪ್ಲೆಸಿಸ್​ ಅಬ್ಬರದ ಬ್ಯಾಟಿಂಗ್​ನೊಂದಿಗೆ ಆಕರ್ಷಕ ಅರ್ಧಶತಕಗಳನ್ನು ಬಾರಿಸಿದರು. ಮೊದಲ ವಿಕೆಟ್​ 148 ರನ್​ಗಳ ಜೊತೆಯಾಟವನ್ನು ಈ ಜೋಡಿ ನೀಡಿತು. ಇಬ್ಬರೇ ತಂಡವನ್ನು ಗೆಲ್ಲಿಸಿಕೊಂಡು ಬರುವ ಮುನ್ಸೂಚನೆಯನ್ನೂ ನೀಡಿದ್ದರು. ಆದರೆ, 73 ರನ್​ ಬಾರಿಸಿದ್ದ ನಾಯಕ ಡು ಪ್ಲೆಸಿಸ್ ಅರ್ಷದ್​ ಖಾನ್​ ​ಬೌಲಿಂಗ್​ನಲ್ಲಿ ಔಟಾದರು. 43 ಬಾಲ್​ಗಳಲ್ಲಿ ಆರು ಸಿಕ್ಸರ್​ ಮತ್ತು ಐದು ಬೌಂಡರಿಗಳ ಸೇಮತ 73 ರನ್​ ಸಿಡಿಸಿದರು.

ನಂತರ ಬಂದ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಬಳಿಕ ಗ್ಲೇನ್​ ಮ್ಯಾಕ್ಸ್ ವೆಲ್ 3 ಎಸೆತಗಳಲ್ಲಿ ಎರಡು ಸಿಕ್ಸರ್​ಗಳು ಬಾರಿಸಿ ಗಮನ ಸೆಳೆದರು. ಮತ್ತೊಂದೆಡೆ, ಕೊಹ್ಲಿ 49 ಎಸೆತಗಳಲ್ಲಿ ಆರು ಬೌಂಡರಿಗಳು ಮತ್ತು ಐದು ಸಿಕ್ಸರ್​ಗಳ ಸಮೇತ 82 ಕಲೆ ಹಾಕಿಸಿ ಅಜೇಯರಾಗಿ ಉಳಿದರು.

ಮುಂಬೈ ಇನ್ನಿಂಗ್ಸ್​: ಇದಕ್ಕೂ ಮುನ್ನ ಬ್ಯಾಟ್​ ಮಾಡಿದ ಮುಂಬೈ ಪರವಾಗಿ ತಿಲಕ್​ ವರ್ಮ ಏಕಾಂಗಿ ಹೋರಾಟ ಮಾಡಿದರು. ನಾಯಕ ರೋಹಿತ್ ಶರ್ಮಾ ಕೇವಲ 1 ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ಇಶನ್​ ಕಿಶನ್ (10), ಸೂರ್ಯ ಕುಮಾರ್​ ಯಾದವ್​ (15), ಕ್ಯಾಮೆರಾನ್ ಗ್ರೀನ್ (5) ಕೂಡ ಬೇಗ ಔಟಾದರು.

ಈ ನಡುವೆ ತಿಲಕ್ ವರ್ಮಾ ಮತ್ತು ನೆಹಾಲ್ ವಧೇರಾ ತಂಡಕ್ಕೆ ಆಸರೆಯಾದರು. ಆದರೆ, 21 ರನ್​ ಕಲೆ ಹಾಕಿ ವಧೇರಾ ವಿಕೆಟ್​ ಒಪ್ಪಿಸಿದರು. ತಿಲಕ್​ ವರ್ಮಾ ಕೊನೆ ಓವರ್​ಗಳಲ್ಲಿ ಆರ್​ಸಿಬಿ ಬೌಲರ್​ಗಳನ್ನು ದಂಡಿಸಿದರು. 46 ಎಸೆತದಲ್ಲಿ​ 9 ಬೌಂಡರಿ ಮತ್ತು 4 ಸಿಕ್ಸರ್​ಗಳ ಸಮೇತ ಅಜೇಯ 84 ರನ್​ ಬಾರಿಸಿದರು. ಇದರಿಂದ ಮುಂಬೈ ತಂಡದ 171 ರನ್​ ಕಲೆ ಹಾಕಲು ಸಾಧ್ಯವಾಯಿತು. ಆರ್​ಸಿಬಿ ಪರ ಕರಣ್​ ಶರ್ಮಾ 2, ಹರ್ಷಲ್ ಪಟೇಲ್, ಆಕಾಶ್ ದೀಪ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್ ಮತ್ತು ಮೈಕಲ್ ಬ್ರೇಸ್‌ವೆಲ್ ತಲಾ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ: 12 ವರ್ಷದ ಹಿಂದಿನ ವಿಶ್ವಕಪ್​ ಗೆಲುವಿನ ನೆನಪು.. ಮತ್ತೆ ಐಸಿಸಿ ಟ್ರೋಫಿ ಮೇಲೆ ಭಾರತದ ಕಣ್ಣು

Last Updated : Apr 3, 2023, 12:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.