ETV Bharat / sports

IPLನಲ್ಲಿ ನಾಳೆ: ಆರ್​ಸಿಬಿ ವಿರುದ್ಧ ಚೊಚ್ಚಲ ಜಯ ದಾಖಲಿಸುತ್ತಾ ಡೆಲ್ಲಿ? - ETV Bharath Karnataka

16ನೇ ಆವೃತ್ತಿಯಲ್ಲಿ ಒಂದೂ ಗೆಲುವನ್ನು ಕಾಣದ ಡೆಲ್ಲಿ ಕ್ಯಾಪಿಟಲ್ಸ್​ ಚೊಚ್ಚಲ ಗೆಲುವಿನ ಹುಡುಕಾಟದಲ್ಲಿದ್ದರೆ, ಆರ್​ಸಿಬಿ ಕಳೆದೆರಡು ಪಂದ್ಯದಲ್ಲಿ ಸೋತಿದ್ದು ಜಯದ ಟ್ರ್ಯಾಕ್​ಗೆ ಮರಳಲು ಚಿಂತಿಸುತ್ತಿದೆ.

Etv Bharat
Etv Bharat
author img

By

Published : Apr 14, 2023, 10:41 PM IST

ಬೆಂಗಳೂರು: ಸತತ ಎರಡು ಸೋಲಿನಿಂದ ಕಂಗೆಟ್ಟಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ನಾಳೆ ಮತ್ತೆ ಗೆಲುವಿನ ಲಯಕ್ಕೆ ಮರಳಲು ಸಜ್ಜಾಗಿದೆ. ಲೀಗ್​ನ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್​ ಚೊಚ್ಚಲ ಗೆಲುವಿಗೆ ಕಾಯುತ್ತಿದೆ. ತಂಡವನ್ನು ಹುರಿದುಂಬಿಸಲು ಬೆಂಗಳೂರಿಗೆ ರಿಷಬ್​ ಪಂತ್ ಬಂದಿದ್ದು ಅಭ್ಯಾಸದ ವೇಳೆ ತಂಡದೊಂದಿಗಿದ್ದು ಸಂವಾದ ಮಾಡಿದ್ದಾರೆ.

ಆರ್​ಸಿಬಿಯಲ್ಲಿ ಬ್ಯಾಟರ್​ಗಳು ಫಾರ್ಮ್​ನಲ್ಲಿದ್ದು ಬೃಹತ್​ ಮೊತ್ತ ಕಲೆ ಹಾಕಿದರೂ ಸೋಲನುಭವಿಸುತ್ತಿದ್ದಾರೆ. ಬೆಂಗಳೂರು ತಂಡವು ಬೌಲಿಂಗ್​ನಲ್ಲಿ ನಿಯಂತ್ರಣ ಸಾಧಿಸುವಲ್ಲಿ ವಿಫಲವಾಗುತ್ತಿದೆ. ಮೊದಲ ಪಂದ್ಯ ಮುಂಬೈ ವಿರುದ್ಧವೂ ಡೆತ್​ ಓವರ್​ನಲ್ಲಿ ತಿಲಕ್ ವರ್ಮಾ ಸವಾರಿ ಮಾಡಿದ್ದರು. ಕೆಕೆಆರ್​ ವಿರುದ್ಧ ಶಾರ್ದೂಲ್ ಠಾಕೂರ್​ ಮತ್ತು ಲಕ್ನೊ ವಿರುದ್ಧ ಸ್ಟೋಯಿನ್ಸ್​ ಮತ್ತು ಪೂರನ್​ ಮಾರಕರಾದರು.

ಹೆಚ್ಚುವರಿ ರನ್​ಗೆ ಕಡಿವಾಣ ಅಗತ್ಯ: ಬೆಂಗಳೂರು ತಂಡ ಮುಂಬೈ ಎದುರು 11, ಕೆಕೆಆರ್​ 23 ಮತ್ತು ಲಕ್ನೋ ಮೇಲೆ 16 ರನ್​ ಹೆಚ್ಚುವರಿ ನೀಡಿತ್ತು. ತಂಡದ ಸೋಲಿಗೆ ಇದೂ ಕಾರಣ ಎಂದರೆ ತಪ್ಪಾಗದು. 5ನೇ ವಿಕೆಟ್​ ಜಾಗದಲ್ಲಿ ಬೌಲಿಂಗ್​ ಮಾಡಿ ರನ್​ ಕಡಿವಾಣಕ್ಕೆ ಪ್ರಯತ್ನಿಸಿ, ಹೆಚ್ಚು ವೈಡ್​ ಬಾಲ್​ ಹಾಕುತ್ತಿರುವುದು ತಂಡಕ್ಕೆ ಹೊರೆಯಾಗಿದೆ.

ಹಸರಂಗ, ಜೋಶ್​ ತಂಡಕ್ಕೆ ಸೇರ್ಪಡೆ: ಲಂಕಾ ಬೌಲರ್​ ವನಿಂದು ಹಸರಂಗ ಹಾಗೂ ಗಾಯದಿಂದ ಚೇತರಿಸಿಕೊಂಡು ಜೋಶ್ ಹೇಜಲ್‌ವುಡ್ ತಂಡ ಸೇರಿಕೊಂಡಿದ್ದಾರೆ. ಆಡುವ ಬಳಗದಲ್ಲಿ ಯಾವ ನಾಲ್ವರು ವಿದೇಶಿಗರನ್ನು ಉಳಿಸಿಕೊಳ್ಳುವುದು ಎಂಬುದೇ ತಂಡಕ್ಕೆ ತಲೆನೋವಾಗಿದೆ. ಡೇವಿಡ್ ವಿಲ್ಲಿ ಮತ್ತು ವೇಯ್ನ್ ಪಾರ್ನೆಲ್ ಸಹ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ವಾರ್ನರ್​ಗೆ ಜೊತೆಯಾಟದ ಸಮಸ್ಯೆ: ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಡೇವಿಡ್​ ವಾರ್ನರ್​ಗೆ ಸರಿಯಾದ ಜೊತೆಯಾಟ ದೊರೆಯದಿರುವುದು ಸಮಸ್ಯೆಯಾಗಿದೆ. ಕಳೆದ ನಾಲ್ಕು ಪಂದ್ಯದಲ್ಲಿ ವಾರ್ನರ್​ ಮೂರು ಅರ್ಧಶತಕದಿಂದ 209 ರನ್​ ಗಳಿಸಿದ್ದಾರೆ. ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್​ ಬಿರುಸಿನ ಅರ್ಧಶತಕ ಮಾಡಿ ಸಾಥ್​ ನೀಡಿದ್ದರು. ಉಳಿದಂತೆ ಪೃಥ್ವಿ ಶಾ, ಮನೀಶ್ ಪಾಂಡೆ, ಮಿಚೆಲ್ ಮಾರ್ಷ್, ರೋವ್‌ಮನ್ ಪೊವೆಲ್ ಬ್ಯಾಟ್​ ಘರ್ಜಿಸುತ್ತಿಲ್ಲ.

ಮುಖಾಮುಖಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಇದುವರೆಗೆ ಒಟ್ಟು 28 ಪಂದ್ಯಗಳು ನಡೆದಿದ್ದು, ಇದರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಪಂದ್ಯಗಳನ್ನು ಗೆದ್ದಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 10 ಪಂದ್ಯಗಳನ್ನು ಗೆದ್ದಿದೆ. ಕಳೆದ ಮೂರು ಮುಖಾಮುಖಿಯಲ್ಲಿ ಆರ್​ಸಿಬಿಯೇ ಗೆದ್ದುಕೊಂಡಿದೆ.

ಸಂಭಾವ್ಯ ತಂಡಗಳು..: ರಾಯಲ್​ ಚಾಲೆಂಜರ್ಸ್​ ಬೆಂಗಳೂರು: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್/ಮಹಿಪಾಲ್ ಲೊಮ್ರೋರ್, ಗ್ಲೆನ್ ಮ್ಯಾಕ್ಸ್‌ವೆಲ್, ಶಹಬಾಜ್ ಅಹ್ಮದ್, ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ವನಿಂದು ಹಸರಂಗ, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್

ಡೆಲ್ಲಿ ಕ್ಯಾಪಿಟಲ್ಸ್​: ಡೇವಿಡ್ ವಾರ್ನರ್ (ಸಿ), ಪೃಥ್ವಿ ಶಾ, ಮನೀಶ್ ಪಾಂಡೆ, ಮಿಚೆಲ್ ಮಾರ್ಷ್, ರಿಲೀ ರೊಸ್ಸೌ / ರೋವ್‌ಮನ್ ಪೊವೆಲ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಅಭಿಷೇಕ್ ಪೊರೆಲ್ (ವಿಕೆಟ್​ ಕೀಪರ್​), ಕುಲದೀಪ್ ಯಾದವ್, ಅನ್ರಿಚ್ ನಾರ್ಟ್ಜೆ, ಖಲೀಲ್ ಅಹ್ಮದ್ / ಮುಖೇಶ್ ಕುಮಾರ್

ಪಂದ್ಯ: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಧ್ಯಾಹ್ನ 3:30ಕ್ಕೆ ಸ್ಟಾರ್​ ಸ್ಪೋರ್ಟ್ಸ್​ ಮತ್ತು ಜಿಯೋಸಿನಿಮಾದಲ್ಲಿ ನೇರ ಪ್ರಸಾರ.

ಇದನ್ನೂ ಓದಿ: ಆರ್​ಸಿಬಿ ಹಸಿರು ಅಭಿಯಾನ: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಗ್ರೀನ್​ ಜರ್ಸಿ ಮ್ಯಾಚ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.